ಇಂಟರ್ನೆಟ್ ಇಲ್ಲದೆಯೇ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಫೇಸ್ ಬುಕ್ ಬಳಸುವುದು ಹೇಗೆ ?
ಭಾರತದ ಫೇಸ್‌ಬುಕ್ ಬಳಕೆದಾರರಿಗೆ ಸಿಹಿ ಸುದ್ದಿ. ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್‌ನೆಟ್ ಸಂಪರ್ಕ ಇಲ್ಲದಿದ್ದರೂ ಫೇಸ್‌ಬುಕ್ ಲಭ್ಯವಾಗುತ್ತದೆ. ಹಾಗೆ ಮಾಡಲು *325# ಡಯಲ್ ಮಾಡಿದರೆ ಸಾಕು. ಫೋನೆಟ್‌ವಿಷ್ ಜತೆ ಪಾಲುದಾರಿಕೆಯಲ್ಲಿ ಫೇಸ್‌ಬುಕ್ ಇಂಡಿಯಾ ಇದನ್ನು ಸಾಧ್ಯವಾಗಿಸಿದೆ.
ಫೊನೆಟ್‌ವಿಷ್ ಎನ್ನುವುದು ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಡಾಟಾ ವ್ಯವಸ್ಥೆಯಾಗಿದ್ದು, ಇಂಟರ್ಯಾಕ್ಟಿವ್ ಸೇವೆಯನ್ನು ಆಧರಿಸಿರುತ್ತದೆ. ಇದು ಸಾಧನವನ್ನು ಡಾಟಾ ಸಂಪರ್ಕ ಇಲ್ಲದೆಯೂ ಸಂಪರ್ಕಿಸುತ್ತದೆ.
ಈ ವಿಧಾನದ ಮೂಲಕ ಉಚಿತವಾಗಿ ನೀವು ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತದೆ. ಆದರೆ ವಾಲ್ ಪೊಸಿಷನಿಂಗ್, ನೋಟಿಫಿಕೇಶನ್ ಪರಿಶೀಲಿಸಲು, ಸ್ನೇಹಿತರನ್ನು ಸೇರಿಸಿಕೊಳ್ಳಲು ಹಾಗೂ ಅನಿಯಮಿತ ಸಂಪರ್ಕಕ್ಕೆ ದಿನಕ್ಕೆ ಒಂದು ರೂಪಾಯಿ ಪಾವತಿಸಬೇಕಾಗುತ್ತದೆ.
ಮೊಬೈಲ್ ಹ್ಯಾಂಡ್‌ಸೆಟ್‌ನಿಂದ *325# ಡಯಲ್ ಮಾಡಿ ಫೇಸ್‌ಬುಕ್ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ದಾಖಲಿಸಬೇಕಾಗುತ್ತದೆ. ಆ ಬಳಿಕ ಫೇಸ್‌ಬುಕ್ ಫೀಚರ್‌ಗಳು ಲಭ್ಯವಾಗುತ್ತವೆ. ಈ ಸೇವೆ ಸದ್ಯಕ್ಕೆ ಏರ್‌ಟೆಲ್, ಏರ್‌ಸೆಲ್, ಐಡಿಯಾ ಹಾಗೂ ಟಾಟಾ ಡೊಕೊಮೊ ನೆಟ್‌ವರ್ಕ್‌ಗಳಿಗೆ ಸೀಮಿತವಾಗಿದ್ದು, ಶೀಘ್ರದಲ್ಲೇ ವಿಸ್ತರಣೆಯಾಗುವ ಸಾಧ್ಯತೆ ಇದೆ.