ಮೋದಿ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ ಎನ್‌ಐಸಿ ವಿಜ್ಞಾನಿಗಳು, ಐಟಿ ತಜ್ಞರು

Update: 2016-08-07 03:56 GMT

ಹೊಸದಿಲ್ಲಿ,,ಆ.7: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಡಿಜಿಟಲ್ ಇಂಡಿಯಾ ಯೋಜನೆಯ ಬೆನ್ನೆಲುಬು ಎನಿಸಿದ ನ್ಯಾಷನಲ್ ಇನ್ಫೋರ್ಮಾಟಿಕ್ ಸೆಂಟರ್ (ಎನ್‌ಐಸಿ)ನ ನೂರಾರು ವಿಜ್ಞಾನಿಗಳು ಮತ್ತು ಐಟಿ ತಜ್ಞರು ಪ್ರಧಾನಿ ಕಾರ್ಯಕ್ರಮದಲ್ಲಿ ಪ್ರತಿಭಟನಾರ್ಥವಾಗಿ ಕಪ್ಪುಪಟ್ಟಿ ಧರಿಸಿ ಪಾಲ್ಗೊಂಡಿದ್ದಾರೆ. ಮೋದಿಯವರ "ಮೈ ಗವರ್ನ್‌ಮೆಂಟ್ ಅನಿವರ್ಸರಿ ಸೆಲಬ್ರೇಷನ್"ನ ಸಮಾರೋಪ ಸಮಾರಂಭದ ಟೌನ್‌ಹಾಲ್ ಭಾಷಣ ವೇಳೆ ಶನಿವಾರ ಈ ಘಟನೆ ನಡೆದಿದೆ.

ಇವರು ಪ್ರತಿಭಟಿಸಿದ್ದು, ಈ ಕಾರ್ಯಕ್ರಮದ ವಿರುದ್ಧವಲ್ಲ ಅಥವಾ ತಾವೇ ಕಠಿಣ ಪರಿಶ್ರಮ ವಹಿಸಿ ಯಶಸ್ವಿಯಾದ ಸರ್ಕಾರದ ವೆಬ್ ಆಧರಿತ ಯೋಜನೆಗಳ ಬಗ್ಗೆ ಅಲ್ಲ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ 3000ಕ್ಕೂ ಹೆಚ್ಚು ಮಂದಿ ಎನ್‌ಐಸಿ ವಿಜ್ಞಾನಿಗಳಿಗೆ ನ್ಯಾಯಬದ್ಧವಾಗಿ ನೀಡಬೇಕಾದ ಭಡ್ತಿ ನೀಡಿಲ್ಲ ಎಂದು ಗಮನ ಸೆಳೆಯುವ ಸಲುವಾಗಿ. ಹಲವು ತಿಂಗಳುಗಳಿಂದ ಸಚಿವಾಲಯದ ಕ್ರಮ ವಿರುದ್ಧ ವಿವಿಧ ರೀತಿಯ ಪ್ರತಿಭಟನೆಗಳನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ.
ಜುಲೈ 4ರಿಂದೀಚೆಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಆಗಸ್ಟ್ 23ರಂದು ಸಾಮೂಹಿಕ ಸಾಂದರ್ಭಿಕ ರಜೆ ಮೇಲೆ ತೆರಳಲು ನಿರ್ಧರಿಸಿದ್ದಾರೆ. ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ, ಈ ಸಮಾರಂಭದ ಯಶಸ್ಸಿಗೆ ದುಡಿಯಲು ನಿಯೋಜಿತರಾಗಿದ್ದ 500ಕ್ಕೂ ಹೆಚ್ಚು ಮಂದಿ ಕಪ್ಪುಪಟ್ಟಿಯೊಂದಿಗೇ ಕರ್ತವ್ಯ ನಿರ್ವಹಿಸಿದರು ಎಂದು ಅಖಿಲ ಭಾರತ ಎನ್‌ಐಸಿ ಎಸ್ ಅಂಡ್ ಟಿ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎನ್.ಶೆಟ್ಟಿ ಹೇಳಿದ್ದಾರೆ.
2011ರ ಜನವರಿಯಿಂದಲೂ ಅರ್ಹ ಗ್ರೂಪ್ ಎ ಅಧಿಕಾರಿಗಳಿಗೆ ಭಡ್ತಿ ನೀಡಿಲ್ಲ. 10-11 ವರ್ಷಗಳಿಂದ ಭಡ್ತಿ ಇಲ್ಲದೇ ದುಡಿಯುತ್ತಿದ್ದೇವೆ ಎಂದು ಶೆಟ್ಟಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News