ಭ್ರಷ್ಟಾಚಾರ ಪ್ರಕರಣ:ಸಿಎಜಿ ಕಚೇರಿಯ ಇಬ್ಬರು ನೌಕರರಿಗೆ ಐದು ವರ್ಷ ಜೈಲು

Update: 2016-08-01 15:28 GMT

ಹೊಸದಿಲ್ಲಿ,ಆ.1: ಭ್ರಷ್ಟ ಮಾರ್ಗಗಳ ಮೂಲಕ ಭಡ್ತಿಗೆ ಪ್ರಯತ್ನಿಸಿದ್ದಕ್ಕಾಗಿ ಮತ್ತು ಇಲಾಖಾ ಪರೀಕ್ಷೆಯಲ್ಲಿನ ತಮ್ಮ ಉತ್ತರ ಪತ್ರಿಕೆಗಳನ್ನು ಬದಲಿಸಿದ್ದಕ್ಕಾಗಿ ಮಹಾ ಲೇಖಪಾಲ(ಸಿಎಜಿ)ರ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ವಿಶೇಷ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಭ್ರಷ್ಟಾಚಾರವು ಮಾನವ ಹಕ್ಕುಗಳನ್ನು ಅಪವೌಲ್ಯಗೊಳಿಸುವುದು ಮಾತ್ರವಲ್ಲ,ಅದು ನಮ್ಮ ಸಂವಿಧಾನದ ಮುಖ್ಯಅಂಶಗಳಾದ ನ್ಯಾಯ ಮತ್ತು ಸಮಾನತೆಯನ್ನೂ ಕಡೆಗಣಿಸುತ್ತದೆ ಎಂದು ಶಿಕ್ಷೆಯನ್ನು ಪ್ರಕಟಿಸಿದ ವಿಶೇಷ ಸಿಬಿಐ ನ್ಯಾಯಾಧೀಶ ಪೀತಾಂಬರ ದತ್ ಅವರು ಹೇಳಿದರು. ಇಬ್ಬರೂ ಅಧಿಕಾರಿಗಳು ಅತ್ಯಂತ ಮಹತ್ವದ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನುವುದನ್ನು ಅವರು ಬೆಟ್ಟು ಮಾಡಿದರು.

ದೋಷಿಗಳ ಪೈಕಿ ರಾಜೇಶ ಕುಮಾರ ಭಾರದ್ವಾಜ್ ಅಕೌಂಟಂಟ್ ಜನರಲ್ ಕಚೇರಿಯಲ್ಲಿ ಕೇರ್‌ಟೇಕರ್ ಆಗಿದ್ದರೆ,ದಿನಕರ ಜೋಶಿ ಅಕೌಂಟಂಟ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News