ಜಗದಚ್ಚರಿಯ ಜಿಂಕೆಮರಿ

Update: 2016-10-13 09:49 GMT



ಇತ್ತೀಚೆಗೆ ಮುಗಿದ ಜಗತ್ತಿನ ಮಹಾನ್ ಕ್ರೀಡಾಕೂಟ ಒಲಿಪಿಂಕ್ಸ್ ನ ನೆನಪು ಇನ್ನೂ ಹಸಿರಾಗಿದೆ. ಮನುಷ್ಯನ ಘನತೆ, ಸಾಧನೆ, ಶ್ರಮ ಮತ್ತು ಸಾಹಸವನ್ನು ಪ್ರದರ್ಶಿಸಲು ಈ ಕ್ರೀಡಾಕೂಟವು ವೇದಿಕೆಯಾಗಿದೆ. ಆರಂಭದಿಂದಲೂ ಅನೇಕ ಅಚ್ಚರಿಗಳಿಗೆ, ರೋಮಾಂಚನಗಳಿಗೆ, ಮನುಷ್ಯರ ಅಸೀಮ ಸಾಮರ್ಥ್ಯದ ಸುಂದರ ಕ್ಷಣಗಳಿಗೆ ಸಾಕ್ಷಿಯಾಗಿ ಒಲಿಂಪಿಕ್ ರೋಮಾಂಚನವನ್ನು ಸೃಷ್ಟಿಸುತ್ತಿದೆ. ಒಲಿಂಪಿಕ್ ಕ್ರೀಡೆಯ ಆ ಸುಂದರ ಕ್ಷಣಗಳನ್ನು ಸೃಷ್ಟಿಸಿ ಅಜರಾಮರರಾದ ಮಾನವ ಚೈತನ್ಯಗಳನ್ನು ಪರಿಚಯಿಸುವ ಡಾ.ಕೆ. ಪುಟ್ಟಸ್ವಾಮಿಯವರ ಮತ್ತೊಂದು ಬೆಡಗು ಕೃತಿಯು 2016ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಆ ಕೃತಿಯಿಂದ ಆಯ್ದ ಬರಹವಿದು.

ಅದು ರೋಮ್ ನಗರದ ಒಲಿಂಪಿಕ್ ಕೂಟದ (1960)ಲ್ಲಿ ಸಂಭವಿಸಿದ ಜಗದಚ್ಚರಿಯ ಘಟನೆ. ಪ್ರೇಕ್ಷಕರ ಊಹೆಯನ್ನು ಮೀರಿದ ಸಂಭ್ರಮ. ವಿಲ್ಮಾ ರುಡಾಲ್ ಎಂಬ ಇಪ್ಪತ್ತರ ಯುವತಿ ಮೂರು ಓಟಗಳಲ್ಲಿ ಬಂಗಾರದ ಪದಕಗಳನ್ನು ಗೆದ್ದಾಗ ಒಲಿಂಪಿಕ್ ಕೂಟದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಯಾಯಿತು. ಮಾನವನ ಅದಮ್ಯ ಚೇತನದ ಸಾಧನೆಗೆ ಮತ್ತೊಂದು ಸಾಕ್ಷಿಯಾಯಿತು. ಅಪರಿಮಿತ ಸಂಕಲ್ಪ ಶಕ್ತಿ, ಗೆಲ್ಲಲೇಬೇಕೆಂಬ ಛಲವು ತಲುಪಬಹುದಾದ ಉತ್ತುಂಗವನ್ನು ಆ ಘಟನೆ ದರ್ಶನ ಮಾಡಿಸಿತು. ಹುಟ್ಟಿದ ಕ್ಷಣದಿಂದಲೇ ತನ್ನ ಬದುಕನ್ನು ಪರೀಕ್ಷಿಸಲು ವಿಯು ಹೂಡಿದ ಎಲ್ಲ ಸಂಚುಗಳನ್ನು ವಿಲಗೊಳಿಸಿದ ಖ್ಯಾತಿಗೆ ಭಾಜನಳಾದವರು ವಿಲ್ಮಾ ರುಡಾಲ್.
