ಐಫೋನ್ 7 ಮತ್ತು 7 ಪ್ಲಸ್ : ಹತ್ತು ಹೊಸ ಫೀಚರ್ ಗಳು

Update: 2016-09-08 06:41 GMT

ಮುಂಬೈ,ಸೆ.8 : ಬಹು ನಿರೀಕ್ಷಿತ ಐ ಫೋನ್ 7 ಹಾಗೂ ಐಫೋನ್ 7 ಪ್ಲಸ್ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ, ಈ ಫೋನುಗಳ ಹತ್ತು ಪ್ರಮುಖ ಫೀಚರ್ ಗಳ ಬಗ್ಗೆ ಇಲ್ಲಿವೆ ಮಾಹಿತಿ :

►ಈ ಫೋನ್ ನಲ್ಲಿದೆ ಹೊಸಎ 10 ಚಿಪ್ ಹಾಗೂ 64 ಬಿಟ್ ಖ್ವಾಡ್ ಕೋರ್ ಸಿಪಿಯು.

►ಎರಡು ಹೈ-ಪರ್ಫಾಮೆನ್ಸ್ ಕೋರ್ (ಎ9 ಕ್ಕಿಂತ ಶೇ 40 ರಷ್ಟು ವೇಗ ಹೊಂದಿದೆ) ಹಾಗೂ ಕಡಿಮೆ ವಿದ್ಯುತ್ ಬಳಕೆ ಮಾಡುವ ಎರಡು ಕೋರ್ ಗಳು.

►ಆ್ಯಪಲ್ ನಿಂದ ವಿನ್ಯಾಸಗೊಳಿಸಲ್ಪಟ್ಟ ಪರ್ಫಾಮೆನ್ಸ್ ಕಂಟ್ರೋಲರ್ ಈ ಫೋನ್ ಗಳಲ್ಲಿ ಲಭ್ಯವಿದ್ದುಸಿಕ್ಸ್-ಕೋರ್ ಜಿಪಿಯು ಕೂಡ ಸೇರಿದೆ. ಇದು ಎ9 ಕ್ಕಿಂತ ಶೇ 50 ರಷ್ಟು ವೇಗವಾಗಿದ್ದರೂ ಅದಕ್ಕಿಂತ ಅರ್ಧದಷ್ಟು ಕಡಿಮೆ ವಿದ್ಯುತ್ ಉಪಯೋಗಿಸುತ್ತದೆ.

► ರೆಟಿನಾ ಎಚ್.ಡಿ ಡಿಸ್ ಪ್ಲೇ - ಐ ಫೋನ್ 7 ಹಾಗೂ 7ಎಸ್ ನ ಈ ಫೀಚರ್ ಶೇ 25 ರಷ್ಟು ಹೆಚ್ಚು ಪ್ರಕಾಶಮಾನವಾಗಿದ್ದು ಬಣ್ಣಗಳು ಕೂಡ ಅದ್ಭುತವಾಗಿವೆ.ಈ ಫೀಚರ್ ಸಿನೆಮಾ ಗುಣಮಟ್ಟದ್ದಾಗಿದ್ದು, ಅತ್ಯಾಧುನಿಕ ಕಲರ್ ಮ್ಯಾನೇಜ್ಮೆಂಡ್ ಹೊಂದಿದೆ ಹಾಗೂ 3ಡಿ ಟಚ್ ಗೆ ಪೂರಕವಾಗಿದೆ.

►ರಿ-ಇಂಜಿನಿಯರ್ಡ್‌ ಹೋಮ್ ಬಟನ್ಈಗ ಪ್ರೆಶರ್ ಟಚ್ ಸೆನ್ಸಿಟಿವ್ ಆಗಿದ್ದುಹೊಸ ಟಪ್ಟಿಕ್ ಇಂಜಿನಿಗೆ ಪೂರಕವಾಗಿದೆ.

►ಐಫೋನ್ 7 ಪ್ಲಸ್ ನಲ್ಲಿ ಎರಡುಬ್ಯಾಕ್ ಕ್ಯಾಮರಾಗಳಿದ್ದು ಎರಡು ಕೂಡ 12 ಎಂಪಿ ಕ್ಯಾಮರಾಗಳಾಗಿವೆ. ಒಂದು ವೈಡ್ ಆಂಗಲ್ ಕ್ಯಾಮರಾ ಆಗಿದ್ದರೆ ಇನ್ನೊಂದು ಟೆಲಿಫೊಟೋ ಕ್ಯಾಮರಾ. ಇದರಲ್ಲಿ 2 ಎಕ್ಸ್ ಆಪ್ಟಿಕಲ್ ಝೂಮ್ ಇದ್ದು10ಎಕ್ಸ್ ಸಾಫ್ಟ್ ವೇರ್ ಝೂಮ್ ಕೂಡ ಇದೆ.

ಕ್ಯಾಮರಾ ಆಪ್ ನಲ್ಲಿ ಹೊಸ ಪೋಟ್ರೈಟ್ ಮೋಡ್ ಕೂಡ ಇದೆ.

►ಐಫೋನ್ 7 ರಲ್ಲಿ ಸ್ಟೀರಿಯೋ ಸ್ಪೀಕರ್ ಗಳಿದ್ದು ಒಂದು ಡಿಸ್ ಪ್ಲೇಯ ಮೇಲಿನ ಭಾಗದಲ್ಲಿ ಹಾಗೂ ಇನ್ನೊಂದು ಕೆಳಗಿನ ಭಾಗದಲ್ಲಿದೆ.

► ಆಪಲ್ಏರ್ ಪೋಡ್ ನಲ್ಲಿ ಡಬ್ಲ್ಯೂ 1 ಚಿಪ್ ಇದ್ದು ಐಆರ್ ಸೆನ್ಸರ್ ಗಳಿವೆ.

►ಹೊಸ ಐಫೋನ್ 7 ಧೂಳು ಹಾಗೂ ನೀರು ನಿರೋಧಕವಾಗಿದೆ.

►ನಿರೀಕ್ಷೆಯಂತೆಯೇ ಇಯರ್ ಪೋಡ್ ಗಳು ಆಪಲ್ ನ ಲೈಟನಿಂಗ್ ಕನೆಕ್ಟರ್ ಮೂಲಕ ಕನೆಕ್ಟ್ ಆಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News