i 10, i 20 ಬಳಿಕ ಬರುತ್ತಿದೆ ಹುಂಡೈ i 30 !

Update: 2016-09-24 10:30 GMT

2016ರ ಪ್ಯಾರಿಸ್ ಮೋಟಾರ್ ಶೋನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವ ಹುಂಡೈನ i30 ಯ ಮೊದಲ ನೋಟ ಬಹಿರಂಗವಾಗಿದೆ. ಕೊರಿಯನ್ ಅಟೋ ಮೇಕರ್ ಎನ್ ಬ್ರಾಂಡ್ ಅಡಿ ಪರಿಚಯಿಸಿರುವ ಮೊದಲ ಹೈ ಪರ್ಫಾರ್ಮೆನ್ಸ್ ವಾಹನ ಇದಾಗಿದೆ. 2017ರ ಆರಂಭದಲ್ಲಿ ಇದು ಯುರೋಪ್ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಕ್ಲಾಸಿಕ್ ಮತ್ತು ಅಂಚಿನ ವಿನ್ಯಾಸ

ಇತ್ತೀಚೆಗಿನ ಹುಂಡೈಗಳಲ್ಲಿ ಕಂಡು ಬರುವ ಎಲ್ಲಾ ಡಿಸೈನ್‌ಗಳನ್ನು i30 ನಿರ್ವಹಿಸಲಿದೆ. ಆದರೆ ಹುಂಡೈನ ಹೊಸ ಫ್ಲೂಯ್ಡಿಕ್ ಸ್ಕಲ್ಪಚರ್ 2.0 ಡಿಸೈನ್ ಭಾಷೆಯಲ್ಲಿ ಹೇಳುವ ತೀಕ್ಷ್ಣ ಮತ್ತು ಅಂಚಿನ ಸ್ಟೈಲಿಂಗ್ ಇದಕ್ಕಿದೆ. ಮುಂಭಾಗದಲ್ಲಿ ಇದು ಎರಡನೇ ತಲೆಮಾರಿನ i10 ಅಂದರೆ ಗ್ರಾಂಡ್ i10 ನಲ್ಲಿ ಇರುವಂತೆ ಸ್ವಲ್ಪ ಕಾಸ್ಕೇಡಿಂಗ್ ಗ್ರಿಲ್ ಹೊಂದಿದೆ.

ಆಡಂಬರದ ಫೀಚರ್‌ಗಳು

ಎಲ್ಲಾ ಎಲ್‌ಇಡಿ ಲೈಟಿಂಗ್ (ಹೈ ಮತ್ತು ಲೋ ಬೀಮ್‌ಗೆ), ಹೆಡ್ಲೈಟ್ ನಲ್ಲಿ ತ್ರಿ ಪ್ರೊಜೆಕ್ಟರ್ ಸೆಟಪ್, ಫಾಗ್ ಲ್ಯಾಂಪ್, ಹಗಲು ಪ್ರಕಾಶಿಸುವ ಎಲ್‌ಇಡಿ ಪ್ರೊಜೆಕ್ಟರ್ ಫಾಗ್ ಲ್ಯಾಂಪ್‌ಗಳಿಗೆ ನೇರವಾಗಿದೆ, ಜೊತೆಯಲ್ಲಿ ಅಲಾಯ್ ವೀಲ್ ಆಯ್ಕೆಗಳಾದ 15, 16, 17 ಇಂಚುಗಳನ್ನು ಪಡೆಯಬಹುದು. ಕ್ಯಾಬಿನ್ ಒಳಗೆ i30ಯಲ್ಲಿ ಸಿಮೆಟ್ರಿಕ್ ಲೇಔಟ್‌ನ ಡ್ಯಾಷ್ ಬೋರ್ಡ್ ಐದು/ಎಂಟು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಹೊಂದಿದೆ.

ಹೊಂದಿಸುವ ಚಾಲಕನ ಸೀಟು

ವ್ಯಾಪಕ ಬೂಟ್ ಸ್ಪೇಸ್ ಆಗಿ 395 ಲೀಟರ್‌ಗಳನ್ನು ಹೊಂದಿರುವ ಹುಂಡೈ ಹ್ಯಾಚ್ ತಾಂತ್ರಿಕವಾಗಿ ಹೊಂದಿಸಬಹುದಾದ ಚಾಲಕನ ಸೀಟನ್ನು ಮೆಮೊರಿ ಸೆಟ್ಟಿಂಗ್ ಗಳ ಜೊತೆಗೆ ಹೊಂದಿದೆ. ಸ್ಮಾರ್ಟ್‌ಫೋನ್‌ಗಳು, ಆಪಲ್ ಕಾರ್ ಪ್ಲೇ ಮತ್ತು ಗೂಗಲ್ ಆಂಡ್ರಾಯ್ಡಾ ಅಟೋ ಚಾರ್ಜಿಂಗಿಗೆ ಇಂಡಕ್ಟಿವ್ ವೈರ್ಲೆಸ್ ಚಾರ್ಜಿಂಗ್ ಇದೆ.