ಇಷ್ಟಕ್ಕೂ ಈ ವಿಲ್ಮಾ ಯಾರು? ರೋಮ್‌ನ ಒಲಿಂಪಿಕ್ ಕೂಟದ ಪ್ರೇಕ್ಷಕರ ಸಂಭ್ರಮಕ್ಕೆ ನೆರೆಯನ್ನು ತಂದ ಆಕೆಯ ಸಾಧನೆಯೇನು?
ವಿಲ್ಮಾ ಹುಟ್ಟಿದ ಮನೆ, ಕಾಲ ಮತ್ತು ಹುಟ್ಟಿದ ಸ್ವರೂಪ- ಸಕಲವೂ ಬದುಕಿಗೆ ವಿರುದ್ಧವಾಗಿದ್ದವು. ಮೂವತ್ತರ ದಶಕದಲ್ಲಿ ಸಂಭವಿಸಿದ ಹಣದುಬ್ಬರದಿಂದ ಅಮೆರಿಕದ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೀಡಾಗಿತ್ತು. ಆಫ್ರಿಕಾ ಮೂಲಕ ಕಪ್ಪುಜನರ ವಂಶಾವಳಿ ಆಕೆಯದು. ತಂದೆ ಎಡ್ವರ್ಡ್ ರುಡಾಲ್ ಅವರದು ಬಹುದೊಡ್ಡ ಸಂಸಾರ. ಮೊದಲನೆ ಹೆಂಡತಿಯಿಂದ ವಿಚ್ಛೇದನ ಪಡೆದ ನಂತರ ಎರಡನೆ ಮದುವೆಯಾಗಿದ್ದ. ಎರಡು ದಾಂಪತ್ಯದಿಂದ ಹುಟ್ಟಿದ ಮಕ್ಕಳು ಬರೋಬ್ಬರಿ ಇಪ್ಪತ್ತೆರಡು. ಎರಡನೆ ಹೆಂಡತಿ ಬ್ಲಾಂಚೆ ರುಡಾಲ್‌ಗೆ ಎಂಟು ಜನ ಮಕ್ಕಳು. ಅವರಲ್ಲಿ ಆರನೆಯವಳು ವಿಲ್ಮಾ ರುಡಾಲ್. ಅಂದರೆ 22 ಜನ ಮಕ್ಕಳಲ್ಲಿ ವಿಲ್ಮಾ ಹುಟ್ಟಿದ್ದು ಇಪ್ಪತ್ತನೆಯವಳಾಗಿ.

ವಿಲ್ಮಾ ಹುಟ್ಟಿದ್ದು 1940ರ ಜೂನ್ 23 ರಂದು. ಆದರೆ ಬ್ಲಾಂಚೆ ರುಡಾಲ್‌ಗೆ ಸುಖಕರ ಪ್ರಸವವಾಗಿರಲಿಲ್ಲ. ನವಮಾಸ ತುಂಬಲು ಇನ್ನೂ ಒಂದು ತಿಂಗಳು ಇರುವಂತೆಯೇ ಅವಸರವಾಗಿ ಭೂಮಿಗೆ ಓಡಿಬಂದವಳು ವಿಲ್ಮಾ. ಆದರೆ ಹುಟ್ಟಿದಾಗ ಅವಳ ತೂಕ 1.8 ಕೆ.