ಎಎನ್-32 ವಿಮಾನ 5ನೆ ದಿನವೂ ಪತ್ತೆಯಿಲ್ಲ: ಪಾರಿಕ್ಕರ್

Update: 2016-07-26 13:29 GMT

ಹೊಸದಿಲ್ಲಿ, ಜು.26: ಕಾಣೆಯಾಗಿರುವ ಎಎನ್-32 ವಿಮಾನದ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಇಂದು 5ನೆ ದಿನವನ್ನು ಮುಗಿಸಿದೆ. ಆದರೆ, ಇಲ್ಲಿಯವರೆಗೆ ಲಭಿಸಿದ ಮುನ್ನಡೆ ವಿಫಲವಾಗಿರುವುದರಿಂದ ಅದರೊಳಗಿದ್ದ 29 ಮಂದಿ ಜೀವಂತವಾಗಿರುವ ಆಸೆ ಕ್ಷೀಣಿಸಿದೆ.
ಶೋಧಕ್ಕೆ ಅಗಾಧ ಸಂಪನ್ಮೂಲ ಬಳಸಲಾಗಿದೆ. ಇಲ್ಲಿವರೆಗಿನ ಎಲ್ಲ ಮುನ್ನಡೆಗಳೂ ವಿಫಲವಾಗಿವೆ. ಯಾವುದೇ ಪ್ರದೇಶದಿಂದ ಹೊರಹೊಮ್ಮುವ ಯಾವುದೇ ಸಂಪರ್ಕ ಅಥವಾ ಶಬ್ದದ ಮೇಲೆ ಗಮನ ಕೇಂದ್ರೀಕರಿಸಲು ತಾವು ಯತ್ನಿಸುತ್ತಿದ್ದೇವೆ. ಕಂಡು ಹಿಡಿದುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಆದರೆ, ಈ ವರೆಗೆ ದೊರೆತಿರುವುದು ಅಂತಹದೇ ಸುಳ್ಳು ಮುನ್ನಡೆಗಳಾಗಿವೆಯೆಂದು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಇಂದು ತಿಳಿಸಿದ್ದಾರೆ.
ಮಾರಿಷಸ್‌ನಿಂದ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ ಸ್ವದೇಶಿ ನಿರ್ಮಿತ ಐಸ್-ಕ್ಲಾಸ್ ಸಂಶೋಧನ ಹಡಗು ‘ಸಾಗರನಿಧಿಯನ್ನು’ ತರಿಸಲಾಗಿದೆ. ಅದು ಯಾವುದೇ ಹಡಗಿಗಿಂತ ಹೆಚ್ಚು ಆಳವನ್ನು ತಲುಪಬಲ್ಲುದು. ಆದರೆ, ಅದಕ್ಕೆ ನಿರ್ದಿಷ್ಟ ಪ್ರದೇಶದ ಅಗತ್ಯವಿರುತ್ತದೆ. ಏಕೆಂದರೆ, ನಿರ್ದಿಷ್ಟವಾದ ಸಣ್ಣ ಪ್ರದೇಶವೊಂದನ್ನು ತೋರಿಸದಿದ್ದಲ್ಲಿ ಸಾಗರದೊಳಗೆ ನುಸುಳುವ ಆಳ ಹಡಗುಗಳು ಹೋಗಲಾರವು. ಅದಕ್ಕಾಗಿ ಕಳೆದ ಬಾರಿ ಡಾರ್ನಿಯರ್ ಅಪಘಾತದ ವೇಳೆ ಜಲಾಂತರ್ಗಾಮಿಯು ಸ್ಥಳವನ್ನು ಗುರುತಿಸಿತ್ತು. ಆ ಬಳಿಕ ತಾವು ಅಲ್ಲಿಗೆ ರಿಲಯನ್ಸ್‌ನ ಆಳ ಹಡಗನ್ನು ಕಳುಹಿಸಿದ್ದೆವು. ಅದು ಪ್ರಾಥಮಿಕ ಗುರುತಿಸುವಿಕೆಯ ಬಳಿಕದ ಕಾರ್ಯಾಚರಣೆಯಾಗಿದೆಯೆಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News