ನಿಮ್ಮ ಎಲ್ಲ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತಿರುವ ಗೂಗಲ್ !
ನ್ಯೂಯಾರ್ಕ್,ಸೆ.17 : ಆಧುನಿಕ ತಂತ್ರಜ್ಞಾನ ಅದೆಷ್ಟು ಮುಂದುವರಿದಿದೆಯೆಂದರೆ ಅದನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲವೆನ್ನುವಷ್ಟರ ಹಂತಕ್ಕೆ ನಾವು ಬಂದಿದ್ದೇವೆ. ಅದೇ ಸಮಯ ಈ ತಂತ್ರಜ್ಞಾನ ನಮ್ಮ ಖಾಸಗಿತನವನ್ನೂ ಹಲವಾರು ವಿಧಗಳಲ್ಲಿ ಆಕ್ರಮಿಸಿದೆ. ಕೆಲ ಸರಕಾರಿ ಸಂಸ್ಥೆಗಳ ಜನರ ಸುರಕ್ಷೆಗಾಗಿ ತಾವು ಅವರ ಮೇಲೆ ನಿಗಾ ಇಡುತ್ತಿವೆಯೆಂದು ಹೇಳಿದರೆ, ಇದು ತಮ್ಮ ಖಾಸಗಿ ಬದುಕಿನ ಮೇಲೆ ಆಕ್ರಮಣವೆಂದು ಜನರು ತಿಳಿಯುತ್ತಾರೆ.
ಆಧುನಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಗೂಗಲ್ ಕೊಡುಗೆ ಅಪಾರ. ಇದೀಗ ಸ್ಮಾರ್ಟ್ ಫೋನುಗಳಿಗೆ ಇಂಟಗ್ರೇಟ್ ಮಾಡಲ್ಪಟ್ಟಿರುವ ಗೂಗಲ್ ನ ವಾಯ್ಸ್ ರೆಕಾರ್ಡಿಂಗ್ ಫೀಚರ್ಹೆಚ್ಚು ಪರಿಣಾಮಕಾರಿಯೆಂದು ಹೇಳಲಾಗುತ್ತಿದೆಯಾಧರೂ ಗೂಗಲ್ ರಹಸ್ಯವಾಗಿ ನಮ್ಮ ಮಾತುಗಳನ್ನು ಅದು ಕೂಡ ನಮ್ಮ ಒಪ್ಪಿಗೆಯೊಂದಿಗೆಯೇ ರೆಕಾರ್ಡ್ ಮಾಡುತ್ತಿದೆ. ನಿಮ್ಮ ಫೋನ್ ನಲ್ಲಿ ನೀವು ಗೂಗಲ್ ಸರ್ಚ್ ಮಾಡುವಾಗ ಹೇಳುವಪ್ರತಿಯೊಂದು ಮಾತೂ ರೆಕಾರ್ಡ್ ಆಗುತ್ತಿದೆ. ಗೂಗಲ್ ವೆಬ್ ಸೈಟ್ ಬಹಿರಂಗಗೊಳಿಸಿರುವ ಅಂಕಿಅಂಶಗಳು ನಿಜಕ್ಕೂ ಆತಂಕಕಾರಿ. ಗೂಗಲ್ ಈಗ ವಿಶ್ವದಾದ್ಯಂತ ಪ್ರತಿ ಸೆಕೆಂಡಿಗೆ 40,000 ಸರ್ಚ್ ಗಳನ್ನು ಸಂಸ್ಕರಿಸುತ್ತಿದೆ. ಇದನ್ನು ಗಣನೆಗೆ ತೆಗೆದುಕೊಂಡರೆ ಗೂಗಲ್ ದಿನವೊಂದಕ್ಕೆ 3.5 ಬಿಲಿಯನ್ ಸರ್ಚ್‌ಗಳುಹಾಗೂ ವರ್ಷವೊಂದಕ್ಕೆ 1.2 ಟ್ರಿಲಿಯನ್ ಸರ್ಚ್ ಗಳನ್ನು ನಿರ್ವಹಿಸುತ್ತದೆ.
