ಜಾಟ್ ಹಿಂಸೆ: ಸಿಬಿಐ ತನಿಖೆಗೆ ಹರ್ಯಾಣ ಶಿಫಾರಸು

Update: 2016-08-19 18:44 GMT

ಚಂಡೀಗಢ,ಆ.19: ರಾಜ್ಯದ ವಿತ್ತ ಸಚಿವ ಕ್ಯಾಪ್ಟನ್ ಅಭಿಮನ್ಯು ಅವರ ನಿವಾಸದ ಮೇಲಿನ ದಾಳಿ ಪ್ರಕರಣ ಸೇರಿದಂತೆ ರೋಹ್ಟಕ್‌ನಲ್ಲಿ ನಡೆದ ಜಾಟ್ ಮೀಸಲಾತಿ ಮುಷ್ಕರದ ಸಂದರ್ಭದಲ್ಲಿ ನಡೆದ ದಂಗೆ ಹಾಗೂ ಹಿಂಸಾಚಾರದ ಘಟನೆಗಳ ಬಗ್ಗೆ ಸಿಬಿಐ ತನಿಖೆಗೆ ಹರ್ಯಾಣ ಸರಕಾರವು ಶನಿವಾರ ಶಿಫಾರಸು ಮಾಡಿದೆ.
 ಹರ್ಯಾಣದ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಅವರ ನಿವಾಸ, ಸರಕಾರಿ ಪ್ರವಾಸಿ ಬಂಗಲೆ, ಸಚಿವರ ಮನೆ ಹಾಗೂ ಸರಕಾರಿ ಕಟ್ಟಡ ಸೇರಿದಂತೆ ಸಾರ್ವಜನಿಕ ಅಸ್ತಿಗೆ ಹಾನಿ ಹಾಗೂ ಹಿಂಸಾಚಾರ ಮತ್ತು ಗೂಂಡಾಗಿರಿಗೆ ಕಾರಣವಾದ ಜಾಟ್ ಮುಷ್ಕರವನ್ನು ರಾಜಕೀಯ ಹಾಗೂ ಕ್ರಿಮಿನಲ್ ಹಿನ್ನೆಲೆಯ ದೃಷ್ಟಿಕೋನದೊಂದಿಗೆ ತನಿಖೆ ನಡೆಸಬೇಕೆಂದು ಕೇಂದ್ರ ಸರಕಾರವು ಹರ್ಯಾಣವನ್ನು ಕೋರಿತ್ತು.
    ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಗೆ ಆಗ್ರಹಿಸಿ ಜಾಟ್ ಸಮುದಾಯ ನಡೆಸಿದ ಮುಷ್ಕರದ ಕೇಂದ್ರ ಬಿಂದುವಾದ ರೋಹ್ಟಕ್‌ನಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು ಕೋಟ್ಯಂತರ ರೂ. ವೌಲ್ಯದ ಆಸ್ತಿಪಾಸ್ತಿ ನಾಶವಾಗಿದ್ದವು. ಪ್ರತಿಭಟನಾಕಾರರು ಹಲವಾರು ಸರಕಾರಿ ಹಾಗೂ ಖಾಸಗಿ ಕಟ್ಟಡಗಳಿಗೂ ಹಾನಿ ಯುಂಟು ಮಾಡಿದ್ದರು. ಫೆಬ್ರವರಿ 19ರಂದು ಗುಂಪೊಂದು ವಿತ್ತ ಸಚಿವ ಕ್ಯಾಪ್ಟನ್ ಅಭಿಮನ್ಯು ಅವರ ನಿವಾಸಕ್ಕೆ ನುಗ್ಗಿ ಬೆಂಕಿಹಚ್ಚಿತು ಹಾಗೂ ಅವರ ಕುಟುಂಬದ 9 ಮಂದಿ ಸದಸ್ಯರನ್ನು ಹತ್ಯೆಗೈಯಲು ಯತ್ನಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News