ಜಿಯಷ್ಟಿತ್ತು. ಮಗು ಉಳಿಯುವ ಭರವಸೆಯಿರಲಿಲ್ಲ. ವಿಲ್ಮಾ ಹುಟ್ಟಿದ್ದು ಟೆನೆನ್ಸಿಯ ಊರಿನಲ್ಲಿ. ಕಪ್ಪು ಜನರಿಗೆ ಸೌಲಭ್ಯಗಳನ್ನು ನಿರಾಕರಿಸಿದ ಜನಾಂಗೀಯವಾದ ಇನ್ನೂ ಅಲ್ಲಿ ಪ್ರಬಲವಾಗಿದ್ದ ಕಾಲ. ಹಾಗಾಗಿ ಹೆರಿಗೆಗೆ ದಾಖಲಾದ ಬ್ಲಾಂಚೆ ರುಡಾಲ್ ಮತ್ತು ಆಕೆಯ ನಿತ್ರಾಣ ಶಿಶುವಿಗೆ ಹೆಚ್ಚು ಕಾಲ ಆರೈಕೆ ಮಾಡಲು ಸ್ಥಳೀಯ ಸರಕಾರಿ ಆಸ್ಪತ್ರೆ ಅವಕಾಶ ನೀಡಲಿಲ್ಲ. ಸರಕಾರಿ ಆಸ್ಪತ್ರೆಯ ಸೌಲಭ್ಯಗಳ ಹಕ್ಕುದಾರಿಕೆ ಬಿಳಿಯರಿಗೆ ಮಾತ್ರವಾಗಿದ್ದ ಕಾಲ ಅದು. ಕ್ಲಾರ್ಕ್ಸ್‌ವಿಲ್ಲೆಯಲ್ಲಿ ಒಬ್ಬ ಕರಿಯ ವೈದ್ಯನಿದ್ದ. ಆದರೆ ಆತನ ಖರ್ಚನ್ನು ಪಾವತಿಸುವ ಶಕ್ತಿ ರುಡಾಲ್ ಕುಟುಂಬಕ್ಕಿರಲಿಲ್ಲ. ಆಗಲೇ ಇಪ್ಪತ್ತು ಜನರ ದೊಡ್ಡ ಕುಟುಂಬ. ಆದರೂ ಕಡು ಕಷ್ಟದಲ್ಲಿಯೂ ವಿಲ್ಮಾಳನ್ನು ಉಳಿಸಿಕೊಳ್ಳಲು ಇಡೀ ಕುಟುಂಬವೇ ಪಣತೊಟ್ಟಿತು.

ರುಡಾಲ್ ಕುಟುಂಬ ಮೊದಲು ಟೆನೆನ್ಸಿ ಪ್ರಾಂತದ ನ್ಯಾಶ್‌ವಿಲೆ ನಗರದ ಆಗ್ನೇಯಕ್ಕೆ 45 ಕಿ.ಮೀ. ದೂರವಿದ್ದ ಸೇಂಟ್ ಬೆತ್ಲೆಹೆಂ ಎಂಬ ಊರಿನ ಪುಟ್ಟ ಮನೆಯಲ್ಲಿದ್ದರು. ಅಲ್ಲಿ ಬೇಸಾಯ ಮಾಡಿಕೊಂಡಿದ್ದ ರುಡಾಲ್ ದಂಪತಿ ದುಡಿದು ಸ್ವಾಭಿಮಾನದ ಬದುಕು ನಡೆಸುತ್ತಿದ್ದರು. ವಿಲ್ಮಾ ಹುಟ್ಟಿದ ಸ್ವಲ್ಪ ದಿನದ ನಂತರ ಕುಟುಂಬವು ಹತ್ತಿರದ ಕ್ಲಾರ್ಕ್ಸ್‌ವಿಲೆ ಪಟ್ಟಣಕ್ಕೆ ಸ್ಥಳಾಂತರವಾಯಿತು. ತಂದೆ ರೈಲು ನಿಲ್ದಾಣದಲ್ಲಿ ಕೂಲಿಯಾಗಿ ದುಡಿದರೆ ತಾಯಿ ಐದಾರು ಮನೆಗಳಲ್ಲಿ ಮನೆಗೆಲಸದ ಆಳಾಗಿ ದುಡಿಯಲು ಪ್ರಾರಂಭಿಸಿದಳು.
