ಶೇ.40ರಷ್ಟು ಗುಜರಾತ್ ಸಚಿವರ ವಿರುದ್ಧ ಕ್ರಿಮಿನಲ್ ಕೇಸು!

Update: 2016-08-11 11:06 GMT

 ಹೊಸದಿಲ್ಲಿ, ಆ.11: ಗುಜರಾತ್‌ನ ಸಚಿವರಲ್ಲಿ ಶೇ.40ರಷ್ಟು ಮಂದಿ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿದ್ದು, ಇವರಲ್ಲಿ ಶೇ.84ರಷ್ಟು ಮಂದಿ ಕೋಟ್ಯಧೀಶರಾಗಿದ್ದಾರೆಂದು ಇಲೆಕ್ಷನ್ ವಾಚ್ ಅಸೋಸಿಯೇಶನ್ ಫಾರ್ ಡೆಮಕ್ರಾಟಿಕ್ ರಿಫಾರ್ಮ್ ಎನ್ನುವ ಸಂಘಟನೆ ಬಹಿರಂಗಪಡಿಸಿದೆ ಎಂದು ವರದಿಯಾಗಿದೆ. ಹೊಸ ಮುಖ್ಯಮಂತ್ರಿ ವಿಜಯ್ ರೂಪಾನಿ ಸಹಿತ 25 ಸಚಿವರ ಅಫಿದಾವಿತ್ ಆಧಾರದಲ್ಲಿ ಅದು ಈ ಮಾಹಿತಿ ಬಹಿರಂಗಪಡಿಸಲಾಗಿದೆ ಎಂದು ತಿಳಿದು ಬಂದಿದೆ.

 25 ಸಚಿವರಲ್ಲಿ 10ಸಚಿವರ ವಿರುದ್ಧ ಕ್ರಿಮಿನಲ್ ಕೇಸುಗಳಿವೆ. ಇವರಲ್ಲಿ ಐದು ಮಂದಿ ಕೊಲೆ, ಕೊಲೆಯತ್ನದಂತಹ ಗಂಭೀರ ಕೇಸು ದಾಖಲಾಗಿವೆ.21 ಸಚಿವರು ಕೋಟ್ಯಧಿಪತಿಗಳು ಎಂದು ಇಲೆಕ್ಷನ್ ವಾಚ್ ಅಧ್ಯಯನ ವರದಿಯಲ್ಲಿ ತಿಳಿಸಿದೆ. ಇವರಿಗೆ ಸರಾಸರಿ 7.81ಕೋಟಿಯ ಆಸ್ತಿಯಿದೆ. ಇವರಲ್ಲಿ ಸೋಳಂಕಿ ಪುರುಷೋತ್ತಮ್ ಭಾಯ್ ಓಧವ್‌ಜಿಭಾಯ ಎಲ್ಲರಿಗಿಂತ ಹೆಚ್ಚು ಆಸ್ತಿಹೊಂದಿದ್ದು ಅವರು 37.61ಕೋಟಿರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆನ್ನಲಾಗಿದೆ.

ಕಕಾಡಿಯ ವಲ್ಲಭ್‌ಭಾಯ್ ಗೋಬರ್‌ಭಾಯ್ 28ಕೋ.ರೂಪಾಯಿ, ಪಟೇಲ್ ರೋಹಿತ್‌ಭಾಯ್ ಜಷುಭಾಯ್23 ಕೋ.ರೂ.,ಮುಖ್ಯಮಂತ್ರಿ ರೂಪಾನಿ ಏಳು ಕೋಟಿರೂಪಾಯಿ ಆಸ್ತಿಯ ಮಾಲಕರಾಗಿದ್ದಾರೆ. ಉಪಮುಖ್ಯಮಂತ್ರಿ ನಿತಿನ್ ಕುಮಾರ್ ಪಟೇಲ್‌ರ ಆಸ್ತಿ ಒಂಬತ್ತು ಕೋಟಿ ರೂ., ಸಚಿವ ತದ್ವಿ ಶಬ್ದಶರಣ್ ಭಾಯಿಲಾಲ್‌ಭಾಯಿ 23.76 ಲಕ್ಷ ರೂಪಾಯಿ ಮೌಲ್ಯದ ಅತ್ಯಂತ ಕಡಿಮೆ ಆಸ್ತಿ ಇರುವವರಾಗಿದ್ದಾರೆ.15 ಮಂದಿಗೆ ಪದವಿ, ಅಥವಾ ಉನ್ನತ ಪದವಿ ಇದ್ದರೆ ಉಳಿದ ಹತ್ತು ಮಂದಿ ಪಿಯುಸಿಗಿಂತಲೂ ಕಡಿಮೆ ಶಿಕ್ಷಣ ಹೊಂದಿದವರು ಆಗಿದ್ದಾರೆಂದು ಇಲೆಕ್ಷನ್ ವಾಚ್ ತಿಳಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News