ಭಾರತದಲ್ಲಿ ಬರಲಿದೆ ನೂತನ ಟೊಯೋಟಾ ಫಾರ್ಚುನರ್
ಹಿಂದೆಂದಿಗಿಂತಲೂ ಬೋಲ್ಡ್ ಲುಕ್ ಪಡೆದಿರುವ 2016ರ ಟೊಯೋಟಾ ಫಾರ್ಚುನರ್ ಮಾಡೆಲ್ ನವೆಂಬರ್ ಮೊದಲ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ. ಹೊಸ ಟೊಯೋಟಾ ಫಾರ್ಚುನರ್ ಹಿಂದಿನ ಮಾಡೆಲಿಗಿಂತ 90ಎಂಎಂ ಉದ್ದ ಮತ್ತು 15 ಎಂಎಂ ಅಗಲವಾಗಿದ್ದು, ವೀಲ್ ಬೇಸ್ (2,750 mm) ಹಿಂದಿನ ವಾಹನದ ಹಾಗೆಯೇ ಇರುತ್ತದೆ.
ಬಾಹ್ಯ ಫೀಚರ್‌ಗಳಲ್ಲಿ ಹೊಸ ಸ್ಟೈಲಿಂಗ್‌ಗಳಿದ್ದು, ಶಾರ್ಪ್ ಲೈನ್‌ಗಳು ಮತ್ತು ಸಮಕಾಲೀನ ಅಂಶಗಳ ಜೊತೆಗೆ ಟೊಯೋಟಾ ಫಾರ್ಚುನರ್ ಹಿಂದೆಂದಿಗಿಂತಲೂ ಹೆಚ್ಚು ಬೋಲ್ಡ್ ಲುಕ್ ಪಡೆದುಕೊಳ್ಳಲಿದೆ.
ಒಳಾಂಗಣವು ಟಯೋಟಾ ಇನೋವಾ ಕ್ರಿಸ್ಟಾವನ್ನು ಚಲಾಯಿಸಿರುವ ಮಂದಿಗೆ ಅದೇ ರೀತಿಯಿದೆ ಎಂದು ಅನಿಸಬಹುದಾದರೂ, ವಿಶೇಷ ವಿನ್ಯಾಸವು ಹಿಂದಿನ ಮಾಡೆಲಿಗಿಂತ ಭಿನ್ನವಾಗಿಸಲಿದೆ. ಕೆಲವು ಫೀಚರ್‌ಗಳಾಗಿರುವ ಹಗಲಿನವೇಳೆ ಪ್ರಕಾಶಿಸುವ ಲೈಟ್‌ಗಳ ಜೊತೆಗೆ LED ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, A-TRC ಟ್ರಾಕ್ಷನ್ ಕಂಟ್ರೋಲ್ (TRC) ವ್ಯವಸ್ಥೆ, ಡೌನ್‌ಹಿಲ್ ಅಸಿಸ್ಟ್ ಕಂಟ್ರೋಲ್ (DAC) ವ್ಯವಸ್ಥೆ, ಇಲೆಕ್ಟ್ರಿಕ್ ಟೈಲ್‌ಗೇಟ್, ವಿದ್ಯುತ್‌ಚಾಲಿತವಾಗಿ ಹೊಂದಿಸಬಹುದಾದ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್, 7 ಇಂಚ್ T-ಕನೆಕ್ಟ್ ಇನ್ಫೋಟೈನ್ಮೆಂಟ್ ವ್ಯವಸ್ಥೆಯು ಉಪಗ್ರಹ ನೇವಿಗೇಶನ್ ಜೊತೆಗಿದೆ, ರಿವರ್ಸಿಂಗ್ ಕ್ಯಾಮರಾ ಮತ್ತು ಪುಷ್ ಬಟನ್ ಸ್ಟಾರ್ಟ್/ಸ್ಟಾಪ್ ಬಟನ್ ಕೂಡ ಇದೆ.
ಇನೋವಾ ಕ್ರಿಸ್ಟಾ ಇಂಜಿನ್ ಲೈನಪ್ ಅನ್ನೇ ಹೊಸ ಫಾರ್ಚುನರ್ ಪಡೆಯಲಿದೆ. ಅದರಲ್ಲಿ 2.7L VVT-i ಪೆಟ್ರೋಲ್ ಇಂಜಿನ್ ಎರಡು ಡೀಸಲ್ ಇಂಜಿನ್ ಆಯ್ಕೆಗಳು: : 2.4L ಮತ್ತು 2.8L ಫೋರ್ ಸಿಲಿಂಡರ್ ಟರ್ಬೋಡೀಸಲ್ GD ಯುನಿಟ್‌ಗಳು ಇರಲಿವೆ. ಟ್ರಾನ್ಸಮಿಶನ್ ಆಯ್ಕೆಗಳಲ್ಲಿ 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡೂ ಪೆಟ್ರೋಲ್ ಮತ್ತು ಡೀಸಲ್ ವಾಹನಗಳಲ್ಲಿರಲಿವೆ. 4WD ವ್ಯವಸ್ಥೆಯು ಟಾಪ್ 2.8 ಎಂಡ್ ಡೀಸಲ್ ಜೊತೆಗೆ ಬರಲಿದೆ.
ಕೃಪೆ: economictimes.indiatimes.com