ವಾಟ್ಸ್ ಆ್ಯಪ್ ಎಕ್ಸ್‌ಪರ್ಟ್ ಆಗಿ ಅದರ ಪೂರ್ಣ ಲಾಭ ಪಡೆಯಿರಿ !

Update: 2016-09-09 10:25 GMT

2009ರಲ್ಲಿ ವಾಟ್ಸ್ ಆ್ಯಪ್ ಆರಂಭವಾದಂದಿನಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದು ಜೀವನಾಡಿಯಾಗಿದೆ. ವಿಶ್ವದಲ್ಲಿಯೇ ಅತೀ ಜನಪ್ರಿಯ ಚಾಟ್ ಆ್ಯಪ್ ಆಗಿರುವ ಇದನ್ನು 1 ಶತಕೋಟಿ ಮಂದಿ ಮಾಸಿಕ ಸಕ್ರಿಯ ಬಳಕೆದಾರರಿದ್ದಾರೆ. ಆದರೆ ಇದನ್ನು ನಿತ್ಯವೂ ಬಳಸುವ ಹಲವರಿಗೆ ಕಳೆದ ಹಲವು ತಿಂಗಳಲ್ಲಿ ವಾಟ್ಸ್ ಆ್ಯಪ್ ಪರಿಚಯಿಸಿದ ಹೊಸ ಫೀಚರ್‌ಗಳ ಬಗ್ಗೆ ಗೊತ್ತಿಲ್ಲ.

ಈ ವರ್ಷಾರಂಭದಿಂದಲೇ ವಾಟ್ಸ್ ಆ್ಯಪ್ ವೇಗವಾಗಿ ಬೆಳೆದಿದೆ. ಇತ್ತೀಚೆಗೆ ಪ್ರತೀ ಎರಡು ವಾರಕ್ಕೆ ಹೊಸ ಫೀಚರ್ ಪರಿಚಯವಾಗುತ್ತಿದೆ. ವಾಟ್ಸ್ ಆ್ಯಪ್ ಬಳಸುವ ನಿಮಗೆ ಇದು ಎಷ್ಟು ಮುಖ್ಯ? ವಾಸ್ತವದಲ್ಲಿ ನೀವು ವಾಟ್ಸ್ ಆ್ಯಪ್ ಫೀಚರನ್ನು ಸ್ಮಾರ್ಟ್ ಆಗಿ ಬಳಸುತ್ತಿಲ್ಲದೆ ಇರಬಹುದು. ಇಲ್ಲಿ ನಾವು ವಾಟ್ಸ್ ಆ್ಯಪ್ ಅನ್ನು ಅತ್ಯುತ್ತಮವಾಗಿ ಬಳಸಲು ಕೆಲವು ಸಲಹೆಗಳನ್ನು ಕೊಡುತ್ತಿದ್ದೇವೆ.

1. ಮಾತನಾಡಲು ಸ್ಪರ್ಶಿಸಿ: ಉದ್ದನೆಯ ಬೋರಿಂಗ್ ಸಂದೇಶ ಟೈಪ್ ಮಾಡಲು ಇಷ್ಟವಿಲ್ಲದಿದ್ದಲ್ಲಿ ಮಾತಾಡಿ. ವಾಟ್ಸ್ ಆಪ್‌ನಲ್ಲಿ ಅದಕ್ಕೆಂದೇ ಫೀಚರ್ ಇದೆ. ಸರಳವಾಗಿ ಕೀಪ್ಯಾಡ್ ಮೇಲಿರುವ ಮೈಕ್ ಬಟನ್ ಮೇಲೆ ಒತ್ತಿ ನಿಮ್ಮ ಉದ್ದನೆಯ ಧ್ವನಿ ಸಂದೇಶ ಹೇಳಿ ಎಂಟರ್ ಒತ್ತಿಬಿಡಿ.

2. ಗ್ರೂಪ್ ಚಾಟಲ್ಲಿ ನಿಮ್ಮ ಸಂದೇಶ ಓದಿದವರ ಬಗ್ಗೆ ತಿಳಿದುಕೊಳ್ಳುವುದು: ಗ್ರೂಪ್ ಚಾಟಲ್ಲಿ ಎಲ್ಲರೂ ಒಂದೇ ಬಾರಿಗೆ ಸಂದೇಶವನ್ನು ಓದುವುದಿಲ್ಲ. ಸಂದೇಶದ ಮೇಲೆ ಡಬಲ್ ಬ್ಲೂ ಟಿಕ್‌ಗಳು ಬರಬೇಕೆಂದಲ್ಲಿ ಗ್ರೂಪಿನ ಎಲ್ಲರೂ ಅದನ್ನು ಓದಿರಬೇಕು. ಈಗ ನಿಮ್ಮ ಸಂದೇಶವನ್ನು ಯಾರು ಓದಿದ್ದಾರೆ ಮತ್ತು ಯಾರು ಓದಿಲ್ಲ ಎನ್ನುವುದು ನಿಮಗೆ ತಿಳಿದುಕೊಳ್ಳಬಹುದು. ಸಂದೇಶದ ಮೇಲೆ ಸ್ಪರ್ಶಿಸಿ ಒತ್ತಿ ಹಿಡಿಯಿರಿ. ನಂತರ ಇನ್ಫೋ ಆಯ್ಕೆಯ ಮೇಲೆ ಸ್ಪರ್ಶಿಸಿ. ಅದರಲ್ಲಿ ಸಂದೇಶ ಎಷ್ಟು ಹೊತ್ತಿಗೆ ಯಾರಿಗೆ ಡೆಲಿವರ್ ಆಗಿದೆ ಮತ್ತು ಯಾರು ಓದಿದ್ದಾರೆ ಎನ್ನುವ ವಿವರವಿರುತ್ತದೆ.

