ದಿಲ್ಲಿಯ ಹಿಂದು ಕಾಲೇಜು ‘ಮದರಸ’ ಆಗುತ್ತಿದೆಯೇ? ಸ್ವಾಮಿ ಪ್ರಶ್ನೆ

Update: 2016-07-12 11:33 GMT

ಹೊಸದಿಲ್ಲಿ,ಜು.12 : ದಿಲ್ಲಿಯ ಖ್ಯಾತ ಹಿಂದು ಕಾಲೇಜು ‘ಮದರಸ’ ಆಗಿ ಮಾರ್ಪಾಡಾಗಿದೆಯೇ ಎಂದು ಪ್ರಶ್ನಿಸಿರುವ ಹಿರಿಯ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ, ಈ ಕಾಲೇಜಿನವಿದ್ಯಾರ್ಥಿನಿಯರಿಗೆ ವಿಧಿಸಲಾಗುವ ಹಾಸ್ಟೆಲ್ ಶುಲ್ಕದಲ್ಲಿ ಗಣನೀಯ ಏರಿಕೆಯ ವಿಚಾರವಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ತಾವು ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸ್ವಾಮಿ ಟ್ವೀಟ್ ಕೂಡ ಮಾಡಿದ್ದಾರೆ.

ದಿಲ್ಲಿ ವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟ ಈ ಕಾಲೇಜಿನಲ್ಲಿಪುರುಷ ವಿದ್ಯಾರ್ಥಿಗಳಿಂದ ರೂ. 47,000 ಹಾಸ್ಟೆಲ್ ಶುಲ್ಕ ಸಂಗ್ರಹಿಸಲಾಗುತ್ತಿದ್ದರೆ,ವಿದ್ಯಾರ್ಥಿನಿಯರಿಂದ ರೂ 82,000 ವಸೂಲು ಮಾಡಲಾಗುತ್ತಿದೆಯೆಂದು ಹಲವು ವಿದ್ಯಾರ್ಥಿನಿಯರು ದೂರಿದ್ದರು. ಕಾಲೇಜಿನ ಹಾಸ್ಟೆಲ್ ಗೆ ಪ್ರವೇಶಾತಿ ಸಂಬಂಧ ಆಡಳಿತ ಮಂಡಳಿ ತಾರತಮ್ಯ ನೀತಿ ಅನುಸರಿಸುತ್ತಿದೆಯೆಂದು ವಿದ್ಯಾರ್ಥಿನಿಯರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News