ಸಂಸತ್ತಿನ ಆವವರಣದಲ್ಲಿ ಸೇನಾ ಟ್ಯಾಂಕರ್!

Update: 2016-08-02 03:34 GMT

ಹೊಸದಿಲ್ಲಿ, ಆ.2: ಪ್ರಮುಖ ಸೇನಾ ಯೋಜನೆಗಳ ವಿಳಂಬ ಮತ್ತು ವೆಚ್ಚದ ಕಾರಣದಿಂದ ಸದಾ ಸಂಸತ್ತಿನ ಸದನ ಸಮಿತಿಯ ಅವಕೃಪೆಗೆ ಒಳಗಾಗುತ್ತಿರುವ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಇದೀಗ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಗರ್ಭಗುಡಿಯಲ್ಲೇ ತನ್ನ ಸಾಧನೆಗಳ ಪ್ರದರ್ಶನಕ್ಕೆ ಮುಂದಾಗಿದೆ.
ದೇಶಾದ್ಯಂತ 52 ಪ್ರಯೋಗಾಲಯಗಳ ಜಾಲ ಹೊಂದಿರುವ ಡಿಆರ್‌ಡಿಓ ಸಂಸತ್ ಭವನದ ಗ್ರಂಥಾಲಯದ ಸುತ್ತಮುತ್ತ ಬುಧವಾರದಿಂದ ಮೂರು ದಿನಗಳ ಕಾಲ ವಸ್ತುಪ್ರದರ್ಶನ ಆಯೋಜಿಸಿದೆ. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಇದನ್ನು ಉದ್ಘಾಟಿಸುವರು.

ಡಿಆರ್‌ಡಿಓ ಅಭಿವೃದ್ಧಿಪಡಿಸಿದ ಹತ್ತು ಹಲವು ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನವನ್ನು ಇದರಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.

290 ಕಿಲೋಮೀಟರ್ ದೂರ ಸಾಮರ್ಥ್ಯದ ಬ್ರಹ್ಮೋಸ್ ಸೂಪರಸ್‌ಸಾನಿಕ್ ಕ್ಷಿಪಣಿ, ಅರ್ಜುನ್ ಮುಖ್ಯ ಯುದ್ಧ ಟ್ಯಾಂಕ್, ವಾಯುಸಂಬಂಧಿ ಮುನ್ಸೂಚನೆ ಮತ್ತು ನಿಯಂತ್ರಣ ವ್ಯವಸ್ಥೆ, ಬಹು ಬ್ಯಾರೆಲ್ ರಾಕೆಟ್ ಲಾಂಚರ್ ಪಿನಾಕಾ, ಎನ್‌ಬಿಸಿ ವಾಹಕಗಳು, ಹಡಗಿನಿಂದ ಉಡಾಯಿಸಬಹುದಾದ ವರುಣಾಸ್ತ್ರ ಟೋರ್ಪೆಡೊದಂಥ ಹತ್ತುಹಲವು ಅತ್ಯಾಧುನಿಕ ಶಸ್ತ್ರಾಸ್ತ್ರ ತಂತ್ರಜ್ಞಾನ ಇಲ್ಲಿ ಪ್ರದರ್ಶನಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News