ವಾಟ್ಸ್‌ಆ್ಯಪ್ ನಲ್ಲಿ 'ಡಿಲೀಟ್' ಲೋಪ ಪತ್ತೆ

Update: 2016-07-31 15:40 GMT

ಖಾಸಗಿತನ ಮತ್ತು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಇರುವ ಕಾರಣ ವ್ಯಾಟ್ಸ್ ಆ್ಯಪ್ ಬಹಳ ಪ್ರಶಂಸೆಗೆ ಒಳಗಾಗಿದೆ. ಆದರೆ ಎನ್‌ಕ್ರಿಪ್ಷನ್ ಇದ್ದಾಕ್ಷಣ ವ್ಯಾಟ್ಸ್ ಆ್ಯಪ್ ಸಂದೇಶಗಳು ಇಣುಕಿ ನೋಡುವವರ ಕಣ್ಣಿನಿಂದ ದೂರವಾಗಿದೆ ಎಂದು ಅರ್ಥವಲ್ಲ. ವ್ಯಾಟ್ಸ್ ಆ್ಯಪ್ ಅಲ್ಲಿರುವ ಒಂದು ಲೋಪಧೋಷದಿಂದಾಗಿ ಡಿಲೀಟ್ ಮಾಡಿದ ಸಂದೇಶಗಳನ್ನೂ ಮರಳಿ ಪಡೆಯಬಹುದಾಗಿದೆ. ಐಫೋನಿನಲ್ಲಿ ಬಳಸಿದಾಗ ವ್ಯಾಟ್ಸ್ ಆ್ಯಪ್ ಚಾಟ್ ಗಳನ್ನು ವಾಸ್ತವದಲ್ಲಿ ಡಿಲೀಟ್ ಮಾಡುವುದಿಲ್ಲ.

 ವ್ಯಾಟ್ಸ್ ಆ್ಯಪ್ ಖಾಸಗಿ ರಕ್ಷಣೆಯಲ್ಲಿರುವ ಈ ಲೋಪವನ್ನು ಐಒಎಸ್ ಸಂಶೋಧಕ ಜೊನಾಥನ್ ಜೆಡ್‌ಜಿಯರ್‌ಸ್ಕಿ ಕಂಡುಹಿಡಿದಿದ್ದಾನೆ. ಈ ಸಮಸ್ಯೆಯನ್ನು ಅವರು ತಮ್ಮ ಬ್ಲಾಗಿನಲ್ಲಿ ವಿವರಿಸಿದ್ದಾರೆ. ವ್ಯಾಟ್ಸ್ ಆ್ಯಪ್ ಸಂದೇಶವನ್ನು ಬಳಕೆದಾರ ಡಿಲೀಟ್ ಮಾಡಿದಾಗ ಅವು ಕೇವಲ ಡಿಲೀಟ್ ಎಂದು ಮಾರ್ಕ್ ಆಗುತ್ತವೆ. ಡಿಲೀಟ್ ಆದ ಸಂದೇಶಗಳ ತತ್ವ ಬದಲಾಗುತ್ತದೆ ಮತ್ತು ವ್ಯಾಟ್ಸ್ ಆ್ಯಪ್ ನಿಂದ ನಷ್ಟವಾಗುತ್ತದೆ. ಆದರೆ ಅದು ಡಾಟಾಬೇಸಿನಿಂದ ಡಿಲೀಟ್ ಆಗಿರುವುದಿಲ್ಲ. ಬದಲಾಗಿ ಡಿಲೀಟ್ ಮಾಡಿದ ಸಂದೇಶಗಳು ಫೊರೆನ್ಸಿಕ್ ಆರ್ಟಿಫ್ಯಾಕ್ಟ್ಸ್‌ಅನ್ನು ಬಿಡುತ್ತವೆ.