ಪೀಚುದೇಹದ ಆದರೆ ಮುದ್ದು ಮುಖದ ವಿಲ್ಮಾಳ ಬಾಲ್ಯದ ಬದುಕು ಬರೀ ಕಾಯಿಲೆಯಲ್ಲೇ ಕಳೆಯಿತು. ವಿಲ್ಮಾಳ ತಾಯಿ ಮತ್ತು ಆಕೆಯ ಸೋದರ ಸೋದರಿಯರು ಸದಾ ಒಂದಲ್ಲ ಒಂದು ರೋಗದಿಂದ ನರಳುತ್ತಿದ್ದ ಕೂಸಿನ ಆರೈಕೆಯನ್ನು ಹಂಚಿಕೊಂಡರು. ಸೀತಾಳೆ ಸಿಡುಬು, ನಾಯಿಕೆಮ್ಮು, ಸ್ಕಾರ್ಲೆಟ್ ಜ್ವರ, ಸಿಡುಬು, ಡಬಲ್ ನ್ಯೂಮೋನಿಯಾ-ಹೀಗೆ ಹಲವಾರು ಕಾಯಿಲೆಗಳು ವಿಲ್ಮಾಳಲ್ಲಿ ಆಶ್ರಯಪಡೆಯಲು ಸರದಿಯ ಮೇಲೆ ಆಗಮಿಸುತ್ತಿದ್ದವು. ಒಡಹುಟ್ಟಿದವರ ಪ್ರೀತಿ ಆರೈಕೆಯ ನಡುವೆಯೂ ನಾಲ್ಕು ವರ್ಷದ ಹಸುಳೆ ವಿಲ್ಮಾ ಇದ್ದಕ್ಕಿದ್ದಂತೆ ನವೆಯತೊಡಗಿದಳು. ಓಡಾಡಲು ನಿರಾಕರಿಸಿದಳು. ವೈದ್ಯರ ಬಳಿ ಅವಳನ್ನು ಕರೆದುಕೊಂಡ ಹೋದಾಗ ಆಘಾತ ಕಾದಿತ್ತು. ಪೋಲಿಯೊ ಪೀಡಿತಳಾದ ವಿಲ್ಮಾಳ ಎಡಗಾಲು ಸಂಪೂರ್ಣ ನಿಷ್ಕ್ರಿಯವಾಗಿ ವಿರೂಪಗೊಂಡಿದ್ದು ತಿಳಿಯಿತು. ವಿಲ್ಮಾ ಇನ್ನು ಮುಂದೆ ಬದುಕಿನುದ್ದಕ್ಕೂ ಕುಂಟಿಯಾಗಿ, ಊನಗೊಂಡ ಕಾಲಿನಲ್ಲಿ ಅನ್ಯರ ಹಂಗಿನಲ್ಲಿ ಬದುಕಬೇಕಾದ ಅನಿವಾರ್ಯವನ್ನು ಊಹಿಸಿದ ತಾಯಿಯ ಎದೆಯೊಡೆಯಿತು.

ಆದರೆ ತಾಯಿ ಸುಲಭದಲ್ಲಿ ಸೋಲೊಪ್ಪುವಳಾಗಿರಲಿಲ್ಲ. ತನ್ನೂರಿನಿಂದ 50 ಮೈಲಿ ದೂರದಲ್ಲಿದ್ದ ಕರಿಯರ ಫಿಸ್ಕ್ ವೈದ್ಯ ವಿಶ್ವವಿದ್ಯಾನಿಲಯದ ಮೆಹರಿ ಆಸ್ಪತ್ರೆಗೆ ಮಗಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋದಳು. ಪೋಲಿಯೊ ಪೀಡಿತ ಮಕ್ಕಳ ಕಾಲಿಗೆ ನಿಯತವಾಗಿ ಮಾಲೀಶು ಮಾಡಿದರೆ ನಡೆಯುವಷ್ಟು ಕಸುವು ಕಾಲಿಗೆ ಬರಬಹುದೆಂಬ ಆಸೆಯಿಂದ ಸತತವಾಗಿ ಎರಡು ವರ್ಷ ವಾರಕ್ಕೆ ಮೂರು ಬಾರಿ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಳು. ಉಳಿದ ದಿನಗಳಲ್ಲಿ ಮನೆಯಲ್ಲಿ ಒಡಹುಟ್ಟಿದವರು ಎಣ್ಣೆ ತೀಡಿ, ಮಸಾಜು ಮಾಡಿ ವಿಲ್ಮಾಳನ್ನು ಉಲ್ಲಾಸಿತಳನ್ನಾಗಿಡಲು ಪ್ರಯತ್ನಿಸಿದರು. ಎರಡು ವರ್ಷಗಳ ನಂತರ ಆರು ವರ್ಷದ ಹುಡುಗಿ ವಿಲ್ಮಾ ಕಾಲಿಗೆ ಲೆಗ್‌ಬ್ರೇಸ್ (ಲೋಹದ ನಡೆಯುವ ಸಾಧನ) ತೊಟ್ಟು ಸ್ವಲ್ಪ ಸ್ವಲ್ಪ ನಡೆಯಲಾರಂಭಿಸಿದಳು. ಅವಳ ಸುಧಾರಣೆಯನ್ನು ಕಂಡ ವೈದ್ಯರು ಮನೆಯಲ್ಲಿಯೇ ಅವಳಿಗೆ ಹೆಚ್ಚಿನ ಚಿಕಿತ್ಸೆ ನೀಡುವ ವಿಧಾನವನ್ನು ಹೇಳಿಕೊಟ್ಟರು. ಮನೆ ಮಂದಿಯೆಲ್ಲ ವಿಲ್ಮಾಳಿಗೆ ಒಂದಲ್ಲ ಒಂದು ರೀತಿಯಲ್ಲಿ ನೆರವಾಗುತ್ತಾ ಅವಳ ಮನಸ್ಸನ್ನು ಗಟ್ಟಿಗೊಳಿಸಿದರು. ವಿಲ್ಮಾಳ ಸಂಕಲ್ಪ ಶಕ್ತಿ ಬಲಗೊಂಡಿತು.

