ಸ್ಮಾರ್ಟ್ ಸಿಟಿ ಗುರಿಯಿಂದ ಭಾರತ ಬಹಳಷ್ಟು ದೂರವಿದೆ : ನಾರಾಯಣ ಮೂರ್ತಿ

Update: 2016-08-12 12:54 GMT

ಮುಂಬೈ : ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸುವ ಗುರಿಯಿಂದದೇಶವು ‘ಬಹಳ, ಬಹಳಷ್ಟು ದೂರವಿದೆ,’’ಎಂದು ಇನ್ಫೋಸಿಸ್ ಸಹ-ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

ಇದೇ ಕಾರಣದಿಂದ ತಾನು ಈ ವಿಚಾರದ ಬಗ್ಗೆ ಇಲ್ಲಿಯ ತನಕ ಮಾತನಾಡಿಲ್ಲ,’’ ಎಂದು ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಪ್ರತಿಕ್ರಿಯಿಸುತ್ತಾ ಮೂರ್ತಿ ಹೇಳಿದರು.ನಗರದಲ್ಲಿ ಇಂದು ಮೂರ್ತಿ ‘ಸಿಟಿ ಸಿಸ್ಟಮ್ಸ್’ ಬಗ್ಗೆ ನೀಡಿದ ಭಾಷಣದಲ್ಲಿ ಸ್ಮಾರ್ಟ್ ಸಿಟಿ ಬಗ್ಗೆ ಉಲ್ಲೇಖವೇಇರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರುಮೇಲಿನಂತೆ ಹೇಳಿದರು.
‘‘ನಾನು ಸಾಧಿಸಿ ತೋರಿಸುವವ, ಕೇವಲ ಭಾಷಣ ನೀಡುವವನಲ್ಲ,’’ ಎಂದು ಹೇಳಿದ ಮೂರ್ತಿ, ಮೈಸೂರಿನಲ್ಲಿನ ಇನ್ಫೋಸಿಸ್ ಕ್ಯಾಂಪಸ್ಸಿಗೆ ಭೇಟಿ ನೀಡಿ ಸ್ಮಾರ್ಟ್ ಸಿಟಿ ಹೇಗಿರಬೇಕೆಂದು ತಿಳಿದುಕೊಳ್ಳಿ, ಎಂದುಸಭಿಕರಿಗೆ ಹೇಳಿದರು.
ಇದಕ್ಕೂ ಮುಂಚೆ ಜೆ ಎಸ್ ಡಬ್ಲ್ಯೂ ಲಿಟರೇಚರ್ ಲೈವ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ನೀಡಿದ ಅವರು ನಗರಗಳನ್ನು ಕಾಡುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ‘‘ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಹೂಡಿಕೆಗಳು ಹಾಗೂ ಪ್ರತಿಭೆಗಳು ದೂರ ಸರಿಯಬಹುದು,’’ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ನಿರ್ಲಕ್ಷ್ಯದಿಂದಾಗಿ ಮುಂಬೈ ಸತತವಾಗಿ ಸಮಸ್ಯೆಯೆದುರಿಸುತ್ತಿದೆಯೆಂದರು.
‘‘ಮುಂಬೈ ನಗರವನ್ನು ಏಷ್ಯಾದ ಆರ್ಥಿಕ ಕೇಂದ್ರವನ್ನಾಗಿಸಬೇಕೆಂಬ ಇಚ್ಛೆ 10ರಿಂದ 12 ವರ್ಷಗಳ ಹಿಂದೆ ಇತ್ತು. ಆದರೆ ಆ ಕನಸು ನನಸಾಗಿಸುವ ಹತ್ತಿರಕ್ಕೂ ನಾವು ಬಂದಿಲ್ಲ. ಕಾರಣ ಸರಳ. ಹೂಡಿಕೆಗಳು ಬರುತ್ತಿಲ್ಲ, ಪ್ರತಿಭೆಗಳು ಸಿಗುತ್ತಿಲ್ಲ, ಉತ್ಪಾದನೆ ಕುಂಠಿತಗೊಂಡಿದೆ ಹಾಗೂ ಪ್ರಗತಿ ಕೂಡ ನಿಧಾನಗತಿಯಲ್ಲಿದೆ,’’ಎಂದು ಮೂರ್ತಿ ವಿವರಿಸಿದರು.
‘‘ಕ್ಯಾನ್ಸರ್ ಗಾಯ ಆಳವಾಗಿರುವಾಗಲೂ ನಾವು ಈಗಲೂ ಕೇವಲ ಬ್ಯಾಂಡ್-ಏಡ್ ಹಾಕುತ್ತಿದ್ದೇವೆ,’’ಎಂದು ಅವರು ಹೇಳಿದರು.
‘‘ನಮ್ಮ ನಗರಗಳನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ನಗರಗಳಿಗೆ ಸರಕಾರ ಹೋಲಿಸಬಾರದು. ಬದಲಾಗಿ ತಮ್ಮ ನಗರಗಳನ್ನು ಉತ್ತಮ ಪಡಿಸಲು ಸಾಕಷ್ಟು ಶ್ರಮಿಸುತ್ತಿರುವ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಬ್ರೆಜಿಲ್, ಇಂಡೊನೇಷ್ಯ ಹಾಗೂ ಮಲೇಷ್ಯಾ ದೇಶಗಳತ್ತನಮ್ಮ ಗಮನ ಹರಿಸಬೇಕು,’’ ಎಂದು ಮೂರ್ತಿ ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News