3. ನಿರ್ದಿಷ್ಟ ಸಂದೇಶಕ್ಕೆ ಉತ್ತರಿಸಿ: ಒಂದರ ಹಿಂದೆ ಒಂದರಂತೆ ತ್ವರಿತವಾಗಿ ನೀವು ಒಂದು ಪ್ರಶ್ನೆಗೆ ಉತ್ತರಿಸುವ ಮೊದಲೇ ಮತ್ತೊಂದು ಸಂದೇಶ ಹಾಕುವ ಸ್ನೇಹಿತ ನಿಮಗಿದ್ದಾರೆಯೇ. ಹಾಗಿದ್ದರೆ ಅವರ ಪ್ರಶ್ನೆಗಳಿಗೆ ಒಂದೊಂದಾಗಿ ನೀವು ಉತ್ತರಿಸಬಹುದು. ಗೊಂದಲ ಕಡಿಮೆ ಮಾಡಲು ನೀವು ನಿರ್ದಿಷ್ಟ ಸಂದೇಶಕ್ಕೇ ಉತ್ತರಿಸಬಹುದು. ನೀವು ಉತ್ತರಿಸಲು ಬಯಸುವ ಸಂದೇಶದ ಮೇಲೆ ಒತ್ತಿ, ರಿಪ್ಲೈ ಬಟನ್ ಆರಿಸಿ ಮತ್ತು ಟೈಪ್ ಮಾಡಿ ಉತ್ತರ ಕಳುಹಿಸಿ. ಆಗ ಅದು ಮೂಲ ಸಂದೇಶದ ಜೊತೆಗೇ ಕಾಣುತ್ತದೆ. ಹೀಗಾಗಿ ವಿಷಯದ ಮಹತ್ವ ಕಳೆದುಹೋಗುವುದಿಲ್ಲ.

4. ಪ್ರಮುಖ ಸಂಪರ್ಕಗಳಿಗೆ ಶಾರ್ಟ್‌ಕಟ್: ಪ್ರಮುಖ ಸಂಪರ್ಕಗಳಿಗೆ ನೀವು ಫೋನಿನ ಹೋಂ ಸ್ಕ್ರೀನಲ್ಲಿ ಶಾರ್ಟ್‌ಕಟ್ ತಯಾರಿಸಬಹುದು. ನೀವು ಮಾಡಬೇಕಾಗಿದ್ದು ಇಷ್ಟೇ. ಚಾಟ್ ವಿಂಡೋ > ಸೆಟ್ಟಿಂಗ್ಸ್ > ಮೋರ್ > ಆಡ್ ಶಾರ್ಟ್‌ಕಟ್. ಈಗ ನಿಮ್ಮ ಫೋನಿನ ಹೋಂ ಸ್ಕ್ರೀನ್ ಮೇಲೆ ಶಾರ್ಟ್‌ಕಟ್ ಕಾಣಬಹುದು.

5. ಸಂದೇಶಗಳನ್ನು ಸ್ಟೈಲ್ ಮಾಡುವುದು: ಸಂದೇಶವನ್ನು ಎದ್ದುಕಾಣುವಂತೆ ಮಾಡಬಹುದು. ಬೋಲ್ಡ್, ಇಟಾಲಿಕ್ ಮತ್ತು ಸ್ಟ್ರೈಕ್ ಮೊದಲಾದುವನ್ನು ಬಳಸಬಹುದು. ಉದಾಹರಣೆಗೆ ಬೋಲ್ಡ್ ಮಾಡಬೇಕಾದರೆ *ಹೈ* ಮತ್ತು ಇಟಾಲಿಕ್‌ಗೆ _ಹೈ_ ಮತ್ತು ಸ್ಟ್ರೈಕ್‌ಗೆ ~ಹೈ~ ಬಳಸಬಹುದು.

