ಲೋಧಾ ಸಮಿತಿ ಶಿಫಾರಸುಗಳು ಅಕ್ರಮ, ಅಸಾಂವಿಧಾನಿಕ: ನ್ಯಾ. ಕಾಟ್ಜು

Update: 2016-08-07 18:34 GMT

 ಹೊಸದಿಲ್ಲಿ, ಆ.7: ಬಿಸಿಸಿಐಯಲ್ಲಿ ಸುಧಾರಣೆಗೆ ಸಂಬಂಧಿಸಿ ಜಸ್ಟೀಸ್ ಲೋಧಾ ಸಮಿತಿಯು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಶಿಫಾರಸುಗಳು ಅಕ್ರಮ ಮತ್ತು ಅಸಾಂವಿಧಾನಿಕವಾಗಿದೆ ಎಂದು ಸುಪ್ರೀಮ್ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೆಯ ಕಾಟ್ಜು ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐ ಸಲಹೆಗಾರನಾಗಿ ನೇಮಕಗೊಂಡಿರುವ ಕಾಟ್ಜು ಅವರು ಈ ಶಿಫಾರಸುಗಳ ಅನುಷ್ಠಾನಕ್ಕೆ ಸಂಬಂಧಿಸಿ ವಿಸ್ತೃತ ನ್ಯಾಯಪೀಠಕ್ಕೆ ಪರಾಮರ್ಶನಾ ಅರ್ಜಿ ಸಲ್ಲಿಸುವಂತೆ ಬಿಸಿಸಿಐಗೆ ಸಲಹೆ ನೀಡಿದ್ದಾರೆ.

  ಸುಪ್ರೀಮ್ ಕೋರ್ಟ್ ಹಾಗೂ ಲೋಧಾ ಸಮಿತಿಯು ತಮಿಳುನಾಡು ಸೊಸೈಟಿ ರಿಜಿಸ್ಟ್ರೇಶನ್ ಆ್ಯಕ್ಟ್‌ನ್ನು ಉಲ್ಲಂಘಿಸಿದೆ. ಬಿಸಿಸಿಐ ನಿಯಮಾವಳಿಯು ತಮಿಳುನಾಡು ಸೊಸೈಟಿ ರಿಜಿಸ್ಟ್ರೇಶನ್ ಆ್ಯಕ್ಟ್ ಪ್ರಕಾರ ರಚಿತವಾಗಿದೆ. ಲೋಧಾ ಕಮಿಟಿ ಮತುತಿ ಸುಪ್ರೀಂ ಕೋರ್ಟ್ ಬಲವಂತವಾಗಿ ಈ ನಿಯಮಾವಳಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಒಂದು ವೇಳೆ ಬಿಸಿಸಿಐ ನಿಯಮಾಳಿಯಲ್ಲಿ ತಿದ್ದುಪಡಿ ತರಲು ವಿಶೇಷ ಸಭೆಯಲ್ಲಿ ಮೂರನೆ ಎರಡರಷ್ಟು ಸದಸ್ಯರ ಒಪ್ಪಿಗೆಯೊಂದಿಗೆ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದರು.

   ಸೊಸೈಟಿಗೆ ತನ್ನ ನಿಯಮವನ್ನು ತಿದ್ದುಪಡಿ ಮಾಡಲು ಅವಕಾಶ ಇದೆ. ಹಣಕಾಸಿನ ಅವ್ಯವಹಾರ ಅಥವಾ ಆಡಳಿತದ ದುರುಪಯೋಗ ಇದ್ದರೆ ಸಹಕಾರಿ ಸಂಘಗಳ ನಿಬಂಧಕರಿಗೆ ದೂರು ಸಲ್ಲಿಸಲು ಅವಕಾಶ ಇದೆ ಎಂದರು. ಸುಪ್ರೀಂ ಕೋರ್ಟ್ ಒಂದು ವೇಳೆ ಬಿಸಿಸಿಐ ಆಡಳಿತದಲ್ಲಿರುವ ಲೋಪದೋಷಗಳನ್ನು ಪತ್ತೆ ಹಚ್ಚಲು ಲೋಧಾ ಸಮಿತಿಯನ್ನು ನೇಮಕ ಮಾಡುವುದರಲ್ಲಿ ತಪ್ಪಿಲ್ಲ. ಸಲ್ಲಿಕೆಯಾದ ವರದಿಯನ್ನು ಸುಪ್ರೀಂ ಕೋರ್ಟ್

 ಪಾರ್ಲಿಮೆಂಟ್ ಮತುತಿ ರಾಜ್ಯವಿಧಾನ ಮಂಡಳಗಳಿಗೆ ಕಳುಹಿಸಬೇಕಿತ್ತು. ಶಿಫಾರಸುಗಳನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ವಿಚಾರ ಚುನಾಯಿತ ಪ್ರತಿನಿಧಿಗಳಿಗೆ ಬಿಟ್ಟದ್ದು. ಪರಿಸ್ಥಿತಿ ಹೀಗಿರುವಾಗ ನ್ಯಾಯಾಂಗ ಯಾವತೂತಿ ಶಾಸಕಾಂಗವಾಗಲು ಸಾಧ್ಯವಿಲ್ಲ ಎಂದು ಕಾಟ್ಜು ಹೇಳಿದರು.

ಒಂದು ವೇಳೆ ಬಿಸಿಸಿಐನ ಸುಧಾರಣೆ ಬಗ್ಗೆ ಮಾತನಾಡುವುದಿದ್ದರೆ , ನ್ಯಾಯಾಂಗದಲ್ಲೂ ಸುಧಾರಣೆ ಅಗತ್ಯ. ಭಾರತದ ನ್ಯಾಯಾಲಯಗಳಲ್ಲಿ 3 ಕೋಟಿ ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ ಎಂದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News