ಮಹಿಳೆಗೆ 32 ಬಾರಿ ಚೂರಿಯಿಂದ ಇರಿದ ಭೂಪ

Update: 2016-07-14 08:25 GMT

ನೊಯಿಡಾ, ಜು.14: ಜಿಮ್ ಮಾಲಕನೊಬ್ಬ ತನ್ನ ಜೊತೆ ವಾಸವಾಗಿದ್ದ ಮಹಿಳೆಗೆ 32 ಬಾರಿ ಇರಿದು ಗಂಭೀರ ಗಾಯಗೊಳಿಸಿ ಪರಾರಿಯಾದ ಘಟನೆ ನೊಯಿಡಾದ ಸೆಕ್ಟರ್-73ರಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಆರೋಪಿ 28ರ ಹರೆಯದ ವರುಣ್ ಗೊಯೆಲ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಗೋಯಲ್ ಘಾಝಿಯಾಬಾದ್‌ನಲ್ಲಿ ಜಿಮ್‌ವೊಂದನ್ನು ನಡೆಸುತ್ತಿದ್ದಾನೆ.

 ‘‘ ವಿಚ್ಛೇದನ ಪಡೆದಿರುವ ಮಹಿಳೆಯೋರ್ವರು ಗೊಯೆಲ್‌ರೊಂದಿಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಈವೇಳೆ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಉದ್ರಿಕ್ತಗೊಂಡ ಗೋಯೆಲ್ ಅಡುಗೆ ಮನೆಯಲ್ಲಿ ಬಳಸುವ ಚೂರಿಯಿಂದ ಮಹಿಳೆಗೆ 32 ಬಾರಿ ಇರಿದು ಪರಾರಿಯಾಗಿದ್ದಾನೆ. ಸಹಾಯಕ್ಕಾಗಿ ಕೂಗಿದ ಮಹಿಳೆಯನ್ನು ಗಮನಿಸಿದ ನೆರೆ-ಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

 ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಮಹಿಳೆ ರಕ್ತದ ಮಡುವಿನಲ್ಲಿದ್ದರು. ತಕ್ಷಣವೇ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಚೂರಿ ಇರಿತಕ್ಕೆ ಗಂಭೀರವಾಗಿ ಗಾಯಗೊಂಡ ಮಹಿಳೆ, ವರುಣ್ ಗೊಯೆಲ್‌ಗಿಂತ ವಯಸ್ಸಿನಲ್ಲಿ ಐದು ವರ್ಷ ದೊಡ್ಡವರು. ಮಹಿಳೆಗೆ ಜಿಮ್‌ನಲ್ಲಿ ಪರಿಚಿತವಾಗಿದ್ದ ವರುಣ್ ಆಕೆಯ ಲೈವ್-ಇನ್-ಪಾರ್ಟ್ನರ್ ಆಗಿದ್ದ. ಕಳೆದ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ಮಹಿಳೆ ವರುಣ್‌ಗೋಸ್ಕರ ತನ್ನ ಮನೆಯನ್ನು ನೊಯಿಡಾಕ್ಕೆ ಸ್ಥಳಾಂತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News