ನಿಮ್ಮ ಮೊಬೈಲ್ ಕಂಪೆನಿ ನಿಮಗೆ ಇಂಟರ್ನೆಟ್ ವಂಚಿಸುತ್ತಿದೆಯೇ ಎಂದು ನೋಡುವುದು ಹೇಗೆ?

Update: 2016-08-21 06:58 GMT

ಆ್ಯಪ್ ಆಧರಿತ ಸೇವೆ ಒದಗಿಸುವವರ ಮೂಲಕ ನೀವು ಕ್ಯಾಬ್ ಒಂದನ್ನು ಬುಕ್ ಮಾಡಬೇಕೆಂದಿದ್ದಲ್ಲಿ ಅಥವಾ ಪ್ರಮುಖ ಆಡಿಯೋ ಅಥವಾ ವೀಡಿಯೊ ಕ್ಲಿಪ್ ಅನ್ನು ಡೌನ್ಲೋಡ್ ಅಥವಾ ಅಪ್ಲೋಡ್ ಮಾಡಬೇಕೆಂದಿದ್ದಲ್ಲಿ ನಿಮ್ಮ ಫೋನಿನ ಡಾಟಾ ಕನೆಕ್ಟಿವಿಟಿ ಕೆಲಸ ಮಾಡುವುದಿಲ್ಲ!

ಇಂತಹ ಹತಾಶ ಕರೆಗಳು ಅಥವಾ ಇನ್ನಿತರ ಸಂದರ್ಭಗಳಲ್ಲಿ ನಿಮ್ಮ ಫೋನಿನ ಡಾಟಾ/ ಇಂಟರ್ನೆಟ್ ಸಂಪರ್ಕ ಕೇವಲ ಇಮೇಲ್ ಅಥವಾ ತಕ್ಷಣದ ಸಂದೇಶ ಕಳುಹಿಸಲು ಮಾತ್ರ ಅವಕಾಶ ಕೊಡುವುದನ್ನು ಗಮನಿಸಿರುತ್ತೀರಿ. ನಿಮ್ಮ ಡಾಟಾ ಸರ್ವಿಸ್ ಒದಗಿಸುವವರು ನಿಮಗೆ ಮೋಸ ಮಾಡುತ್ತಿದ್ದಾರೆಯೆ? ಉದಾಹರಣೆಗೆ: ವೊಡಾಫೋನ್ ಮೊಬೈಲ್ ಕನೆಕ್ಷನ್‌ನಲ್ಲಿ ಒದಗಿಸುವ 3G ಡಾಟಾ ಸೇವೆಯನ್ನು ಪರಿಶೀಲಿಸೋಣ. ಆಘಾತಕಾರಿ ವಿಷಯ ಪತ್ತೆಯಾಗುತ್ತದೆ. ಸುಮಾರು ಶೇ. 80-90ರಷ್ಟು ಪ್ಯಾಕೆಟ್ ನಷ್ಟ ದಾಖಲಾಗಿದೆ. ಡೌನ್ ಲೋಡ್ ವೇಗ0.03 mbps ಮತ್ತು ಅಪ್ ಲೋಡ್ 0 mbps ವೇಗ ಇದ್ದರೂ ನೆಟ್ವರ್ಕ್ ವಿಳಂಬ 3522 ms ರಷ್ಟಿರುತ್ತದೆ.

ಹಾಗಿದ್ದರೆ ನಿಮ್ಮ ಮೊಬೈಲ್ ಡಾಟಾ ಒದಗಿಸುವವರು ನಿಮ್ಮ ಮುಂದಿಡುತ್ತಿರುವ ಕೊಡುಗೆಗಳೇನು ಎಂದು ನೋಡುವ ಸಮಯ ಬಂದಿದೆ.

ಅದನ್ನು ಮಾಡುವ ವಿಧಾನ ಇಲ್ಲಿದೆ: ಟೆಲಿಕಾಂ ನಿಯಂತ್ರಣ ಅಧಿಕಾರಿಗಳು ಬಳಕೆದಾರರು ತಮ್ಮ ಸ್ಮಾರ್ಟ್ ಪೋನ್ ಗಳಲ್ಲಿ ಇಂಟರ್ನೆಟ್ ವೇಗ ಪರೀಕ್ಷಿಸಲು MySpeed( TRAI) ಎನ್ನುವ ಆ್ಯಪ್ ಪರಿಚಯಿಸಿದ್ದಾರೆ. ಈ ಆ್ಯಪ್ ಮೊಬೈಲ್ ಸೇವಾ ಆ್ಯಪ್ ಸ್ಟೋರ್ ನಲ್ಲಿ ಡೌನ್ ಲೋಡಿಗೆ ಲಭ್ಯವಿದೆ ಮತ್ತು ಟೆಲಿಕಾಂ ಸೇವೆ ಒದಗಿಸುವವರು ನೀಡುತ್ತಿರುವ 3G ಅಥವಾ 4G ಸಂಪರ್ಕವನ್ನು ಇಲ್ಲಿ ಪರೀಕ್ಷಿಸಬಹುದು.

ಫೋನಿನಲ್ಲಿ ಸಂಗ್ರಹಿಸಿದ ವೇಗದ ವರದಿಯನ್ನು ನೇರವಾಗಿ ಟ್ರಾಯ್ (ಟೆಲಿಕಾಂ ಪ್ರಾಧಿಕಾರ) ಗೆ ಕಳುಹಿಸುವ ಅವಕಾಶವನ್ನೂ ಈ ಆ್ಯಪ್ ನೀಡಿದೆ. ಹಾಗೆ ಭಾರತವಿಡೀ ಸಿಗುವ ಇಂಟರ್ನೆಟ್ ವೇಗವನ್ನು ಈ ಮೂಲಕ ಪರಿಶೀಲಿಸುವ ಪ್ರಯತ್ನವನ್ನು ಟ್ರಾಯ್ ಮಾಡಿದೆ.

ಕೃಪೆ: ZeeNews

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News