ಹೀಗೆ ಐದು ವರ್ಷಗಳ ಕಾಲ ಎಡೆಬಿಡದ ಉಪಚಾರ ನಡೆಯಿತು. ಒಂದು ದಿನ ಆಕೆಯನ್ನು ನೋಡಲು ಬಂದ ವೈದ್ಯರಿಗೆ ಅಚ್ಚರಿ ಕಾದಿತ್ತು. ಅವರು ನೋಡುತ್ತಿದ್ದಂತೆಯೇ ಲೆಗ್‌ಬ್ರೇಸ್‌ಗಳನ್ನು ಕಳಚಿದ ವಿಲ್ಮಾ ಸಾಮಾನ್ಯ ಹುಡುಗಿಯಂತೆ ಎದ್ದು ನಿಂತು ಹೆಜ್ಜೆ ಹಾಕಿದಳು. ಅಲ್ಲಿಂದ ಆರಂಭವಾದ ನಡೆಯುವ ಆಟ ಕ್ರಮೇಣ ಓಟಕ್ಕೆ ತಿರುವು ಪಡೆಯಿತು. ವಿಲ್ಮಾಳ ಬದುಕು ಸಹ ಆ ಮೂಲಕ ಮಹತ್ತರ ಹೊರಳು ಹಾದಿ ಹಿಡಿಯಿತು.
ನಡೆದಾಡಲು ಆರಂಭಿಸಿದ ನಂತರ ತನ್ನ ಸೋದರ-ಸೋದರಿಯರು ಆಡುತ್ತಿದ್ದ ಬಾಸ್ಕೆಟ್‌ಬಾಲ್ ಅಂಗಳಕ್ಕೆ ಬಂದು ಅಭ್ಯಾಸವನ್ನು ವೀಕ್ಷಿಸುತ್ತಿದ್ದಳು. ಅವರೊಡನೆ ಆಡುವ ಬಯಕೆ ಚಿಗುರೊಡೆಯಿತು. ಕೊನೆಗೊಂದು ದಿನ ಹಠ ಹಿಡಿದು ಅಭ್ಯಾಸಕ್ಕೆ ಸೇರಿಕೊಂಡಳು. ಬರಿಗಾಲಿನಲ್ಲಿಯೇ ಯಾವುದೇ ಸಾಧನದ ಆಸರೆ ಪಡೆಯದೆ ಬಾಸ್ಕೆಟ್‌ಬಾಲ್ ಅಂಗಳದಲ್ಲಿ ಮಿಂಚಿನಂತೆ ಹರಿದಾಡುತ್ತಿದ್ದ ಮಗಳನ್ನು ಕಂಡ ತಾಯಿ ಬ್ಲಾಂಚೆ ರುಡಾಲ್‌ಗೆ ಕಣ್ಣು ತುಂಬಿ ಬಂತು. ನಿರೀಕ್ಷೆಗೂ ಮೀರಿದ ಲ ಅವಳ ಮತ್ತು ಕುಟುಂಬದ ಸದಸ್ಯರ ಶ್ರಮಕ್ಕೆ ದಕ್ಕಿತ್ತು.

