ದೇಶದ ಭಿಕ್ಷುಕರಲ್ಲಿ 25% ಮುಸ್ಲಿಮರು !

Update: 2016-07-29 10:34 GMT

       ಹೊಸದಿಲ್ಲಿ, ಜುಲೈ 29: ದೇಶದಲ್ಲಿ ಶೇ.3.7 ಭಿಕ್ಷುಕರಿದ್ದು ಅವರಲ್ಲಿ ಶೇ. 25ರಷ್ಟು ಮುಸ್ಲಿಮರಾಗಿದ್ದಾರೆ ಎಂದು ಕಳೆದ ತಿಂಗಳು ಕೇಂದ್ರ ಸರಕಾರ ಪ್ರಕಟಿಸಿದ ದಾಖಲೆಗಳಿಂದ ಬಹಿರಂಗವಾಗಿದೆ ಎಂದು ವರದಿಯಾಗಿದೆ. ಒಂದು ವಿಭಾಗದ ಜನರಿಗೆ ಸರಕಾರಿ ಯೋಜನೆ ಮತ್ತು ಸೇವೆಗಳು ತಲುಪುತ್ತಿಲ್ಲ ಎಂಬುದನ್ನು ಸರಕಾರದ ಲೆಕ್ಕಗಳೇ ಸೂಚಿಸುತ್ತಿವೆ ಎಂದು ವರದಿ ತಿಳಿಸಿದೆ.

    

  ಆರ್ಥಿಕವಾದ ಯಾವುದೇ ವ್ಯವಹಾರಗಳನ್ನುನಡೆಸದೆ,ಕೃಷಿ ಅಥವಾ ಇನ್ನುಯಾವುದೇ ಕೆಲಸ ಮಾಡದೆ ಇರುವ ನಾನ್ ವರ್ಕರ್ಸ್ ವಿಭಾಗದಲ್ಲಿ ಭಿಕ್ಷಾಟನೆಯಿಂದ ಜೀವಿಸುವವರನ್ನು ಸೇರಿಸಲಾಗಿದೆ. ದೇಶದಲ್ಲಿ 72.89 ಕೋಟಿ ನಿರುದ್ಯೋಗಿಗಳಿದ್ದು(ನಾನ್‌ವರ್ಕರ್ಸ್) ಇವರಲ್ಲಿ ಶೇ. 3.7 ಲಕ್ಷ ಮಂದಿ ಭಿಕ್ಷುಕರು ಸೇರಿದ್ದಾರೆ ಎಂದು ಜನಗಣತಿಯ ದಾಖಲೆಗಳಿಂದ ಬಹಿರಂಗವಾಗಿದೆ ಎನ್ನಲಾಗಿದೆ.

ದೇಶದಲ್ಲಿರುವ ಒಟ್ಟು ಭಿಕ್ಷುಕರಲ್ಲಿ ಶೇ.53.13 ಮಂದಿ ಪುರುಷ ಭಿಕ್ಷುಕರು ಮತ್ತು ಶೇ. 46.87 ಮಂದಿ ಮಹಿಳಾ ಭಿಕ್ಷುಕರಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News