ನಿಮ್ಮ ಮೊಬೈಲನ್ನು ಚಾರ್ಜ್ ಮಾಡುವ ವಿಧಾನ ಸರಿಯಿಲ್ಲ!
ನಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಗಳು ಅತೀ ಕೆಟ್ಟವಾಗಿವೆ ಎನ್ನುವುದು ನಮಗೆ ಗೊತ್ತು. ಆದರೆ ಅದರ ಹೀನಾಯ ಕಾರ್ಯವೈಖರಿಗೆ ನಮ್ಮ ಚಾರ್ಜಿಂಗ್ ಶೈಲಿಯೂ ಕಾರಣ. ನಮ್ಮಲ್ಲಿ ಬಹಳಷ್ಟು ಮಂದಿ ಸ್ಮಾರ್ಟ್‌ಫೋನ್‌ಗಳನ್ನು ಆಗಾಗ್ಗೆ ಚಾರ್ಜ್ ಮಾಡುವುದು ಹಾನಿಕರ ಎಂದುಕೊಂಡು ಪೂರ್ಣ ಖಾಲಿಯಾದ ಮೇಲೆ ಒಂದೇ ಬಾರಿಗೆ ಚಾರ್ಜ್ ಮಾಡುತ್ತಾರೆ. ಆದರೆ ಇದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ.
ಬ್ಯಾಟರಿ ಯುನಿವರ್ಸಿಟಿ ಎಂದೇ ತಿಳಿಯಲಾದ ಬ್ಯಾಟರಿ ಕಂಪನಿ ಕ್ಯಾಡೆಕ್ಸ್ ವೆಬ್‌ತಾಣ ಹೇಳುವ ಪ್ರಕಾರ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವ ಲಿಥಿಯಂ ಅಯಾನ್ ಬಹಳ ಸಂವೇದನಾಶೀಲವಾಗಿದ್ದು, ಬಹಳ ಒತ್ತಡ ಎದುರಿಸುತ್ತವೆ. ಮಾನವರಂತೆ ಹೆಚ್ಚು ಒತ್ತಡ ಹೇರುವುದು ಬ್ಯಾಟರಿಯ ಧೀರ್ಘ ಬಾಳಿಕೆಗೆ ಹಾನಿ ತರಲಿದೆ. ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ಉತ್ತಮ ಗುಣಮಟ್ಟದಲ್ಲಿ ಇಡಬೇಕೆಂದರೆ ಬ್ಯಾಟರಿ ಮುಗಿಯುತ್ತದೆ ಎಂದು ಚಿಂತಿಸುವ ಬದಲು ಕೆಲವು ಬದಲಾವಣೆ ತಂದುಕೊಳ್ಳಿ.
ಪೂರ್ಣ ಚಾರ್ಜ್ ಆದ ಮೇಲೂ ಪ್ಲಗಿನ್ ಮಾಡಬೇಡಿ
ಬ್ಯಾಟರಿ ಯುನಿವರ್ಸಿಟಿ ಪ್ರಕಾರ ಪೂರ್ಣವಾಗಿ ಚಾರ್ಜ್ ಆದ ಮೇಲೂ ಬ್ಯಾಟರಿಯನ್ನು ರಾತ್ರಿಯಿಡೀ ಪ್ಲಗಿನ್ ಮಾಡುವುದು ಬ್ಯಾಟರಿಯ ಧೀರ್ಘ ಬಾಳಿಕೆಗೆ ಹಾನಿಕರ. ಒಮ್ಮೆ ನಿಮ್ಮ ಸ್ಮಾರ್ಟ್‌ಫೋನ್ ಶೇ. 100 ತಲುಪಿದ ಮೇಲೆ ಅದನ್ನು ಶೇ. 100ಕ್ಕೇ ಉಳಿಸಲು ಅದು ನಿಧಾನವಾಗಿ ಚಾರ್ಜ್ ಮಾಡುತ್ತದೆ. ಅದರಿಂದ ಬ್ಯಾಟರಿ ಮೇಲೆ ಅಧಿಕ ಒತ್ತಡ, ಹೈಟೆನ್ಷನ್ ಸ್ಥಿತಿ ಬಂದು ಒಳಗಿನ ಕೆಮೆಸ್ಟ್ರಿ ಸವೆಯುತ್ತದೆ. ಪೂರ್ಣವಾಗಿ ಚಾರ್ಜ್ ಮಾಡಿದಾಗ ಬ್ಯಾಟರಿ ತೆಗೆಯಬೇಕು. ಇದು ಒಂದು ರೀತಿಯಲ್ಲಿ ಅತೀ ಕೆಲಸ ಮಾಡಿದ ಸ್ನಾಯುಗಳಿಗೆ ರಿಲ್ಯಾಕ್ಸ್ ಕೊಡುವ ರೀತಿಯೇ ಆಗಿದೆ.
ಶೇ. 100 ಚಾರ್ಜ್ ಮಾಡಲೇಬೇಡಿ!
