ಪ್ರಿಸ್ಮಾ ಆ್ಯಪ್ ಈಗ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯ

Update: 2016-07-25 08:00 GMT

ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಜನಪ್ರಿಯವಾಗಿರುವ ಫೋಟೊ ಫಿಲ್ಟರ್ ಆ್ಯಪ್ ಪ್ರಿಸ್ಮಾದ ಪರಿಚಯ ನೀಡುವ ಅಗತ್ಯವಿಲ್ಲ. ಇಲ್ಲಿಯ ತನಕ ಈ ಆ್ಯಪ್ ಕೇವಲ ಐಒಎಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಲಭ್ಯವಿದ್ದರೆ, ಈಗ ಅದು ಗೂಗಲ್ ಪ್ಲೇ ಸ್ಟೋರ್‌ನಲ್ಲೂ ನೇರವಾಗಿ ಲಭ್ಯವಿದೆ.

ಕಳೆದ ವಾರ ಈ ಆ್ಯಪ್ ಆಂಡ್ರಾಯ್ಡಾನಲ್ಲಿ ಲಭ್ಯವಿದ್ದರೂ ಅದು ಆಗ ಕೇವಲ ಬೀಟಾಫೇಸ್‌ನಲ್ಲಿತ್ತು. ಹಾಗೂ ಪ್ರಿಸ್ಮಾ ವೆಬ್‌ಸೈಟ್ ಮುಖಾಂತರ ರಿಜಿಸ್ಟರ್‌ಮಾಡಿದವರಿಗೆ ಮಾತ್ರ ಲಭ್ಯವಿತ್ತು. ಮೇಲಾಗಿ ಆಯ್ದ ಕೆಲವು ಮಂದಿಗೆ ಮಾತ್ರ ಈ ಆ್ಯಪ್‌ಗೆ ಲಿಂಕ್ ದೊರೆಯುತ್ತಿತ್ತು.

ಈ ಆ್ಯಪ್ ಚಿತ್ರಗಳನ್ನು ಪೈಂಟಿಂಗ್‌ಗಳಂತೆ ಕಾಣಿಸುವಂತೆ ಮಾಡುತ್ತದೆ ಹಾಗೂ ಖ್ಯಾತ ಕಲಾವಿದರಾದ ಮುಂಕ್, ಪಿಕಾಸೋ ಅವರ ಮಾದರಿಯನ್ನು ಅನುಸರಿಸುತ್ತದೆ, ಎಂಬ ಮಾಹಿತಿ ಗೂಗಲ್ ಪ್ಲೇನಲ್ಲಿ ಲಭ್ಯವಿದೆ.

ಐಒಎಸ್ ಒಂದರಲ್ಲೇ ಈ ಆ್ಯಪ್ ಈವರೆಗೆ 10.6 ಮಿಲಿಯಕ್ಕೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಲ್ಪಟ್ಟಿದೆ. ಅದಕ್ಕೆ ಪ್ರತಿದಿನ 1.55 ಮಿಲಿಯನ್ ಸಕ್ರಿಯ ಬಳಕೆದಾರರಿದ್ದಾರೆ ಎಂದು ದಿ ನೆಕ್ಸ್ಟ್ ವೆಬ್ ವರದಿ ಮಾಡಿದೆ.

ಗೂಗಲ್ ಪ್ಲೇನಲ್ಲೂ ಈ ಆ್ಯಪ್ ಸಾಕಷ್ಟು ಜನಪ್ರಿಯವಾಗಿದ್ದರೂ ಅದರಲ್ಲಿ ಐಒಎಸ್‌ನಲ್ಲಿದ್ದಂತೆ ‘ಸೇವ್’ ಆಯ್ಕೆಯಿಲ್ಲವೆಂದು ಹಲವು ಬಳಕೆದಾರರ ದೂರಾಗಿದೆ. ಆದರೂ ಈ ಆ್ಯಪ್ ಸಾಕಷ್ಟು ಜನಪ್ರಿಯವಾಗಿದ್ದು ಇತರ ಫೊಟೋ ಫಿಲ್ಟರ್ ಆ್ಯಪ್‌ಗಳಿಗೆ ಸ್ಪರ್ಧೆಯೊಡ್ಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News