ಖಾಯಂ ನಿಯೋಜನೆ ವಿವಾದ: ವಾಯುದಳವನ್ನು ನ್ಯಾಯಾಲಯಕ್ಕೆಳೆದ ಮಹಿಳಾ ವಿಂಗ್ ಕಮಾಂಡರ್

Update: 2016-07-14 16:54 GMT

ಹೊಸದಿಲ್ಲಿ, ಜು.14: ಭಾರತೀಯ ವಾಯುಪಡೆಯು ತನಗೆ ಖಾಯಂ ನಿಯೋಜನೆಯನ್ನು ನಿರಾಕರಿಸಿದ ಬಳಿಕ, ವಿಂಗ್ ಕಮಾಂಡರ್ ಪೂಜಾ ಠಾಕೂರ್ ಸಶಸ್ತ್ರ ಸೇನಾ ನ್ಯಾಯಾಧಿಕರಣದ ಮೆಟ್ಟಲೇರಿದ್ದಾರೆ.

ಅವರ ದೂರನ್ನು ಸಶಸ್ತ್ರ ಸೇನಾ ನ್ಯಾಯಾಧಿಕರಣವು ಅಂಗೀಕರಿಸಿದ್ದು, ಇದಕ್ಕೆ 4 ವಾರಗಳೊಳಗೆ ಉತ್ತರಿಸುವಂತೆ ಐಎಎಫ್‌ಗೆ ನಿರ್ದೇಶನ ನೀಡಿದೆಯೆಂದು ಠಾಕೂರ್‌ರ ವಕೀಲ ಸುಧಾಂಶು ಪಾಂಡೆ ತಿಳಿಸಿದ್ದಾರೆ.

ಪೂಜಾ ಠಾಕೂರ್, 2015ರಲ್ಲಿ ರಾಷ್ಟ್ರಪತಿ ಭವನದಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಅಂತಃಸೇವಾ ಗೌರವ ರಕ್ಷೆಯ ನೇತೃತ್ವ ವಹಿಸಿದ ಪ್ರಥಮ ಅಧಿಕಾರಿಣಿ ಎನಿಸಿಕೊಂಡಿದ್ದರು.

 ವಿಶ್ವದ ಅತ್ಯಂತ ಬಲಾಢ್ಯ ವ್ಯಕ್ತಿಗೆ ಜಂಟಿ ಸೇವೆಗಳ ಗೌರವ ರಕ್ಷೆಯ ನೇತೃತ್ವ ವಹಿಸಿದುದು ತನಗೆ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತೆಂದು ಬಳಿಕ ಅವರು ಪ್ರತಿಕ್ರಿಯಿಸಿದ್ದರು. 2000ನೆ ಇಸವಿಯಲ್ಲಿ ಐಎಎಫ್‌ಗೆ ಸೇರಿದ್ದ ಠಾಕೂರ್ ಆಡಳಿತ ಶಾಖೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News