ಸೂಪರ್ ಪ್ರೊಟೆಕ್ಟಿವ್ ಸಾಧನಗಳು

ಭದ್ರತೆಯ ಸಾಧನಗಳ ವಿಷಯದಲ್ಲಿ ಹ್ಯುಂಡೈ i30ಯಲ್ಲಿ ಅಟೋನೊಮಸ್ ಎಮರ್ಜೆನ್ಸಿ ಬ್ರೇಕಿಂಗ್(AEB), ಡ್ರೈವರ್ ಅಟೆನ್ಷನ್ ಅಲರ್ಟ್(DAA), ಬ್ಲೈಂಡ್ ಸ್ಪಾಟ್ ಡಿಟೆಕ್ಟರ್(BSD), ರೇರ್ ಕ್ರಾಸ್ ಟ್ರಾಫಿಕ್ ಅಲರ್ಟ್(RCTA), ಲೇನ್ ಕೀಪಿಂಗ್ ಅಸಿಸ್ಟ್ ಸಿಸ್ಟಂ(LKAS), ಹೈ ಬೀಮ್ ಅಸಿಸ್ಟ್(HBA) ಮತ್ತು ನೀ ಏರ್ ಬ್ಯಾಗ್ ಸೇರಿದಂತೆ ಏರ್ ಬ್ಯಾಗ್ ಗಳಿವೆ.

ಇಂಜಿನ್

ಮೆಕಾನಿಕಲ್ಸ್ ವಿಚಾರದಲ್ಲಿ ಪವರ್‌ಫುಲ್ 1.4 ಲೀಟರ್ T-GDi ಟರ್ಬೋಚಾರ್ಜ್ಡ್‌ ಪೆಟ್ರೋಲ್ ಮೋಟಾರ್ ಹೊಂದಿದೆ. ಅದು 140PS ಟಾಪ್ ಪವರ್ ಮತ್ತು 242Nm ಮ್ಯಾಕ್ಸ್ ಟಾರ್ಕ್‌ ಕೊಡುತ್ತದೆ.

ಈ ಇಂಜಿನ್ ಅನ್ನು ಆರು ಸ್ಪೀಡ್ ಮ್ಯಾನುವಲ್ ಅಥವಾ ಏಳು ಸ್ಪೀಡ್ DCT (ಡ್ಯುಯಲ್ ಕ್ಲಚ್ ಅಟೋಮ್ಯಾಟಿಕ್) ಟ್ರಾನ್ಸಮಿಶನ್ ಜೊತೆಗೆ ಜೋಡಿಸಲಾಗುತ್ತದೆ.

ಅಲ್ಲದೆ ಹುಂಡೈ ಮತ್ತೊಂದು ಇಂಜಿನ್ ಆಯ್ಕೆಯನ್ನೂ ಸೇರಿಸಬಹುದು. 1.4 ಲೀಟರ್ ಸಹಜವಾದ ಆಸ್ಪಿರೇಟೆಡ್ ಪೆಟ್ರೋಲ್, 1.0- ಲೀಟರ್ T-GDi ತ್ರಿ ಸಿಲಿಂಡರ್ ಟರ್ಬೋ ಪೆಟ್ರೋಲ್ ಮತ್ತು ದೊಡ್ಡ 1.6 ಲೀಟರ್ CRDi ಡೀಸಲ್.

ಭಾರತಕ್ಕೂ ಬೇಗನೇ ಬರಲಿದೆ

ಲಕ್ಷಣಗಳು ಇಷ್ಟೊಂದು ಚೆನ್ನಾಗಿರುವ ಹುಂಡೈ i30 ಬೆಲೆ ಹೆಚ್ಚಾಗಿಯೇ ಇರಲಿದೆ. ಭಾರತೀಯ ಪ್ರದೇಶಕ್ಕೆ ಕಾಲಿಟ್ಟಲ್ಲಿ ಇದರ ಬೆಲೆ ರು. 14ರಿಂದ 16 ಲಕ್ಷದ ಆಸುಪಾಸಿನಲ್ಲಿರಬಹುದು.

ಕೃಪೆ: http://economictimes.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News