ಅಷ್ಟೇ ಅಲ್ಲ ರುಡಾಲ್ ಕುಟುಂಬವಿದ್ದ ಹಿಂದಿನ ಬೀದಿಗಳಲ್ಲಿ ಬಿಡುವಿನ ವೇಳೆ ಮಕ್ಕಳೆಲ್ಲ ಓಡುವ ಸ್ಪರ್ಧೆಗಳನ್ನು ನಡೆಸುತ್ತಿದ್ದರು. ವಿಲ್ಮಾ ಅವುಗಳಲ್ಲೂ ಭಾಗವಹಿಸುತ್ತಿದ್ದಳು. ‘‘ನನಗೆ ಹನ್ನೆರಡು ವರ್ಷಗಳಾಗುವ ವೇಳೆಗೆ ನನ್ನ ನೆರೆಹೊರೆಯ ನನ್ನ ಓರಗೆಯ ಎಲ್ಲ ಮಕ್ಕಳಿಗೆ ನನ್ನ ಜೊತೆಯಲ್ಲಿ ಓಡುವ, ನೆಗೆಯುವ ಅಥವಾ ಯಾವುದೇ ಆಟದಲ್ಲಿ ಭಾಗವಹಿಸಿ ಗೆಲ್ಲುವ ಸವಾಲು ಹಾಕುತ್ತಿದ್ದೆ’’ ಎಂದು ವಿಲ್ಮಾ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು.

ಅಮೆರಿಕದ ದಕ್ಷಿಣ ಪ್ರಾಂತಗಳಲ್ಲಿ ಕಪ್ಪು ಜನರ ಮೇಲಿನ ಹಗೆತನ ಇನ್ನೂ ಮಾಸಿರದ ಕಾಲವದು. ಸಮಾನ ಹಕ್ಕುಗಳಿಗಾಗಿ ಹೋರಾಟ ಪ್ರಬಲವಾಗಿದ್ದರೂ ಕಪ್ಪು ಸಮುದಾಯ ಎಲ್ಲ ವಿಧದಲ್ಲೂ ಪ್ರತ್ಯೇಕತೆ ಅನುಭವಿಸುತ್ತಿತ್ತು. ಕಪ್ಪು ಹಾಗೂ ಬಿಳಿಯ ವಿದ್ಯಾರ್ಥಿಗಳು ಪ್ರತ್ಯೇಕ ಶಾಲೆಗಳಿಗೆ ಹೋಗುತ್ತಿದ್ದರು. ಶಿಕ್ಷಣ ಶುಲ್ಕ ಎರಡೂ ಸಮುದಾಯದ ಮಕ್ಕಳಿಗೆ ಸಮಾನವೇ ಆಗಿದ್ದರೂ ಕಪ್ಪು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದ ಶಾಲೆಗಳಲ್ಲಿ ಸಾಕಷ್ಟು ಉಪಾಧ್ಯಾಯರುಗಳಿರುತ್ತಿರಲಿಲ್ಲ. ಶಾಲಾ ಕೊಠಡಿಗಳಿಗೆ ಅಭಾವ. ಉತ್ತಮ ಗ್ರಂಥಾಲಯ, ಆಟದ ಮೈದಾನ, ಪುಸ್ತಕ, ಪೀಠೋಪಕರಣಗಳ ಕೊರತೆ ಕಾಡುತ್ತಿತ್ತು. ಸರಿಯಾದ ತರಬೇತುದಾರರೂ ಅಪರೂಪವಾಗಿದ್ದರು. ಇಂಥ ಸನ್ನಿವೇಶದಲ್ಲಿ ವಿಲ್ಮಾ ಕರಿಯರು ಮಾತ್ರವೇ ಇದ್ದ ಬರ್ಟ್ ಪ್ರೌಢಶಾಲೆಗೆ ಪ್ರವೇಶ ಪಡೆದಳು. ಜೂನಿಯರ್ ಹೈಸ್ಕೂಲ್ ಓದುತ್ತಿರುವಾಗ ಆಕೆಗೆ ಹನ್ನೆರಡು ವರ್ಷ. ಸೋದರಿ ಯೋಲಾಂಡಾಳನ್ನು ಅನುಸರಿಸಿ ಆಕೆಯೂ ಬಾಸ್ಕೆಟ್‌ಬಾಲ್ ತಂಡಕ್ಕೆ ಸೇರಿಕೊಂಡಳು. ಅಭ್ಯಾಸ ಮಾಡಿದ್ದು ಬಿಟ್ಟರೆ ಮೂರು ವರ್ಷಗಳಲ್ಲಿ ತರಬೇತುದಾರ ಆಕೆಯನ್ನು ಒಂದು ಆಟಕ್ಕೂ ಸೇರಿಸಲಿಲ್ಲ. ಆದರೆ ಬದುಕಿನುದ್ದಕ್ಕೂ ಕಾಯುವುದನ್ನು ಕಲಿತಿದ್ದ ವಿಲ್ಮಾ ತನ್ನ ಸರದಿಗಾಗಿ ನಿರೀಕ್ಷಿಸುತ್ತಾ ಅಭ್ಯಾಸ ಮುಂದುವರಿಸಿದಳು.

