ಸರಿಯಾದ ಹೆಜ್ಜೆ ಇಡದೆ ಮನೆ ಕಡೆ ಹೆಜ್ಜೆ ಹಾಕಿದ ಇಂಟರ್ನೆಟ್ ದೈತ್ಯ

Update: 2016-07-28 11:16 GMT

ಇಂಟರ್ನೆಟ್ ಆರಂಭದ ಯುಗದಲ್ಲಿ ಯಾಹೂ ಡೈರೆಕ್ಟರಿ ನಮ್ಮ ಹೋಂ ಪೇಜ್ ಆಗಿದ್ದ ದಿನಗಳು ನೆನಪಿವೆಯೆ? ಕ್ಲಿಕ್ ಮಾಡಬಹುದಾದ ಟ್ರೀ ರಚನೆಯಲ್ಲಿ ಇಂಟರ್ನೆಟನ್ನು ಕ್ಯಾಪ್ಚರ್ ಮಾಡುವುದು, ವಿಭಜಿಸುವುದು ಮತ್ತು ಮುಂದಿಡುವುದು ಮಾಡುತ್ತಿದ್ದೆವು. ಆಗ ಯಾಹೂ ಅತ್ಯುತ್ತಮ ಆಯ್ಕೆ. ಆದರೆ ಯಾಹೂ ನಿಜವಾಗಿಯೂ ಇಂಟರ್ನೆಟ್‌ನಲ್ಲಿ ಪ್ರಭಾವ ಬೀರುತ್ತಿದ್ದ ಕೊನೆಯ ದಿನಗಳಾಗಿದ್ದವು ಅವು.

ಡೈರೆಕ್ಟರಿಗಳನ್ನು ಸರ್ಚ್ ಇಂಜಿನುಗಳು ಬದಲಿಸಿದ ಮೇಲೆ ಮರಳಿ ಬರುವ ಪ್ರಕ್ರಿಯೆಯಲ್ಲಿ ಯಾಹೂ ತನ್ನ ಸರ್ಚ್ ಟೂಲನ್ನು ಗೂಗಲ್‌ನಿಂದ ಔಟ್‌ಸೋರ್ಸ್ ಮಾಡಿತೇ ವಿನಾ ತನ್ನದೇ ಆದ ಟೂಲನ್ನು ಸೃಷ್ಟಿಸಲಿಲ್ಲ. ಹೀಗಾಗಿ ಪ್ರಮುಖ ಸ್ಪರ್ಧಿಯನ್ನು ಮೇಲೆತ್ತಿ ಇಟ್ಟಿತು. ವರ್ಷಗಳಿಂದ ಯಾಹೂ ಇಮೇಲ್, ಸಾಮಾಜಿಕ ತಾಣ, ಪಿಕ್ಚರ್ ಶೇರಿಂಗ್, ಬ್ಲಾಗಿಂಗ್, ಪ್ರಸಾರ, ಇ ಕಾಮರ್ಸ್, ಮೆಸೆಜಿಂಗ್ ಮತ್ತು ಇತರ ವಿಭಾಗಗಳಲ್ಲಿ ಪ್ರಭಾವ ಬೀರಲು ಪ್ರಯತ್ನಿಸಿತು. ಆದರೆ ಟಾಪ್ ಟು ಸ್ಥಾನಕ್ಕೆ ಬರಲೇ ಇಲ್ಲ. ಮತ್ತೆ ಮತ್ತೆ ಹೊಸ ಮಾರುಕಟ್ಟೆಗೆ ತಕ್ಕಂತೆ ಬೆಳೆಯುವಲ್ಲಿ ವಿಫಲವಾಯಿತು. ಆದರೆ ಆ ಮಾರುಕಟ್ಟೆಯ ಬಹಳಷ್ಟು ವಿಷಯಗಳಿಗೆ ನೆಲೆಗಟ್ಟು ಹಾಕಿಕೊಟ್ಟದ್ದೇ ಯಾಹೂ ಎನ್ನುವುದೂ ವಾಸ್ತವ.

