ಸೆಪ್ಟೆಂಬರ್ 16 ಕ್ಕೆ ಐಫೋನ್ 7 ಬಿಡುಗಡೆ

Update: 2016-07-25 09:15 GMT

ತಂತ್ರಜ್ಞಾನ ಉದ್ಯಮ ಮುಂದಿನ ಐಫೋನ್ ಬಿಡುಗಡೆಗಾಗಿ ಕಾಯುವ ಸಮಯವಿದು. ಈ ಸೆಪ್ಟಂಬರಲ್ಲಿ ಆಪಲ್ ಮೂರು ಐಫೋನ್‌ಗಳನ್ನು ಹೊರತರಲಿದೆ. ಐಫೋನ್ 7, ಐ ಫೋನ್ 7 ಪ್ಲಸ್ ಮತ್ತು ಐ ಫೋನ್ 7 ಪ್ರೊ. ತಂತ್ರಜ್ಞಾನ ಸುದ್ದಿ ಕೊಡುವಲ್ಲಿ ಖ್ಯಾತರಾದ ಇವಾನ್ ಬ್ಲಾಸ್ ಟ್ವೀಟ್ ಮಾಡಿ ಸೆಪ್ಟಂಬರ್ 16ರಂದು ಫೋನ್‌ಗಳ ಬಿಡುಗಡೆಯಾಗುವ ಸುದ್ದಿ ಹೇಳಿದ್ದಾರೆ.

 ಆಪಲ್ ವಿನ್ಯಾಸ ಸರಪಣಿಯಲ್ಲಿ ಎರಡು ವರ್ಷಗಳ ಬದಲಾವಣೆಯನ್ನು ಬಿಟ್ಟಿದೆ. ಐಫೋನ್ 7 ಶ್ರೇಣಿ ಫೋನ್‌ಗಳು ಐಫೋನ್ 6 ಎಸ್ ಫೀಚರ್‌ಗಳನ್ನೇ ಹೊಂದಿರಲಿದೆ. ಆಪಲ್ ಅತಿ ದೊಡ್ಡ ಡಿಸೈನ್ ವಿನ್ಯಾಸ ಐಫೋನ್ 6ರಲ್ಲಿ ಮಾಡಿತ್ತು. ಫೋನಿನ ಹೊರಬದಿ ಹಾಗೇ ಇರಲಿದೆ. ಹಾರ್ಡ್‌ವೇರ್‌ನಲ್ಲಿ ಆಪಲ್ ಬದಲಾವಣೆ ತರುತ್ತಿದೆ. ಹೆಡ್‌ಫೋನ್ ಜಾಕ್ ಕಳಚುವುದು ಮತ್ತು ಕೆಲವು ಕ್ಯಾಮೆರಾ ಅಪ್‌ಗ್ರೇಡ್ ಮಾಡಲಿದೆ.

ಸಾಮಾನ್ಯವಾಗಿ ಎರಡು ವರ್ಷಕ್ಕೊಮ್ಮೆ ಹೊಸ ಆಪಲ್ ಫೋನ್ ಬಿಡುಗಡೆಯಾಗುತ್ತದೆ. ಹಾಗಿದ್ದಲ್ಲಿ 2017ರಲ್ಲೇ ಹೊಸ ವಿನ್ಯಾಸ ಬರಬೇಕು. ಐಫೋನಿಗೆ 10 ವರ್ಷವೂ ಆಗ ಪೂರೈಸಲಿದೆ.

ಈ ಬಾರಿಯ ಕೆಲವು ದೊಡ್ಡ ಬದಲಾವಣೆಗಳು ಫೋನಿನ ಪ್ರೊ ಮಾಡೆಲ್ ಅಲ್ಲಿ ಹೆಚ್ಚುವರಿಯಾಗಿರಲಿದೆ. ಈ ವರ್ಷ ಇದೇ ದೊಡ್ಡ ಲುಕ್ ಬದಲಾವಣೆಯಾಗಲಿದೆ. ಡ್ಯುಯಲ್ ಕ್ಯಾಮೆರಾ ಮತ್ತು ಲೆನ್ಸ್ ಸೆಟಪ್ ಇರಲಿದೆ. ಈ ಎರಡನೇ ಲೆನ್ಸ್‌ನಿಂದ ಏನು ಉಪಯೋಗ ಎನ್ನುವುದು ಸ್ಪಷ್ಟವಾಗಿಲ್ಲ. ಒಂದು ಕ್ಯಾಮರಾವನ್ನು ಬ್ಯಾಕ್‌ಗ್ರೌಂಡ್ ಬ್ಲರ್ ಮಾಡಲು ಬಳಸಬಹುದು ಎನ್ನಲಾಗಿದೆ. ಉತ್ತಮ ಡೈನಾಮಿಕ್ ರೇಂಜ್ ಮತ್ತು ಕಲರ್ ರಿಪ್ರೊಡಕ್ಷನಿಗೆ ಆಪಲ್ ಡ್ಯುಯಲ್ ರೇರ್ ಕ್ಯಾಮೆರಾ ಬಳಸಬಹುದು ಎಂದೂ ಹೇಳಲಾಗಿದೆ.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News