ಕಳ್ಳಭಟ್ಟಿ ಕುಡಿಯುವ ಬದಲು ಮದ್ಯ ಸೇವಿಸಿ: ಲಾಲು ಪ್ರಸಾದ್ ಯಾದವ್ ಸಲಹೆ !

Update: 2016-08-20 10:18 GMT

ಪಾಟ್ನ,ಆಗಸ್ಟ್ 20: ಕಳ್ಳಭಟ್ಟಿ ಕುಡಿದು ಅಪಾಯ ಮೈಮೇಲೆಳೆದುಕೊಳ್ಳುವ ಬದಲು ಮದ್ಯ ಕುಡಿಯಿರಿ ಎಂದು ಬಿಹಾರಿಗಳಿಗೆ ಲಾಲುಪ್ರಸಾದ್ ಯಾದವ್ ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ. ಗೋಪಾಲ್ ಗಂಜ್‌ನಲ್ಲಿ ಕಳ್ಳಭಟ್ಟಿ ಕುಡಿದು 16 ಮಂದಿ ಮೃತರಾದ ಘಟನೆಯ ಹಿನ್ನೆಲೆಯಲ್ಲಿ ಆರ್‌ಜೆಡಿ ನಾಯಕ ಲಾಲೂರಿಂದ ಈ ಸಲಹೆ ಹೊರಬಂದಿದೆ ಎಂದು ವರದಿ ತಿಳಿಸಿದೆ. ಮದ್ಯ ನಿರೋಧದ ಬಳಿಕ ನಿಮಗೆ ಲಭಿಸುತ್ತಿರುವುದು ವಿಷ ಮದ್ಯವಾಗಿದೆ. ಇದರಿಂದ ಪಾಠ ಕಲಿತು ಅತೀ ಅಗತ್ಯವೆಂದಾದರೆ ಸ್ಥಳೀಯವಾಗಿ ಉತ್ಪಾದಿಸುವ ಮದ್ಯವನ್ನು ಸೇವಿಸಿರಿ ಎಂದು ಲಾಲು ಹೇಳಿದ್ದಾರೆ.

 ಬಿಹಾರದಲ್ಲಿ ಟಾಡಾ ಎಂದು ಸ್ಥಳೀಯವಾಗಿ ಉತ್ಪಾದಿಸುವ ಮದ್ಯವನ್ನು ಕರೆಯಲಾಗುತ್ತದೆ. ಆದರೆ ರಾಜ್ಯದಲ್ಲಿ ಟಾಡಾ ಸಹಿತ ಎಲ್ಲ ರೀತಿಯ ಮದ್ಯೋತ್ಪಾದನೆಯನ್ನು ಹಾಗೂ ಬಳಕೆ, ಮಾರಾಟಗಳನ್ನು ನಿತೀಶ್ ಸರಕಾರ ನಿಷೇಧಿಸಿದೆ. ಆರ್‌ಜೆಡಿ ಟಾಡಾನಿಷೇಧವನ್ನು ವಿರೋಧಿಸಿತ್ತು. ಇದರ ನಿಷೇಧವನ್ನುತೆರವು ಗೊಳಿಸಲುಲಾಲು ಪ್ರಸಾದ್ ಯಾದವ್ ಸರಕಾರಕ್ಕೆ ಒತ್ತಡ ಹೇರಿದ್ದರೆಂದು ವರದಿಯಾಗಿತ್ತು. ನಂತರ ನಿತೀಶ್ ಕುಮಾರ್ ಸರಕಾರ ಟಾಡಾದ ನಿಷೇಧವನ್ನು ಹಿಂದೆಗೆದಿತ್ತು. ತುಂಬ ಕಡಿಮೆ ಪ್ರಮಾಣದಲ್ಲಿ ಗ್ರಾಮಪ್ರದೇಶಗಳಲ್ಲಿ ಟಾಡಾ ಲಭಿಸುತ್ತದೆ. ಮತ್ತು ಇದನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಇದನ್ನುತಯಾರಿಸುವ ದಲಿತರ ಪಾಸಿ ಎಂಬ ಪಂಗಡಕ್ಕೆ ನೆರವಾಗಲು ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News