6. ಪದೇ ಪದೇ ಸಂದೇಶ ಬರುವ ಗ್ರೂಪನ್ನು ಮೌನಗೊಳಿಸಿ: ನಿರಂತರವಾಗಿ ಸಂದೇಶ ಬರುತ್ತ ಶಬ್ದ ಮಾಡುವ ಗ್ರೂಪ್ ನಿಮಗೆ ಕಿರಿಕಿರಿ ಕೊಡಬಹುದು. ಅಂತಹ ಕಿರಿಕಿರಿ ನೊಟಿಫಿಕೇಶನನ್ನು ನಿವಾರಿಸುವ ಹಾದಿ ಇದೆ. ಗ್ರೂಪ್ ಹೆಸರಿನ ಮೇಲೆ ಸ್ಪರ್ಶಿಸಿ > ಮ್ಯೂಟ್ ಮೇಲೆ ಸ್ಪರ್ಶಿಸಿ. ನಂತರ ಎಷ್ಟು ಸಮಯ ಆ ಗ್ರೂಪನ್ನು ಮೌನಗೊಳಿಸಬೇಕು ಎಂದೂ ಸಮಯ ಆರಿಸಿಕೊಳ್ಳಬಹುದು.

7. ಲೈವ್ ಫೀಚರ್ ಪ್ರಸಾರ: ಹಬ್ಬಗಳು ಬರುವಾಗ ಒಂದೇ ಸಂದೇಶವನ್ನು ಹಲವರಿಗೆ ಕಳುಹಿಸುವ ಆಸೆ ಇರಬಹುದು. ವಾಟ್ಸ್ ಆ್ಯಪ್ ಫೀಚರ್ ಬಳಸಿ ಅದನ್ನೂ ಮಾಡಬಹುದು. ಚಾಟ್ ಸ್ಕ್ರೀನ್‌ಗೆ ಹೋಗಿ ಮೆನು ಬಟನ್ ಮೇಲೆ ಸ್ಪರ್ಶಿಸಿ. ನಂತರ ನ್ಯೂ ಬ್ರಾಡ್‌ಕಾಸ್ಟ್ ಅನ್ನು ಆರಿಸಿ ನೀವು ಯಾರಿಗೆ ಸಂದೇಶ ಕಳುಹಿಸಲು ಬಯಸಿದ್ದೀರೋ ಅವರನ್ನು ಆರಿಸಿ. ಶುಕ್ರವಾರ ಪಾರ್ಟಿ ಮಾಡುವವರಿದ್ದಲ್ಲಿ ಒಂದೇ ಸಂದೇಶದಲ್ಲಿ ಎಲ್ಲಾ ಸ್ನೇಹಿತರನ್ನೂ ಕರೆಯಿರಿ.

8. ನೀವಿರುವ ಸ್ಥಳದ ಮ್ಯಾಪ್ ಸ್ನೇಹಿತರಿಗೆ ಕಳುಹಿಸುವುದು: ಇದಕ್ಕಾಗಿ ಶೇರ್ ಐಕಾನ್ ಮೇಲೆ ಸ್ಪರ್ಶಿಸಿ ಮತ್ತು ನಿಮ್ಮ ಸ್ಥಳ ಕಳುಹಿಸಿ ಅಥವಾ ಸ್ಥಳ ಹುಡುಕಿ. ಸ್ಥಳ ಕಳುಹಿಸುವ ಮೊದಲು ಫೋನಿನಲ್ಲಿ ನಿಮ್ಮ ಜಿಪಿಎಸ್ ಆನ್ ಮಾಡಿಕೊಳ್ಳಿ.

9. ವಾಟ್ಸ್ ಆಪ್ ಖಾಸಗಿಗೊಳಿಸಿ: ವಾಟ್ಸ್ ಆಪ್‌ನ ವಾಲ್‌ಪೇಪರ್ ಬದಲಿಸಬಹುದು. ಸೆಟ್ಟಿಂಗ್ ಅಡಿ ಈ ಆಯ್ಕೆ ಇದೆ.

10. ನಿಮ್ಮ ವಾಟ್ಸ್ ಆ್ಯಪ್ ಚಾಟ್ ಹಿಸ್ಟರಿ ಹುಡುಕಿ: ನಿಮ್ಮ ಚಾಟ್ ಥ್ರೆಡ್‌ನಲ್ಲಿ ಕರಾರುವಕ್ಕಾದ ಸಂದೇಶ ಹುಡುಕಬಹುದು. ಸಂದೇಶ ಪಡೆಯಲು ಬಯಸುವ ಕಾಂಟಾಕ್ಟ್ ಸ್ಕ್ರೀನ್‌ಗೆ ಹೋಗಿ. ಆಪ್ಷನ್ ಬಟನ್ > ಸರ್ಚ್ > ನೀವು ಹುಡುಕುತ್ತಿರುವ ಸಂದೇಶ ಟೈಪ್ ಮಾಡಿ. ಆಪ್ ಸಂಭಾಷಣೆಯ ಸಮೇತ ಸಂದೇಶ ಹುಡುಕಿ ತೆಗೆಯುತ್ತದೆ.

ಕೃಪೆ: indiatoday.intoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News