ಕೇರಳ ನರ್ಸ್ ಕೊಲೆಪ್ರಕರಣದಲ್ಲಿ 119 ದಿನಗಳ ಕಸ್ಟಡಿ ಬಳಿಕ ಪತಿಯ ಬಿಡುಗಡೆ!

Update: 2016-08-18 12:08 GMT

ಮಸ್ಕತ್, ಆಗಸ್ಟ್ 18: ಸಲಾಲದಲ್ಲಿ ಎಪ್ರಿಲ್ 20ರಂದು ತಿವಿತಕ್ಕೊಳಗಾಗಿ ಮೃತರಾಗಿದ್ದ ಚಿಕ್ಕುರಾಬಟ್ ಕೊಲೆಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಪತಿಯ ಲಿನ್ಸನ್ ಥಾಮಸ್‌ರನ್ನು ಒಮನ್ ಪೊಲೀಸರು ಬಿಡುಗಡೆಗೊಳಿಸಿದ್ದು, 119 ದಿವಸದ ಕಸ್ಟಡಿಯ ನಂತರ ಲಿನ್ಸನ್‌ರನ್ನು ಬಿಡುಗಡೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

ಹತ್ಯೆಯಾದ ಚಿಕ್ಕು ರಾಬರ್ಟ್, ಸಲಾಲ ಬದರ್ ಅಲ್ ಸಮಾ ಆಸ್ಪತ್ರೆಯಲ್ಲಿ ದಾದಿ ಅಗಿದ್ದರು. ಪತಿ ಲಿನ್ಸನ್ ಕೂಡ ಅದೇ ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದರು. ಎಪ್ರಿಲ್ 20ರಂದು ಚಿಕ್ಕು ರಾತ್ರಿ ಹತ್ತುಗಂಟೆಗೆ ಡ್ಯೂಟಿಗೆ ಬಂದಿರಲಿಲ್ಲ. ನಂತರ ಲಿನ್ಸನ್ ಪತ್ನಿಯನ್ನು ಹುಡುಕುತ್ತಾ ಹೋಗಿದ್ದರು. ಆ ವೇಳೆ ಚಿಕ್ಕು ಮೃತರಾದ ಸ್ಥಿತಿಯಲ್ಲಿ ವಾಸಸ್ಥಳದಲ್ಲಿ ಪತ್ತೆಯಾಗಿದ್ದರು. ಮೃತರಾದ ವೇಳೆ ಚಿಕ್ಕು ಐದು ತಿಂಗಳ ಗರ್ಭಿಣಿಯಾಗಿದ್ದರು. ಅವರ ಕಿವಿಯನ್ನುಕತ್ತರಿಸಿ ಆಭರಣಗಳನ್ನು ಅಪಹರಿಸಲಾಗಿತ್ತು. ಒಮನ್ ಪೊಲೀಸರು ಘಟನೆ ನಡೆದ ದಿವಸದಂದೆ ಪತಿ ಲಿನ್ಸನ್‌ರನ್ನು ಕಸ್ಟಡಿಗೆ ಪಡೆದಿದ್ದರು. ಇದೀಗ ಲಿನ್ಸನ್‌ರನ್ನು ಒವನ್ ಸರಕಾರ ಬಿಡುಗಡೆಗೊಳಿಸಿದ್ದು, ಲಿನ್ಸನ್ ಕೆಲಸ ಮಾಡುವ ಆಸ್ಪತ್ರೆಯ ಅಧಿಕಾರಿಗಳು ಇದನ್ನು ದೃಢೀಕರಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News