ದೊಡ್ಡ ಮಟ್ಟಿಗೆ ಪ್ರಯತ್ನಿಸದೆ ಇರುವುದು ಈಗಿನ ಮಾರುಕಟ್ಟೆಯಲ್ಲಿ ದೊಡ್ಡ ಅಪರಾಧ. ಯಾಹೂ ನಿಧಾನವಾಗಿ ಮರಣದ ಕಡಗೆ ಸಾಗಿದೆ. ಯಾಹೂವನ್ನು 45 ಬಿಲಿಯನ್ ಅಮೆರಿಕನ್ ಡಾಲರಿಗೆ ಪಡೆದುಕೊಳ್ಳಲು ಮೈಕ್ರೋಸಾಫ್ಟ್ ಬಯಸಿತ್ತಾದರೂ ಅದಕ್ಕೆ ಸಂಸ್ಥೆ ಒಪ್ಪಲಿಲ್ಲ. ಅದರ ಪರಿಣಾಮಕಾರಿಯಲ್ಲದ ಮುಖ್ಯ ಕಾರ್ಯಕಾರಿ ಅಧಿಕಾರಿಗಳು ರಿಬ್ರಾಂಡ್ ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಈಗ ಯಾಹೂ ಬ್ರಾಂಡ್ ಮತ್ತು ಉದ್ಯಮವನ್ನು 5 ಬಿಲಿಯನ್ ಡಾಲರಿಗೆ ವೆರಿಜಾನ್ ಸ್ವಾಧೀನ ಮಾಡಿಕೊಳ್ಳುವ ಸುದ್ದಿ ಅಚ್ಚರಿಯೇನಲ್ಲ. ವರ್ಷದಿಂದ ಕಂಪೆನಿ ಮಾರಾಟವಾಗಲು ಪ್ರಯತ್ನಿಸುತ್ತಲೇ ಇದೆ. ಅದು ಮತ್ತೊಂದು ವಿಫಲ ಇಂಟರ್ನೆಟ್ ದೈತ್ಯ ಎಒಎಲ್ ಜೊತೆಗೂಡಲಿದೆ.

ಅಲಿಬಾಬಾ ಮತ್ತು ಯಾಹೂ ಜಪಾನಿನ 40 ಬಿಲಿಯನ್ ಷೇರು ವೆರಿಜಾನ್‌ಗೆ ಮಾರಾಟವಾಗಲಿದೆ. ಯಾಹೂ ಉದ್ಯಮವೂ ಹೆಚ್ಚು ತೆರಿಗೆ ಸಮರ್ಥ ರೀತಿಯಲ್ಲಿ ಮಾರಾಟವಾಗಲಿದೆ. ಗೂಗಲ್ ಬಳಿ ತನ್ನದೇ ಸರ್ಚ್ ಇಂಜಿನ್, ಫೇಸ್‌ಬುಕ್ ಎನ್ನುವ ಸಾಮಾಜಿಕ ತಾಣ, ಅಮೆಜಾನ್‌ನಂತಹ ಇಕಾಮರ್ಸ್ ತಾಣವಿದೆ. ಆದರೆ ಯಾಹೂ ತನ್ನ ಉದ್ಯಮಕ್ಕೆ ನೆಲೆಗಟ್ಟು ಹಾಕದೇ ದೊಡ್ಡ ಪ್ರಯತ್ನಕ್ಕೆ ಕಾಲಿಟ್ಟಿತು. ದೊಡ್ಡ ಉದ್ಯಮಿಯಾಗಬೇಕಾದರೆ ದೊಡ್ಡ ಪ್ರಯತ್ನ ಅಗತ್ಯ. ಮಾರುಕಟ್ಟೆಯಲ್ಲಿ ಎಂದೂ ಯಾಹೂ ಪ್ರಭಾವೀ ಸ್ಪರ್ಧಿ ಆಗಲೇ ಇಲ್ಲ.

ಕೃಪೆ: www.theglobeandmail.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News