ಇನ್ನಷ್ಟು ಪ್ರದೇಶಗಳಿಗೆ ಕರ್ಫ್ಯೂ ವಿಸ್ತರಣೆ

Update: 2016-08-03 18:14 GMT

ಶ್ರೀನಗರ, ಆ.3: ಕಾಶ್ಮೀರದ ಆಸ್ಪತ್ರೆಯೊಂದರ ಬಳಿ, ಪಾಲೆಟ್ ಗಾಯಗಳಿದ್ದ ಯುವಕನೊಬ್ಬನ ಮೃತದೇಹ ಇಂದು ಪತ್ತೆಯಾಗಿದ್ದು, ಪ್ರತಿಭಟನೆಗೆ ಪ್ರಚೋದನೆ ನೀಡಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಕಣಿವೆಯ ಇನ್ನಷ್ಟು ಪ್ರದೇಶಗಳಿಗೆ ಕರ್ಫ್ಯೂವನ್ನು ವಿಸ್ತರಿಸಲಾಗಿದೆ.

ಹೊಟ್ಟೆಯಲ್ಲಿ ದೊಡ್ಡ ರಂಧ್ರದೊಂದಿಗೆ, ರಿಯಾಝ್ ಅಹ್ಮದ್ ಎಂಬಾತನ ಶವ ಎಸ್‌ಎಂಎಚ್‌ಎಸ್ ಆಸ್ಪತ್ರೆಯ ಹೊರಗೆ ಪತ್ತೆಯಾಯಿತೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲಿಗೆ ಆತನ ಸಾವಿಗೆ ಕಾರಣವೇನೆಂಬುದು ಸ್ಪಷ್ಟವಾಗಿರಲಿಲ್ಲ. ಆದರೆ, ಮೃತದೇಹದೊಳಗೆ ಪಾಲೆಟ್‌ಗಳಿರುವುದು ಎಕ್ಸ್-ರೇಯಿಂದ ಪತ್ತೆಯಾಗಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆದರೆ, ವರದಿ ಬರಲು ಕೆಲವು ದಿನಗಳು ತಗಲಬಹುದೆಂದು ಅವರು ಹೇಳಿದ್ದಾರೆ.
ಯುವಕನ ಸಾವಿನ ಹಿನ್ನಲೆಯಲ್ಲಿ ಇಂದು ಮುಂಜಾನೆ ಬಗಿಯಾಸ್ ಹಾಗೂ ನೆರೆಯ ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆದಿವೆಯೆಂದು ಅಧಿಕಾರಿ ತಿಳಿಸಿದ್ದಾರೆ.
ನಿನ್ನೆ ಪುಲ್ವಾಮ ಜಿಲ್ಲೆಯ ಲೇಥ್‌ಪೊರಾದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಯುವಕನೊಬ್ಬ ಸಾವಿಗೀಡಾಗಿದ್ದನು. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಕಣಿವೆಯ ಇನ್ನಷ್ಟು ಪ್ರದೇಶಗಳಿಗೆ ಅಧಿಕಾರಿಗಳು ಕರ್ಫ್ಯೂವನ್ನು ವಿಸ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News