ಕಥೆ ಮತ್ತು ಕವಿತಾ ಪ್ರಶಸ್ತಿ
ಮಾನ್ಯರೆ,
ಮುಂಬೈ ಸಾಹಿತ್ಯ-ಸಾಂಸ್ಕೃತಿಕ, ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದು, ಮುಂಬೈ ಕನ್ನಡ ಸಾಹಿತ್ಯ ಲೋಕ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾಗಲೇ ಇಹಯಾತ್ರೆಯನ್ನು ಮುಗಿಸಿದ ಸುಶೀಲಾ ಸೀತಾರಾಮ ಶೆಟ್ಟಿಯವರ ಸ್ಮರಣಾರ್ಥ ‘ಜಗಜ್ಯೋತಿ ಕಲಾವೃಂದ (ರಿ.) ಮುಂಬೈ’ ವತಿಯಿಂದ ಕಥೆ ಹಾಗೂ ಕವಿತಾ ಪ್ರಶಸ್ತಿಗಳನ್ನು 19 ವರ್ಷಗಳಿಂದ ಆಯೋಜಿಸಲಾಗುತ್ತಿದೆ. 2016ನೆ ವರ್ಷದ ಪ್ರಶಸ್ತಿಗಾಗಿ ಕನ್ನಡದ ಸಮಸ್ತ ಮಹಿಳೆಯರಿಗಾಗಿ ಆಯೋಜಿಸಲಾಗುತ್ತಿರುವ ಅಖಿಲ ಭಾರತ ಮಟ್ಟದ ಈ ಸ್ಪರ್ಧೆ ಎರಡು ವಿಭಾಗಗಳಲ್ಲೂ ಪ್ರತ್ಯೇಕವಾಗಿ ರೂ. 5,000 ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿದೆ.
1 ಈ ಸ್ಪರ್ಧೆ ರಾಷ್ಟ್ರಾದ್ಯಂತದ ಸಮಸ್ತ ಕನ್ನಡದ ಮಹಿಳೆಯರಿಗಾಗಿ.
2. ಪ್ರಕಟನೆಗೆ ಸಿದ್ಧವಾದ ಸ್ವರಚಿತ ಕಥೆ/ಕವಿತಾ ಸಂಗ್ರಹವಾಗಿರಬೇಕು.
3. ಭಾಗವಹಿಸುವವರು ಆಯಾ ವಿಭಾಗಕ್ಕೆ ಒಂದೊಂದು ಸಂಕಲನವನ್ನು ಕಳುಹಿಸಬೇಕು. ಒಬ್ಬರೇ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಹಿಂದೊಮ್ಮೆ ಒಂದು ವಿಭಾಗದಲ್ಲಿ ಪ್ರಶಸ್ತಿ ಪಡೆದವರು ಮತ್ತೊಮ್ಮೆ ಅದೇ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ.
4. ಕಥೆ/ಕವಿತೆಗಳನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು/ಟೈಪ್ ಮಾಡಿಸಬೇಕು. ಕಾರ್ಬನ್ ಪ್ರತಿ, ಝೆರಾಕ್ಸ್ ಹಾಗೂ ಪ್ರಕಟಗೊಂಡ ಹಾಳೆಯ ಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.
5. ಕಥಾ ಪ್ರಶಸ್ತಿಗೆ ಹಸ್ತಪ್ರತಿಯು ಫೂಲ್‌ಸ್ಕೇಪ್ ಹಾಳೆಯ 100 ಪುಟಗಳಿಂದ 130 ಪುಟಗಳ ಮಿತಿಯಲ್ಲಿರಬೇಕು.
6. ಕವನ ಸಂಕಲನದಲ್ಲಿ ಕಡಿಮೆಯೆಂದರೂ 30 ಕವಿತೆಗಳಿರಬೇಕು. ಖಂಡಕಾವ್ಯ/ಚುಟುಕು/ಹನಿಕವನಗಳಾಗಬಾರದು.
7. ಹಸ್ತಪ್ರತಿಯಲ್ಲಿ ಹೆಸರು ನಮೂದಿಸಬಾರದು. ಹೆಸರು, ವಿಳಾಸ, ಪರಿಚಯ, ದೂರವಾಣಿ ಸಂಖ್ಯೆ ಇತ್ತೀಚಿನ ಭಾವಚಿತ್ರದೊಂದಿಗೆ ಹಸ್ತಪ್ರತಿಯ ಜೊತೆಗೆ ಪ್ರತ್ಯೇಕವಾಗಿ ಬರೆದು ಕಳುಹಿಸಬೇಕು.
8. ಪ್ರವೇಶ ಶುಲ್ಕವಿಲ್ಲ. ಸ್ಪರ್ಧೆಗೆ ಬಂದ ಕೃತಿಗಳನ್ನು ಹಿಂದಿರುಗಿಸಲಾಗು ವುದಿಲ್ಲ. ವಿಜೇತರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗುತ್ತದೆ.
ಕೃತಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ: 31.10.2016
ಕೃತಿಗಳನ್ನು ಕಳುಹಿಸಲು ವಿಳಾಸ:
SUKUMAR N. SHETTY,
c/o s.n. shetty associates, pushpahas co-op Hsg so. Ltd, Ground floor behind D.N.S.Bank, Subhash road, Dombivili-west, mumbai-421202
ಮೊ: 9820296840