ಉಚಿತ ವೈಫೈ ವಲಯದಲ್ಲಿ ಇವುಗಳನ್ನು ಮಾಡಲೇಬೇಡಿ

Update: 2016-07-27 05:01 GMT

ಪಾಕ್ ಸ್ಟ್ರೀಟ್‌ನಿಂದ ಆರಂಭಿಸಿ ಕೋಲ್ಕತ್ತಾದಲ್ಲಿ ಸಾರ್ವಜನಿಕ ವೈಫೈ ವ್ಯವಸ್ಥೆ ನೀಡಿ ಬಹಳ ದಿನಗಳೇ ಆಗಿವೆ. ಅಂದಿನಿಂದ ರಾಜ್ಯ ಸರ್ಕಾರವು 200 ಕಿ.ಮೀ. ದೂರದೊಳಗೆ ವೈಫೈ ಸೇವೆ ನೀಡಲು ಸಾಕಷ್ಟು ಯೋಜನೆ ತಯಾರಿಸಿದೆ. ಇತ್ತೀಚೆಗೆ ಮೆಟ್ರೋ ಪ್ರಯಾಣಿಕರಿಗೆ ಕೂಡ ಉಚಿತ ವೈಫೈ ವ್ಯವಸ್ಥೆಯು 14 ಮೆಟ್ರೋ ನಿಲ್ದಾಣಗಳಲ್ಲಿ ದೊರಕಿದೆ. ಆದರೆ ಈ ರಾಜ್ಯದಲ್ಲಿ ಯಾವಾಗಲೂ ಗುರಿ ಉತ್ತಮವಾಗೇ ಇರುತ್ತದೆ. ಆದರೆ ಅದರ ಅನುಷ್ಠಾನ ಚೆನ್ನಾಗಿರುವುದಿಲ್ಲ. ಹೀಗಾಗಿ ಎಲ್ಲರ ತಲೆಯಲ್ಲಿರುವ ಪ್ರಶ್ನೆಯೆಂದರೆ ಇಂಟರ್ನೆಟ್ ವೇಗ ಎಷ್ಟಿದೆ ಎನ್ನುವುದೇ ಆಗಿದೆ. ಆದರೆ ಇದಕ್ಕಿಂತಲೂ ಗಂಭೀರವಾದ ಪ್ರಶ್ನೆಗಳನ್ನು ನಾವು ಎತ್ತಬೇಕಿದೆ. ಉಚಿತ ವೈಫೈ ಹಾಟ್ ಸ್ಪಾಟ್‌ಗಳನ್ನು ಬಳಸುವುದರಿಂದ ನಿಮಗೆ ಮತ್ತು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್‌ಗಳಿಗೆ ಸಮಸ್ಯೆಯಾಗಲಿದೆ. ಅನಧಿಕೃತ ಮೂಲಗಳು ನಿಮ್ಮ ಫೋನ್‌ಗೆ ಉಚಿತ ಹಾಟ್‌ಸ್ಪಾಟ್‌ಗಳ ಮೂಲಕ ಧಾವಿಸಿ ಸಂವೇದನಾಶೀಲ ಡಾಟಾವನ್ನು ಕದಿಯಬಹುದು. ತುರ್ತು ಉದ್ದೇಶಗಳಿಗಾಗಿ ಮಾತ್ರ ಸರ್ಕಾರವು ಉಚಿತ ವೈಫೈ ವ್ಯವಸ್ಥೆ ನೀಡುತ್ತದೆಯೇ ವಿನಾ ಸಂತೋಷಕ್ಕಾಗಿಯಲ್ಲ. ಹೀಗಾಗಿ ಅನಧಿಕೃತ ವ್ಯವಸ್ಥೆಗಳನ್ನು ಲಾಗಿನ್ ಮಾಡುವ ಮೊದಲು ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಮತ್ತು ಸೇವೆ ಒದಗಿಸುವವರ ಜೊತೆಗೆ ಅಧಿಕೃತವಾಗಿ ವ್ಯವಹರಿಸಬೇಕು. ಏಕೆಂದರೆ ಹ್ಯಾಕರ್‌ಗಳು ಖಾಸಗಿ ಡಾಟಾಗಳನ್ನು (ಬ್ಯಾಂಕ್ ವಿವರ, ಇಮೇಲ್ ಪಾಸ್‌ವರ್ಡ್ ಅಥವಾ ಸಾಮಾಜಿಕ ನೆಟ್ವರ್ಕ್ ಅಕೌಂಟ್ ವಿವರ)ಸುಲಭವಾಗಿ ಪಡೆಯಬಹುದು ಎಂದು ಕೋಲ್ಕತ್ತಾ ಪೊಲೀಸ್‌ನ ಸೈಬರ್ ಕ್ರೈಮ್ ಇಲಾಖೆಯ ಹಿರಿಯ ಅಧಿಕಾರಿ ಹೇಳುತ್ತಾರೆ. ಹೀಗಾಗಿ ನಾವು ವೈಫೈ ಹಾಟ್‌ಸ್ಪಾಟ್ ಬಳಸುವುದು ನಿಲ್ಲಿಸಿದ ಮೇಲೆ ನೆಟ್ವರ್ಕ್ ಮತ್ತೊಮ್ಮೆ ಅದೇ ರೇಂಜಿಗೆ ಬಂದಾಗ ಯಾಂತ್ರಿಕವಾಗಿ ಲಾಗಿನ್ ಆಗದಂತೆ ಅದನ್ನು ಮರೆಸಿಬಿಡಲು ವೈಫೈ ಹಾಟ್ ಸ್ಪಾಟ್‌ನಲ್ಲಿ ಫರ್ಗೆಟ್ ದ ನೆಟ್ವರ್ಕ್ ಅನ್ನು ಟಾಪ್ ಮಾಡಬೇಕು. ಉಚಿತ ವೈಫೈ ವಲಯಗಳನ್ನು ಬಳಸುವಾಗ ಗಮನ ಹರಿಸಬೇಕಾದ ಅಂಶಗಳು ಈ ಕೆಳಗಿನಂತಿವೆ:

