ಕಾಶ್ಮೀರದಲ್ಲಿ ಕರ್ಫ್ಯೂ ಮುಂದುವರಿಕೆ

Update: 2016-08-13 18:32 GMT

ಶ್ರೀನಗರ, ಆ.13: ನಗರ ಕೇಂದ್ರದಲ್ಲಿ 2 ದಿನಗಳ ಧರಣಿ ನಡೆಸಲು ಪ್ರತ್ಯೇಕತಾವಾದಿ ಗಳು ಹಾಕಿಕೊಂಡಿರುವ ಯೋಜನೆಯನ್ನು ತಡೆಯಲು, ಇಡೀ ಶ್ರೀನಗರ ಜಿಲ್ಲೆ ಹಾಗೂ ಅನಂತನಾಗ್ ಪಟ್ಟಣದಲ್ಲಿ ಇಂದು ಕರ್ಫ್ಯೂವನ್ನು ಜಾರಿಯಲ್ಲಿರಿಸಲಾಗಿದೆ.

ನಗರ ಕೇಂದ್ರದ ಲಾಲ್‌ಚೌಕ್‌ನಲ್ಲಿ 2 ದಿನ ಧರಣಿ ನಡೆಸಲು ಕೆಲವು ದುಷ್ಟ ಶಕ್ತಿಗಳು ಯೋಜನೆ ರೂಪಿಸಿವೆ. ಅದನ್ನು ತಡೆಯಲು ಇಡೀ ಶ್ರೀನಗರ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಪಟ್ಟಣದಲ್ಲೂ ಕರ್ಫ್ಯೂ ಚಾಲ್ತಿಯಲ್ಲಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಹಾಗೂ ನಾಳೆ ಲಾಲ್‌ಚೌಕ್‌ನಲ್ಲಿ ‘ಜನಮತ ಗಣನೆ’ ಮೆರವಣಿಗೆ ಯೊಂದನ್ನು ನಡೆಸುವಂತೆ ಸೈಯದ್ ಅಲಿ ಶಾ ಗೀಲಾನಿ, ಮಿರ್ವೈಝ್ ಉಮರ್ ಫಾರೂಕ್ ಹಾಗೂ ಮುಹಮ್ಮದ್ ಯಾಸೀನ್ ಮಲಿಕ್ ನೇತೃತ್ವದ ಪ್ರತ್ಯೇಕತಾವಾದಿ ಪಾಳಯ ಜನರಿಗೆ ಕರೆ ನೀಡಿತ್ತು.
ಇದೇ ವೇಳೆ, ಕಳೆದ ವಾರ ಪೊಲೀಸ್ ಗೋಲಿಬಾರ್‌ನಲ್ಲಿ ಗಾಯಗೊಂಡಿದ್ದ ಸುಹೈಲ್ ಅಹ್ಮದ್ ವಾನಿ ಎಂಬ ಯುವಕ ಇಂದು ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿ ದ್ದಾನೆ. ಇದರೊಂದಿಗೆ ಉಗ್ರವಾದಿ ಬುರ್ಹಾನ್ ವಾನಿ ಹತ್ಯೆಯ ಬಳಿಕ ಕಾಶ್ಮೀರದಲ್ಲಿ ನಡೆಯುತ್ತಿರುವ ಅವ್ಯಾಹತ ಹಿಂಸಾಚಾರದಲ್ಲಿ ಬಲಿಯಾದವರ ಸಂಖ್ಯೆ 56ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News