ನಿಮ್ಮ ಪ್ರಕಾರ ಫೇಸ್ ಬುಕ್ , ಟ್ವಿಟ್ಟರ್ ಆಸಕ್ತರ ಸಂಖ್ಯೆ ಹೆಚ್ಚುತ್ತಿದೆಯೇ ? ಇಲ್ಲವೇ ?

Update: 2016-07-29 16:57 GMT

ನಿಮ್ಮ ಪ್ರಕಾರ ಫೇಸ್‌ಬುಕ್, ಟ್ವಿಟ್ಟರ್ ಆಸಕ್ತರ ಸಂಖ್ಯೆ ಹೆಚ್ಚುತ್ತಿದೆಯೇ? ಅಥವಾ ಇಲ್ಲವೇ? ಈ ಕುತೂಹಲ ತಣಿಸುವ ಅಧ್ಯಯನವೊಂದು ನಡೆದಿದೆ. ಇದರ ಫಲಿತಾಂಶ ಏನು ಗೊತ್ತೇ?

ಟ್ವಿಟ್ಟರ್, ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳ ವೀಕ್ಷಣೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂಬ ಅಂಶವನ್ನು ಅಮೆರಿಕದ ಗ್ರಾಹಕ ತೃಪ್ತಿ ಸೂಚ್ಕಂಕ ಬಹಿರಂಗಪಡಿಸಿದೆ.ಈ ಅಧ್ಯಯನದಲ್ಲಿ ಸರ್ಚ್‌ಎಂಜಿನ್, ನ್ಯೂಸ್ ಔಟ್‌ಲೆಟ್, ಸಾಮಾಜಿಕ ಜಾಲತಾಣ ಹಾಗೂ ಇತರ ಇ- ವಹಿವಾಟು ಬಗೆಗಿನ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಆದರೆ ಹಿಂದೆಂದಿಗಿಂತಲೂ ಇವುಗಳನ್ನು ವೀಕ್ಷಿಸುವ ಬಳಕೆದಾರರ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಅಧ್ಯಯನ ಬಹಿರಂಗಗೊಳಿಸಿದೆ.

ಫೇಸ್‌ಬುಕ್ ಹಾಗೂ ಟ್ವಿಟ್ಟರ್ ಬಳಕೆದಾರರ ಸಂಖ್ಯೆ ಕ್ರಮವಾಗಿ ಶೇಕಡ 9 ಹಾಗೂ 8ರಷ್ಟು ಕಡಿಮೆಯಾಗುತ್ತಿದೆ. ಇಂಥ ಇಳಿಕೆಗೆ ಜಾಹೀರಾತುಗಳ ಅಸ್ತಿತ್ವ ಭಾಗಶಃ ಕಾರಣ ಎಂದು ಅಧ್ಯಯನ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News