1. ಬಹು ಮುಖ್ಯವಾದುದೆಂದರೆ ಅಂತರ್ಜಾಲ ಬ್ಯಾಂಕಿಂಗ್ ವ್ಯವಹಾರ ಮಾಡದೆ ಇರುವುದು. ಅನಧಿಕೃತ ವೈಫೈ ಜಾಲದ ಮೂಲಕ ಮಾಡಿದ ಯಾವುದೇ ಬ್ಯಾಂಕ್ ವ್ಯವಹಾರದಲ್ಲಿ ಮಾಹಿತಿ ಕಳ್ಳತನದ ಆತಂಕವಿದೆ. ಹ್ಯಾಕರ್‌ಗಳು ಸುಳ್ಳು ಹೆಸರಲ್ಲಿ ವೈಫೈ ನೆಟ್ವರ್ಕ್ ಹಾಕಿರುತ್ತಾರೆ. ಸಾರ್ವಜನಿಕ ವೈಫೈ ಅಥವಾ ಈಗಾಗಲೇ ಇರುವ ಅಂತಹುದೇ ನೆಟ್ವರ್ಕ್ ಜಾಲ ಬಿಟ್ಟಿರಬಹುದು. ನಿಮ್ಮ ಕಡೆಯಿಂದ ತಪ್ಪಾದಾಗ ಯಾಂತ್ರಿಕವಾಗಿ ಎಲ್ಲಾ ಬ್ರೌಸಿಂಗ್ ವಿವರ ಅವರ ಖಾಸಗಿ ಜಾಲಕ್ಕೆ ಹೋಗುತ್ತದೆ.

