ಪಾಕಿಸ್ತಾನಕ್ಕೆ ಮೋದಿ ತಿರುಗೇಟು

Update: 2016-08-15 13:38 GMT

ಹೊಸದಿಲ್ಲಿ, ಆ.15: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಲೂಚಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರಗಳ ‘ಸ್ವಾತಂತ್ರವನ್ನು’ ಬಹಿರಂಗವಾಗಿ ಬೆಂಬಲಿಸಿದ್ದಾರೆ.

ಬಲೂಚಿಸ್ತಾನ, ಗಿಲ್ಗಿಟ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರಗಳ ಕುರಿತಾಗಿ ಒಂದಿಷ್ಟು ಮಾತನಾಡಲು ತಾನು ಬಯಸಿದ್ದೇನೆ. ಪ್ರಪಂಚವೇ ಗಮನಿಸುತ್ತಿದೆ. ಬಲೂಚಿಸ್ತಾನ್, ಗಿಲ್ಗಿಟ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರಗಳ ಜನರು ಕಳೆದ ಕೆಲವು ದಿನಗಳಿಂದ ತನಗೆ ಭಾರೀ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಆವರಿಗೆ ತಾನು ಆಭಾರಿಯಾಗಿದ್ದೇನೆ. ಈ ಪಾಕಿಸ್ತಾನಿ ಪ್ರಾಂತ್ಯಗಳ ಜನರು ತನಗೆ ಶುಭ ಹಾರೈಸಿರುವುದು ಅತ್ಯಂತ ಸಂತೋಷ ನೀಡಿದೆಯೆಂದು ಕೆಂಪುಕೋಟೆಯ ಮೇಲಿನಿಂದ ದೇಶವನ್ನುದ್ದೇಶಿಸಿ ಮಾಡಿದ 70ನೆ ಸ್ವಾತಂತ್ರೋತ್ಸವ ಭಾಷಣದಲ್ಲಿ ಅವರು ಹೇಳಿದ್ದಾರೆ.

ಪಾಕಿಸ್ತಾನವು ಬಲೂಚಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರಗಳಲ್ಲಿ ಜನರ ಮೇಲೆ ಯಾಕೆ ದೌರ್ಜನ್ಯ ನಡೆಸುತ್ತಿದೆಯೆಂಬುದನ್ನು ಪ್ರಪಂಚಕ್ಕೆ ವಿವರಿಸುವ ಸಮಯ ಇಸ್ಲಾಮಾಬಾದ್‌ಗೆ ಬಂದಿದೆಯೆಂದು ಕಳೆದ ವಾರ ಮೋದಿ ವಾಗ್ದಾಳಿ ನಡೆಸಿದ್ದರು.

ಭಯೋತ್ಪಾದನೆಯನ್ನು ಬೆಂಬಲಿಸುತ್ತಿರುವುದಕ್ಕಾಗಿ ಪಾಕಿಸ್ತಾನದ ವಿರುದ್ಧ ಕಿಡಿಗಾರಿದ ಅವರು, ಪೇಶಾವರದ ಶಾಲೆಯೊಂದರ ವಿದ್ಯಾರ್ಥಿಗಳನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾಗ, ಭಾರತವು ಸಂತಾಪದಿಂದ ನೀಡಿದ್ದ ಪ್ರತಿಕ್ರಿಯೆಗೆ ಇದು ತೀರಾ ವಿರುದ್ಧವಾಗಿದೆ ಎಂದರು.

ಅದು ಭಾರತದ ಸ್ವಭಾವ. ಆದರೆ, ಇನ್ನೊಂದೆಡೆ ಭಯೋತ್ಪಾದಕರನ್ನು ವೈಭವೀಕರಿಸುತ್ತಿರುವವರನ್ನು ಗಮನಿಸಿ, ಯಾವ ರೀತಿಯ ಜನ ಭಯೋತ್ಪಾದಕರನ್ನು ವೈಭವೀಕರಿಸುತ್ತಾರೆ? ಜನರ ಹತ್ಯೆಯಾದಾಗ ಸಂಭ್ರಮಾಚರಣೆ ಮಾಡುವ ಜನ ಎಂತಹವರು? ಎಂದು ಮೋದಿ ಜುಗುಪ್ಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News