ಲಿ ಅಯಾನ್‌ಗೆ ಪೂರ್ಣ ಚಾರ್ಜಿಂಗ್ ಅಗತ್ಯವಿಲ್ಲ. ಪೂರ್ಣ ಚಾರ್ಜ್ ಮಾಡುವ ಅಗತ್ಯವೇ ಇಲ್ಲ. ಏಕೆಂದರೆ ಹೈ ವೋಲ್ಟೇಜ್ ಬ್ಯಾಟರಿ ಮೇಲೆ ಒತ್ತಡ ಹಾಕುತ್ತದೆ. ಹೀಗಾಗಿ ಧೀರ್ಘ ಕಾಲದಲ್ಲಿ ಅದು ಸವೆಯುತ್ತದೆ. ಹೀಗಾಗಿ ಇಡೀ ದಿನ ಸ್ಮಾರ್ಟ್ ಫೋನನ್ನು ಎಲ್ಲೋ ಚಾರ್ಜ್ ಮಾಡುತ್ತಿರುವ ಬದಲಾಗಿ ಎಲ್ಲೋ ಒಂದು ಕಡೆ ಅವಕಾಶ ಸಿಕ್ಕಾಗ ಚಾರ್ಜ್ ಮಾಡಿಕೊಳ್ಳುವುದೇ ಉತ್ತಮ.
ಅವಕಾಶ ಸಿಕ್ಕಾಗ ಫೋನ್ ಚಾರ್ಜ್ ಮಾಡಿ
ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿಗಳು ಪೂರ್ಣ ಖಾಲಿಯಾದ ಮೇಲೆ ದೊಡ್ಡ ಚಾರ್ಜಿಂಗ್ ಸೆಷನ್ ಬದಲಾಗಿ ಅವಕಾಶ ಸಿಕ್ಕಾಗೆಲ್ಲ ಚಾರ್ಜ್ ಆಗುತ್ತಿದ್ದರೆ ಖುಷಿಪಡುತ್ತವೆ. ಫೋನಿನಲ್ಲಿ ಶೇ. 10ರಷ್ಟು ಬ್ಯಾಟರಿ ಖಾಲಿಯಾದಾಗ ಅದನ್ನು ಚಾರ್ಜ್ ಮಾಡುವುದು ಉತ್ತಮ. ಬಹಳಷ್ಟು ಮಂದಿ ಅದನ್ನು ಪ್ರಯತ್ನಿಸುವುದಿಲ್ಲ. ಹೀಗಾಗಿ ನಿಮಗೆ ಸಾಧ್ಯವಾದಾಗಲೆಲ್ಲ ಅದನ್ನು ಪ್ಲಗಿನ್ ಮಾಡಿ. ದಿನಕ್ಕೆ ಹಲವು ಸಲ ಪ್ಲಗ್ ಮತ್ತು ಅನ್ ಪ್ಲಗ್ ಮಾಡುತ್ತಿರಿ. ಇದು ನಿಮ್ಮ ಸ್ಮಾರ್ಟ್‌ಫೋನಿನ ಬ್ಯಾಟರಿಯನ್ನು ದೀರ್ಘ ಕಾಲ ಉಳಿಸುವ ಜೊತೆಗೆ ಇಡೀದಿನ ಬಾಳಿಕೆಯೂ ಬರುತ್ತದೆ. ಕಾಲ ಕಾಲಕ್ಕೆ ಟಾಪಪ್ ಮಾಡಿದರೆ ಹೆಚ್ಚು ಬ್ಯಾಟರಿ ಬಳಸುವ ಫೀಚರ್‌ಗಳನ್ನೂ ನೀವು ಬಳಸಿಕೊಳ್ಳಬಹುದು. ಸ್ಮಾರ್ಟ್‌ಫೋನಿನ ಜಿಪಿಎಸ್ ಆಂಟೆನಾ ಬಳಸುವ ಸ್ಥಳ ಆಧಾರಿತ ಫೀಚರ್‌ಗಳನ್ನೂ ಬಳಸಬಹುದು.
ಕೂಲ್ ಆಗಿ ಇಡಿ
ಸ್ಮಾರ್ಟ್‌ಫೋನ್‌ಗಳು ಬಹಳ ಸಂವೇದನಾಶೀಲವಾಗಿರುವ ಕಾರಣ ಅದನ್ನು ಚಾರ್ಜ್ ಮಾಡುವಾಗ ಐಫೋನಿನಿಂದ ಬಿಸಿ ಪಡೆದುಕೊಳ್ಳುತ್ತವೆ. ಚಾರ್ಜ್ ಮಾಡುವಾಗ ಮೊಬೈಲ್ ಬಿಸಿಯಾದಲ್ಲಿ ಅದನ್ನು ಮೊದಲು ಕೇಸಿನಿಂದ ಹೊರಗೆ ತೆಗೆಯಿರಿ. ಬಿಸಿಲಿಗೆ ಹೋದಾಗ ಫೋನನ್ನು ಕವರಲ್ಲಿಡಿ. ಅದು ಬ್ಯಾಟರಿಯನ್ನು ಹೆಚ್ಚು ಕಾಲ ಬಾಳುವಂತೆ ಮಾಡುತ್ತದೆ.
ಕೃಪೆ: www.businessinsider.in