2. ವರ್ಚುವಲ್ ಪ್ರೈವೇಟ್ ನೆಟ್ವರ್ಕ್ ಮೂಲಕವೇ ವ್ಯವಹಾರ ಮಾಡುವುದು ಉತ್ತಮ. ಇದು ಬ್ರೌಸಿಂಗ್ ಸೆಷನ್‌ಗಳನ್ನು ರಕ್ಷಿಸುತ್ತದೆ. ವಿಪಿನ್ ಕ್ಲೈಂಟ್ ಟ್ರಾಫಿಕ್‌ನ್ನು ನಿಮ್ಮ ಮತ್ತು ವಿಪಿಎನ್ ಸರ್ವರ್ ಒಳಗೆ ಎನ್‌ಕ್ರಿಪ್ಟ್ ಮಾಡುತ್ತದೆ. ಅಂದರೆ ಯಾರೇ ಹೊರಗಿನವರು ಅದರೊಳಗೆ ಪ್ರವೇಶಿಸಿ ಡಾಟಾ ಕದಿಯುವುದು ಕಷ್ಟವಾಗುತ್ತದೆ.

3. ಯಾವುದೇ ಆ್ಯಪ್ ಅಪ್‌ಡೇಟ್ ಮಾಡಬೇಕಿದ್ದಲ್ಲಿ ಸುಭದ್ರ ಮನೆಯ ಅಥವಾ ಕಚೇರಿ ವೈಫೈ ನೆಟ್ವರ್ಕ್ ಬಳಸುವುದು ಸುರಕ್ಷಿತವೇ ವಿನಾ ಉಚಿತ ಸಾರ್ವಜನಿಕ ವೈಫೈಯಲ್ಲ.

4. ಎರಡು ಹಂತದ ವೆರಿಫಿಕೇಶನ್ ಅಗತ್ಯವಿರುವ ಜಿಮೇಲ್, ಫೇಸ್ಬುಕ್ ಅಥವಾ ಟ್ವಿಟರ್ ಸೇವೆಗಳಿಗೆ ಈ ಫೀಚರ್ ಬಳಸುವುದು ಉತ್ತಮ. ಯಾರಾದರೂ ನಿಮ್ಮ ಪಾಸ್‌ವರ್ಡ್ ಕದಿಯಲು ಪ್ರಯತ್ನಿಸಿದರೂ ಇದು ಹೆಚ್ಚಿನ ರಕ್ಷಣೆ ಕೊಡಲಿದೆ.

5. ಸಾರ್ವಜನಿಕ ವೈಫೈ ನೆಟ್ವರ್ಕ್ ಬಳಸುವಾಗ ಎಂದು ಆರಂಭವಾಗದೆ HTTPS ಯಲ್ಲಿ HTTP ಆರಂಭವಾದದೆ ಜಾಗರೂಕರಾಗಿರಿ. HTTPS ಯಲ್ಲಿ S ಎನ್ನುವುದು ಸುಭದ್ರ ಸಾಕೆಟ್ ಲೇಯರ್ ಆಗಿರುತ್ತದೆ. ಭದ್ರತಾ ಪದರ ಸಕ್ರಿಯವಾಗಿರುವುದರ ಸೂಚನೆಯಾಗಿರುತ್ತದೆ.

6. ಉಚಿತ ವೈಫೈ ಜಾಲದಲ್ಲಿ ಅಶ್ಲೀಲ ವೀಡಿಯೊ ನೋಡುವುದು ಅಥವಾ ಬ್ರೌಸ್ ಮಾಡುವುದು ಬೇಡ. ಅದು ಸಾರ್ವಜನಿಕ ಸಮಸ್ಯೆಗೆ ಕಾರಣವಾಗಬಹುದು. ಇವುಗಳು ಟ್ರಾಜನ್‌ಗಳು ಹುಟ್ಟುವ ಜಾಗವಾಗಿರುತ್ತದೆ.

7. ಸಾರ್ವಜನಿಕ ಜಾಲದಲ್ಲಿದ್ದಾಗ ಕಡತ ಹಂಚಿಕೆಯನ್ನು ಆಫ್ ಮಾಡಿಕೊಳ್ಳಿ.

ಕೃಪೆ: http://timesofindia.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News