ನಿರ್ಲಕ್ಷ್ಯದ ಪರಮಾವಧಿ: ಟಾರ್ಚ್‌ ಬೆಳಕಿನಲ್ಲಿ ಹೆರಿಗೆ!

Update: 2016-07-20 07:45 GMT

ಕಾಲಸಿ,ಜುಲೈ 20: ಉತ್ತರಾಖಂಡದ ವಿಕಾಸ ಖಂಡ ಎಂಬಲ್ಲಿನ ಜೋಹಡಿ ಗ್ರಾಮದ ಎಎನ್‌ಎಂ ಆರೋಗ್ಯ ಕೇಂದ್ರದಲ್ಲಿ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸಬೇಕಾದ ದುಃಸ್ಥಿತಿ ಬಂದೊದಗಿದೆಯೆಂದು ವರದಿಯಾಗಿದೆ. ವಿದ್ಯುತ್ ಬಿಲ್ ಪಾವತಿಸಿಲ್ಲ ಎಂದು ನೆಪಹೂಡಿ ವಿದ್ಯುತ್ ಇಲಾಖೆ ಈ ಆರೋಗ್ಯಕೇಂದ್ರ ದವಿದ್ಯುತ್ ಸಂಪರ್ಕವನ್ನು ಸ್ಥಗಿತ ಗೊಳಿಸಿದ್ದರಿಂದ ಇಲ್ಲಿ ಟಾರ್ಚ್ ಬೆಳಕಿನಲ್ಲಿ ಹೆರಿಗೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

  ಆದರೆ ವಿದ್ಯುತ್ ಇಲಾಖೆ ಅಧಿಕಾರಿ ಸಂಜಯ್ ಕುಮಾರ್ ಮಾರ್ಚ್‌ನ ನಂತರ ಈ ಆರೋಗ್ಯಕೇಂದ್ರದ ವಿದ್ಯುತ್ ಸಂಪರ್ಕವನ್ನು ಮೊಟಕುಗೊಳಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆನ್ನಲಾಗಿದೆ. ಆದರೆ ಈ ಅಧಿಕಾರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕುರಿತು ತಿಳಿದಿಲ್ಲ ಎನ್ನಲಾಗುತ್ತಿದೆ. ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ಪ್ರದೀಪ್ ಉನಿಯಾಲ್‌ರು ಆರೋಗ್ಯ ನಿರ್ದೇಶನಾಲಯದಿಂದ ಬಜೆ ಟ್ ದೊರಕದಿರುವುದರಿಂದ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಇದೀಗ ಆರೋಗ್ಯಕೇಂದ್ರದ ದುರವಸ್ಥೆಗೆ ಕಾರಣರಾದವರ ವಿರುದ್ಧ ಕ್ರಮ ಜರಗಿಸುವುದಾಗಿಸಂಬಂಧಿತ ಅಧಿಕಾರಿಗಳು ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News