ವೈರಸ್‌ನಿಂದ ನಿಮ್ಮ ಮೊಬೈಲ್‌ಗೆ ಸುರಕ್ಷತೆ ಹೇಗೆ?
ಕಂಪ್ಯೂಟರಿನಂತೆ ಮೊಬೈಲಿಗೂ ಆ್ಯಂಟಿ ವೈರಸ್ ಬೇಕು. ವೈರಸ್ ಆ್ಯಫ್ ಹಾಕಿದರೆ ನಿಮ್ಮ ಫೋನಿನಲ್ಲಿರುವ ಎಲ್ಲಾ ಡಾಟಾ ಮತ್ತು ಆ್ಯಪ್ಸ್ ಮಾಲ್ವರೆಯಿಂದ ಸುರಕ್ಷಿತವಾಗಿರುತ್ತದೆ.
ಭದ್ರತೆ- ಆ್ಯಂಟಿ ವೈರಸ್ ಬೂಸ್ಟ್:
360 ಭದ್ರತೆಯನ್ನು ನೀಡುವ ಇದು ಅತೀ ಜನಪ್ರಿಯ ಆಂಟಿ ವೈರಸ್ ಆ್ಯಪ್. ಸಾಧನದಲ್ಲಿ ಕಡತಗಳನ್ನು ಮಾಲ್ವರೆ ದಾಳಿಯಿಂದ ರಕ್ಷಿಸುತ್ತದೆ. ಇದರಲ್ಲಿ ಸಾಧನ ಕಳೆದುಕೊಂಡರೆ ಬಳಕೆಯಾಗುವ ಆ್ಯಂಟಿ ಥೆಫ್ಟ್ ಸೌಲಭ್ಯವೂ ಇದೆ. ಆ್ಯಪ್ ಲಾಕ್ ಮೂಲಕ ಆ್ಯಪ್ ಗಳನ್ನು ಪಾಸ್ವರ್ಡಿನಿಂದ ರಕ್ಷಿಸಿಕೊಳ್ಳಬಹುದು.
ಆ್ಯಂಟಿ ವೈರಸ್ ಮತ್ತು ಮೊಬೈಲ್ ಭದ್ರತೆ:
ಸಾಧನಗಳನ್ನು ಅಪಾಯಕಾರಿ ವೈರಸ್ ಗಳಿಂದ ಮತ್ತು ಮಾಲ್ವರೆಗಳಿಂದ ರಕ್ಷಿಸಲು ಟ್ರಸ್ಟ್ ಗೋನಿಂದ ಆ್ಯಂಟಿ ವೈರಸ್ ಮತ್ತು ಮೊಬೈಲ್ ಭದ್ರತೆ ವಿನ್ಯಾಸ ಮಾಡಲಾಗಿದೆ. ಇತರ ಆ್ಯಂಟಿ ವೈರಸ್ ಆ್ಯಪ್ ಗಳಂತೆ ಇದೂ ಫೈಲ್ ಸ್ಕಾನಿಂಗ್, ರಿಯಲ್ ಟೈಮ್ ರಕ್ಷಣೆ ಕೊಡುತ್ತದೆ. ಪ್ರೈವಸಿ ಗಾರ್ಡ್ ಕೂಡ ಇದೆ.
ನಾಟನ್ ಸೆಕ್ಯುರಿಟಿ ಆಂಡ್ ಆ್ಯಂಟಿ ವೈರಸ್:
ಆ್ಯಪ್ ಎಲ್ಲಾ ಪರಿಹಾರ ಹೊಂದಿದೆ. ವೈರಸ್ ಗಳಿಂದ ಮೊಬೈಲ್ ಸೆಕ್ಯುರಿಟಿ ಮತ್ತು ರಕ್ಷಣೆ ಹೊಂದಿದೆ. ವಿವಿಧ ಅಪಾಯ ಬಂದಾಗ ಸೂಚನೆ ನೀಡುತ್ತದೆ. ಕಳವು, ನಷ್ಟದ ಸಂದರ್ಭ ಮಾಹಿತಿ ಕದಿಯದಂತೆ ರಕ್ಷಣೆಯಿದೆ.
