ಅರುಣಾಚಲ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಕಲಿಖೊ ಪುಲ್ ಆತ್ಮಹತ್ಯೆ

Update: 2016-08-09 06:04 GMT

ಇಟ್ನಾನಗರ್, ಆ.9: ಅರುಣಾಚಲ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಕಾಂಗ್ರೆಸ್‌ ನ  ಬಂಡಾಯ ನಾಯಕ ಕಲಿಖೊ ಪುಲ್   ಅವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಖ್ಯ ಮಂತ್ರಿಗಳ ಅಧಿಕೃತ ನಿವಾಸದಲ್ಲಿ  ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಲಿಖೊ ಪುಲ್‌ ಅವರ ಶವ ಪತ್ತೆಯಾಗಿದೆ.  ಮುಖ್ಯ ಮಂತ್ರಿ ಹುದ್ದೆ ಕಳೆದುಕೊಂಡು ತಿಂಗಳಾಗುವ ಮೊದಲೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ

 47ರ ಹರೆಯದ  ಕಲಿಖೊ ಪುಲ್   ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು . ಈ ಕಾರಣದಿಂದಾಗಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.
 2016 ಫೆಬ್ರವರಿ 19ರಿಂದ ಜುಲೈ 13ರವರೆಗೆ ಅರುಣಾಚಲ ಪ್ರದೇಶದ  ಮುಖ್ಯ ಮಂತ್ರಿಯಾಗಿದ್ದ  ಕಲಿಖೊ ಪುಲ್  ಅವರು  ಸುಪ್ರೀಂ ಕೋರ್ಟ್‌‌ನ ಆದೇಶದಂತೆ ಅಧಿಕಾರ ಕಳೆದುಕೊಂಡಿದ್ದರು. ಆದರೆ ಅವರು  ಮುಖ್ಯ ಮಂತ್ರಿಗಳ ಅಧಿಕೃತ ಮನೆಯನ್ನು ತೆರವುಗೊಳಿಸಿರಲಿಲ್ಲ. ಮನೆಯ ತೆರವುಗೊಳಿಸಲು ಸಮಯಾವಕಾಶ ಕೇಳಿದ್ದರು.
  ಕಲಿಖೊ ಪುಲ್ 2003ರಿಂದ 2007ರವರೆಗೆ ಅರುಣಾಚಲ ರಾಜ್ಯ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್‌ನಿಂದ ಹಯುಲಿಯಾಂಗ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಪುಲ್‌ ನಂತರ  ಕಾಂಗ್ರೆಸ್‌ ಬಂಡಾಯ ಶಾಸಕರು ಮತ್ತು  ಬಿಜೆಪಿ ಬೆಂಬಲದೊಂದಿಗೆ ಸರಕಾರ ರಚಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News