ಈ ಸರ್ಚ್ ಗಳ ಆಧಾರದಲ್ಲಿ ಸೂಕ್ತ ಡಾಟಾ ಪ್ರತಿಯೊಬ್ಬರಿಗಾಗಿ ಶೇಖರಿಸಲಾಗುತ್ತದೆಯಲ್ಲದೆ ಅವುಗಳಲ್ಲಿರುವ ಮಾಹಿತಿಯಂತೆ ಅವರ ಆಸಕ್ತಿಗನುಗುಣವಾಗಿ ಜಾಹೀರಾತುಗಳನ್ನು ತೋರಿಸಲಾಗುತ್ತದೆ.ನೀವು ವೆಬ್ ಸರ್ಚ್ ಗಳಿಗೆ ಈಗಲೂ ಗೂಗಲ್ ಬಳಕೆ ಮಾಡುತ್ತಿದ್ದೀರೆಂದಾದರೆ ಗೂಗಲ್ ನಿಮ್ಮ ಮಾತುಗಳನ್ನು ಕೇಳುತ್ತಿದೆ. ಅದು ನಿಮ್ಮ ಬಗೆಗಿನ ಡೈರಿ ಇದ್ದಂತೆ, ನಿಮಗೆ ಗೊತ್ತಿರುವ ನಿಮ್ಮ ಇಷ್ಟಾನಿಷ್ಟಗಳ ಬಗ್ಗೆ ಅದಕ್ಕೆ ಎಲ್ಲವೂ ಗೊತ್ತು, ಕೆಲವು ರಹಸ್ಯ ಸಂಗತಿಗಳು ಕೂಡ.
ಗೂಗಲ್ ಏನು ಹೇಳುತ್ತದೆ ?
ಇಂತಹ ಒಂದು ಮಾಹಿತಿ ಬಹಿರಂಗಗೊಂಡಾಗ ಗೂಗಲ್ ಅದನ್ನು ನಿರಾಕರಿಸಿಲ್ಲ, ಬದಲಾಗಿತನ್ನನ್ನು ಸಮರ್ಥಿಸಿಕೊಂಡು ತಾನು ಸಂಗ್ರಹಿಸಿದ ಮಾಹಿತಿಯನ್ನು ವೈಯಕ್ತಿಕವಾಗಿ ಯಾರ ವಿರುದ್ಧವೂ ಉಪಯೋಗಿಸುತ್ತಿಲ್ಲವೆಂದು ಹೇಳಿದೆ. ಬದಲಾಗಿ ಬಳಕೆದಾರರ ವೆಬ್ ಅನುಭವವನ್ನು ಇನ್ನಷ್ಟು ಉತ್ತಮಪಡಿಸುವುದೇ ಅದರ ಹಿಂದಿನ ಉದ್ದೇಶವೆಂದೂ ಅದು ಹೇಳಿಕೊಂಡಿತ್ತು. ಆದರೆ ನಮ್ಮ ಬಗೆಗಿನ ಮಾಹಿತಿ ತಪ್ಪಾದ ವ್ಯಕ್ತಿಯ ಕೈಗೆ ಹೋಗಿ ಆತ ಅದನ್ನು ನಮ್ಮ ವಿರುದ್ಧ ಉಪಯೋಗಿಸಿದರೆ ?
ತಜ್ಞರೇನು ಹೇಳುತ್ತಾರೆ ?
ತಜ್ಞರ ಪ್ರಕಾರ ನಮ್ಮ ಗೂಗಲ್ ಸರ್ಚ್ ಹಿಸ್ಟರಿ ನಮ್ಮ ಡಿವೈಸ್ ನ ಲೊಕೇಶನ್ ಡಾಟಾ ಮೇಲೆ ಅವಲಂಬಿತಾಗಿದೆ. ಮೇಲಾಗಿ ನಮ್ಮ ನಿರ್ದಿಷ್ಟ ಆಸಕ್ತಿಗಳ ಹೊರತಾಗಿನಾವಿರುವಸ್ಥಳದ ಆಧಾರದಲ್ಲಿ ಆ ನಿರ್ದಿಷ್ಟ ಸಮಯದಲ್ಲಿ ನಮ್ಮ ಆಸಕ್ತಿಗಳು ಏನು ಎಂದೂ ಗೂಗಲ್ ತಿಳಿಯುತ್ತದೆ. ತನ್ನ ಪರವಾಗಿ ಗೂಗಲ್ ಬಳಕೆದಾರರ ಪ್ರೈವೆಸಿ ಸೆಟ್ಟಿಂಗ್ಸ್ ಬದಲಿಸಲು ಅವಕಾಶ ನೀಡುತ್ತದೆ.
ಗೂಗಲ್ ನಿಮ್ಮ ಮಾತುಗಳನ್ನು ರೆಕಾರ್ಡ್ ಮಾಡದೇ ಇರುವಂತೆ ನೋಡಿಕೊಳ್ಳಲು ನೀವೇನು ಮಾಡಬೇಕು ?
1. history.google.com
2. Click on the three dots that you see on the top-right and click on the Activity controls.
3. Scroll down to Voice & Audio activity and click on Manage Activity.
4. Here you'll find a whole list of the times Google has recorded your voice. With or without you coming to know. It's quite spooky guys, so be prepared.
5. You can delete each of these voice notes manually by clicking on the three dots on the top right corner of each card.