ಅವಿರಾ ಆ್ಯಂಟಿವೈರಸ್ ಸೆಕ್ಯುರಿಟಿ:
ಹೊಸತಾಗಿದ್ದರೂ ಅವಿರಾ ಜನಪ್ರಿಯವಾಗಿದೆ. ಪ್ರಮುಖ ಕಾರ್ಯಗಳಾದ ಮಾಲ್ವರೆ ಸ್ಕ್ಯಾನ್, ರಿಯಲ್ ಟೈಮ್ ರಕ್ಷಣೆ ಇದೆ. ಸ್ಟೇಜ್‌ಫೈಟ್ ಅಡ್ವೈಸರ್ ಮೊದಲಾದ ಫೀಚರ್ ಗಳಿವೆ. ಕಳವು ನೆರವು, ಪ್ರೈವಸಿ ಫೀಚರುಗಳೂ ಇವೆ.
ಅವಸ್ತ್ ಮೊಬೈಲ್ ಸೆಕ್ಯುರಿಟಿ:
ಅವಸ್ತ್ ಆ್ಯಂಟಿವೈರಸ್ ಅಪ್ಲಿಕೇಶನ್‌ಗಳಲ್ಲಿ ಜನಪ್ರಿಯ ಹೆಸರು. ಆಪನ್ನು 100 ಮಿಲಿಯಕ್ಕೂ ಅಧಿಕ ಮಂದಿ ಬಳಸುತ್ತಿದ್ದಾರೆ. ಇನ್ ಡೆಪ್ತ್ ಡಿವೈಸ್ ಸ್ಕಾನಿಂಗ್, ಆ್ಯಂಟಿ ಥೆಫ್ಟ್ ಮೊದಲಾದ ಫೀಚರ್ ಗಳಿವೆ. ಆದರೆ ಬಹಳ ಹೆವಿ ಆ್ಯಪ್ ಇದು.
ಎವಿಜಿ ಆ್ಯಂಟಿವೈರಸ್ ಸೆಕ್ಯುರಿಟಿ:
ಎವಿಜಿ ಆ್ಯಂಟಿ ಮಾಲ್ವರೆ ಪ್ರೋಗ್ರಾಮ್. ಇದರಲ್ಲಿ ಸಾಕಷ್ಟು ಫೀಚರ್ ಗಳಿವೆ. ಟಾಸ್ಕ್ ಕಿಲ್ಲರ್, ರಿಮೋಟ್ ಡಾಟಾ ವೈಪ್ ಮೊದಲಾದ ಲಾಬಗಳಿವೆ. ಬ್ಯಾಟರಿಯನ್ನು ಮತ್ತು ಸಾಧನದಲ್ಲಿ ಡಾಟಾ ಬಳಕೆ ನಿಯಂತ್ರಿಸಬಹುದು.
ಬಿಟ್‌ಡಿಫೆಂಡರ್ ಆ್ಯಂಟಿವೈರಸ್:
ಉಚಿತ ಆ್ಯಪ್ ಆಗಿದೆ. ಎರಡು ಫೀಚರ್ ಗಳು ಮುಖ್ಯವಾಗಿ ಇವೆ. ಡಿವೈಸ್ ಸ್ಕಾನಿಂಗ್ ಮತ್ತು ಡಿವೈಸ್ ಕ್ಲೀನಿಂಗ್. ರಿಯಲ್ ಟೈಮ್ ರಕ್ಷಣೆ ಕೊಡುತ್ತದೆ. ಆಂಡ್ರಾಯ್ಡಾ ಫೋನಿಗೆ ಹೆಚ್ಚುವರಿ ಬ್ಯಾಟರಿ ಖರ್ಚಾಗುವುದನ್ನು ತಪ್ಪಿಸುತ್ತದೆ.
ಸಿಎಂ ಸೆಕ್ಯುರಿಟಿ:
ಸಿಎಂ ಸೆಕ್ಯುರಿಟಿ ಹೆಸರು ಬಳಸದೆ ವೈರಸ್ ರಕ್ಷಣೆ ಆಪ್ ವಿಷಯ ಮುಗಿಯದು. ಇದರಲ್ಲೂ ಉತ್ತಮ ಮಾಲ್ವರೆ ರಕ್ಷಣೆ ಫೀಚರ್ ಗಳಿವೆ.
ಕೃಪೆ: http://timesofindia.indiatimes.com/