ಗುಜರಾತ್‌ ನಲ್ಲಿ ದಲಿತರ ಮೇಲೆ ಹಲ್ಲೆ: ರಾಜ್ಯದ ಅಲ್ಲಲ್ಲಿ ಹಿಂಸಾಚಾರ

Update: 2016-07-20 09:49 GMT


ಅಹ್ಮದಾಬಾದ್, ಜು.20:ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರ ಮೇಲೆ ನಡೆಸಲಾಗಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ವಿಪಕ್ಷಗಳು ಆಡಳಿತಾರೂಢ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ನ ಅಲ್ಲಲ್ಲಿ ಹಿಂಸಾಚಾರ ಕಂಡು ಬಂದಿದ್ದು,  ಪ್ರತಿಭಟನಾಕಾರರು ಬಸ್ ಗಳಿಗೆ ಬೆಂಕಿ ಹಚ್ಚಿ, ರಸ್ತೆಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಮಂಗಳವಾರ ಕಲ್ಲುತೂರಾಟದ ವೇಳೆ ಗಾಯಗೊಂಡಿದ್ದ  ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಹಮದಾಬಾದ್‌ ಸೇರಿದಂತೆ  ಹಲವು ಕಡೆಗಳಲ್ಲಿ ದಲಿತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಪ್ರತಿಭಟನಾಕಾರರು ಹಲವೆಡೆ ಸರಕಾರಿ ಬಸ್‌ಗಳ ಮೇಲೆ ಕಲ್ಲು  ತೂರಾಟ ನಡೆಸಿದ್ದಾರೆ. ದಲಿತ ಸಮುದಾಯದ ಕೆಲವು ಮಂದಿ  ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ.

ಹೈಲೈಟ್ಸ್
* ಸತ್ತ ದನದ ಚರ್ಮ ಸುಲಿಯುತ್ತಿದ್ದ ದಲಿತರ ಮೇಲೆ ನಡೆಸಲಾಗಿದ್ದ ಹಲ್ಲೆ ಪ್ರಕರಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿರುವುದಾಗಿ  ಗೃಹ ಸಚಿವ ರಾಜನಾಥ್ ಸಿಂಗ್‌ ಲೋಕಸಭೆಗೆ ತಿಳಿಸಿದರು.
* ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಅಥವಾ  ಬೇರೆ ಪಕ್ಷಗಳು ಅಧಿಕಾರದಲ್ಲಿರುವ  ಯಾವುದೇ ರಾಜ್ಯದಲ್ಲಿ  ದಲಿತರ ಮೇಲೆ ದೌರ್ಜನ್ಯ ನಡೆದರೆ ಅದು ದುರದೃಷ್ಟಕರ, ದೇಶದಲ್ಲಿ ಇಂತಹ ಸಾಮಾಜಿಕ ಅನಿಷ್ಟವನ್ನು ಬೇರಿನಿಂದಲೇ ಕಿತ್ತೆಸೆಯುವ ಕಾರ್ಯ ನಡೆಯಬೇಕು -ರಾಜ್‌ನಾಥ್ ಸಿಂಗ್.
* ಹಲ್ಲೆಗೊಳಗಾದ ಯುವಕರಿಗೆ ಕೇಂದ್ರ ಸರಕಾರದಿಂದ ತಲಾ ನಾಲ್ಕು ಲಕ್ಷ ಪರಿಹಾರ ಘೋಷಣೆ, ಗಾಯಗೊಂಡ ಯುವಕರಿಗೆ  ಚಿಕಿತ್ಸೆಯ ವೆಚ್ಚವನ್ನು ಕೇಂದ್ರ ಸರಕಾರ ಭರಿಸಲಿದೆ.
*ಘಟನೆಗೆ ಸಂಬಂಧಿಸಿ ನಾಲ್ವರ ಬಂಧನ. ನಾಲ್ವರು ಪೊಲೀಸರ ಅಮಾನತು.
*ರಾಜ್ಯಸಭೆಯಲ್ಲೂ ಗುಜರಾತ್ ದಲಿತರ ಮೇಲಿನ ಹಲ್ಲೆ ಪ್ರಕರಣದಹಿನ್ನೆಲೆಯಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷಗಳು.
*ಸೌರಾಷ್ಟರ, ಉನಾದಲ್ಲಿ ರಸ್ತೆ ತಡೆ, ವಾಹನಗಳ ಸಂಚಾರ ಎರಡು ದಿನಗಳಿಂದ ಅಸ್ತವ್ತಸ್ತ.
*ದಲಿತರ ಮೇಲೆ ನಡೆಸುತ್ತಿರುವ ಘಟನೆಯ ವಿಡಿಯೋ  ದೃಶ್ಯಗಳು ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್‌ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News