ಎಸ್‌ಕ್ಯುಲೈಟ್ ಬಳಸುವ ಯಾವುದೇ ಅಪ್ಲಿಕೇಶನಿನಲ್ಲೂ ಫೊರೆನ್ಸಿಕ್ ಟ್ರೇಸ್ ಇರುತ್ತದೆ. ಏಕೆಂದರೆ ಎಸ್‌ಕ್ಯು ಲೈಟ್ ಡಿಫಾಲ್ಟ್ ಆಗಿ ಐಒಎಸ್ ಅಲ್ಲಿ ಡಾಟಾಬೇಸನ್ನು ನಿರ್ವಾತ ಮಾಡುವುದಿಲ್ಲ. ದಾಖಲೆ ಡಿಲೀಟ್ ಆದಾಗ ಅದು ಫ್ರೀ ಲಿಸ್ಟಿಗೆ ಸೇರುತ್ತದೆ. ಆದರೆ ಈ ಫ್ರೀ ದಾಖಲೆಗಳು ಒಂದರ ಮೇಲೊಂದು ಬರೆದುಹೋಗುವುದಿಲ್ಲ ಎನ್ನುತ್ತಾರೆ ಜೆಡ್‌ಜಿಯರ್‌ಸ್ಕಿ. ನಂತರ ಈ ಫೊರೆನ್ಸಿಕ್ ಟ್ರೇಸ್ ಮತ್ತು ಆರ್ಟಿಫ್ಯಾಕ್ಟನ್ನು ಯಾರೇ ಬೇಕಾದರೂ ಸೂಕ್ತ ಸಾಧನಗಳು ಮತ್ತು ಜ್ಞಾನ ಬಳಸಿ ಪಡೆದುಕೊಳ್ಳಬಹುದು. ಈ ಮಾಹಿತಿ ಸಂಗ್ರಹಿಸುವ ಕೌಶಲ್ಯಪೂರ್ಣ ಐಟಿ ಸಂಶೋಧಕರು ಡಿಲೀಟ್ ಮಾಡಿದ ಸಂದೇಶಗಳು ಮತ್ತು ಚಾಟ್ ಗಳನ್ನು ಮರಳಿ ರೂಪಿಸಬಹುದು.

ಈ ಸಮಸ್ಯೆ ವ್ಯಾಟ್ಸ್ ಆ್ಯಪ್ ಅಲ್ಲಿ ಮಾತ್ರವಲ್ಲ, ಆಪಲ್‌ನ ಐ ಸಂದೇಶಗಳಿಗೂ ಇದೇ ಸಮಸ್ಯೆಗಳಿವೆ. ಕಂಪ್ಯೂಟರ್ ಬಳಕೆದಾರರು ಒಂದು ಆ್ಯಪ್ ಡಿಲೀಟ್ ಮಾಡಬೇಕೆಂದರೆ ಇದೇ ಸಮಸ್ಯೆ ಎದುರಿಸುತ್ತಾರೆ. ಕಂಪ್ಯೂಟರಲ್ಲಿ ನಾವು ಒಂದು ಫೈಲ್ ಡಿಲೀಟ್ ಮಾಡಿದರೆ ಅದು ನಿಜವಾಗಿಯೂ ಡಿಲೀಟ್ ಆಗುವುದಿಲ್ಲ. ಅದು ಬದಲಾಗುತ್ತದೆ ಮತ್ತು ಡಾಟಾ ಸಂಬಂಧಿತ ಫೈಲ್ ಸಂಗ್ರಹವಾಗಿರುವ ಹಾರ್ಡ್ ಡಿಸ್ಕನ್ನು ಮರಳಿ ಬರೆಯುವುದು ಅಥವಾ ಸ್ವಚ್ಛವಾಗಿ ನಿವಾರಿಸದೆ ಹೋದರೆ ಡಿಲೀಟ್ ಆದ ಕಡತಗಳನ್ನು ಮರಳಿಪಡೆಯಬಹುದು. ಆದರೆ ಈ ಬಗ್ಗೆ ಬಳಕೆದಾರರು ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಎಂದು ಸ್ವತಃ ಜೆಡ್‌ಜಿಯರ್‌ಸ್ಕಿ ಹೇಳಿದ್ದಾರೆ. ಈ ಲೋಪವನ್ನು ವ್ಯಾಟ್ಸ್ ಆ್ಯಪ್ ಉದ್ದೇಶಪೂರ್ವಕ ಸೃಷ್ಟಿಸಿಲ್ಲ. ವ್ಯಾಟ್ಸ್ ಆ್ಯಪ್ ನಿಜವಾಗಿಯೂ ಬಳಕೆದಾರರ ಖಾಸಗಿತನದ ಬಗ್ಗೆ ಕಾಳಜಿ ಹೊಂದಿದೆ. ಅದು ಜನರ ಚಾಟ್ ಲಾಗ್ ನೋಡಲು ಬಯಸುವುದಿಲ್ಲ. ಅಲ್ಲದೆ ಹೀಗೆ ಈ ಲೋಪವನ್ನು ಬಳಸಿಕೊಂಡು ಡಾಟಾ ಪಡೆದುಕೊಳ್ಳಬೇಕಾದರೆ ಫೋನ್ ಪರಿಣತರ ಕೈಗೆ ಸಿಗಬೇಕು. ಐಟಿ ಕೌಶಲ್ಯ ಹೊಂದಿದ ವ್ಯಕ್ತಿ ಸೂಕ್ತ ಸಾಧನಗಳಿದ್ದಲ್ಲಿ ಮಾತ್ರ ಇದನ್ನು ಮಾಡಬಹುದಾಗಿದೆ ಎನ್ನುತ್ತಾರೆ ಜೆಡ್‌ಜಿಯರ್‌ಸ್ಕಿ.

ಕೃಪೆ: indiatoday.intoday.in/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News