ಹೈಸ್ಕೂಲಿನ ಎರಡನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವಾಗ ಆಕೆ ಆಡುವ ತಂಡಕ್ಕೆ ಅಕೃತವಾಗಿ ಆಯ್ಕೆಯಾದಳು. ಅದುವರೆವಿಗೂ ತಾಳ್ಮೆಯಿಂದ ಕ್ರೋಡೀಕರಿಸಿಕೊಂಡಿದ್ದ ಶಕ್ತಿಯನ್ನೆಲ್ಲ ಸೊಓಂೀಟಿಸಿದಂತೆ ವಿಲ್ಮಾ ಪಂದ್ಯದಿಂದ ಪಂದ್ಯಕ್ಕೆ ತನ್ನ ಸಾಮರ್ಥ್ಯವನ್ನು ಮೆರೆದಳು. ತನ್ನ ಚುರುಕು ವೇಗ, ಆಕರ್ಷಕ ಡ್ರಿಬ್ಲಿಂಗ್ ಮತ್ತು ಕರಾರುವಾಕ್ಕು ಎಸೆತದಿಂದ ಬುಟ್ಟಿಯನ್ನು ತುಂಬುತ್ತಿದ್ದ ವಿಲ್ಮಾ ಇದ್ದಕ್ಕಿದ್ದಂತೆ ಎಲ್ಲರ ಕಣ್ಮಣಿಯಾದಳು. ಸ್ಪರ್ಧೆಯಲ್ಲಿ ಭಾಗವಹಿಸಿದ ಸೀಸನ್‌ನಲ್ಲಿ ಆಕೆ 25 ಪಂದ್ಯಗಳಲ್ಲಿ 803 ಪಾಯಿಂಟ್ ಸಂಪಾದಿಸಿ ಬಾಲಕಿಯರ ಬಾಸ್ಕೆಟ್‌ಬಾಲ್ ತಂಡದ ದಾಖಲೆಯನ್ನು ನಿರ್ಮಿಸಿದಳು. ಆಕೆಯ ಚೈತನ್ಯಪೂರ್ಣ ಆಟದಿಂದಾಗಿ ತಂಡ ಆ ಪ್ರಾಂತದ ಚಾಂಪಿಯನ್‌ಶಿಪ್ ಗಳಿಸಲು ಸಾಧ್ಯವಾಯಿತು. ಅದೇ ಅವಯಲ್ಲಿ ಅವಳು ಟ್ರ್ಯಾಕ್ ಸ್ಪರ್ಧೆಗಳಲ್ಲೂ ಭಾಗವಹಿಸಿ ಬಹುಮಾನಗಳನ್ನು ಕೊಳ್ಳೆ ಹೊಡೆಯುತ್ತಾ ಹೋದಳು.

ರಾಜ್ಯ ಬಾಸ್ಕೆಟ್‌ಬಾಲ್ ಟೂರ್ನ್ ಮೆಂಟ್ ನಡೆಯುತ್ತಿದ್ದ ಕಾಲದಲ್ಲಿ ಎರಡು ಕಣ್ಣು ವಿಲ್ಮಾಳ ಚುರುಕು ನಡೆಯನ್ನು ಗಮನಿಸುತ್ತಿದ್ದವು. ಆಕೆ ಬಾಸ್ಕೆಟ್‌ಬಾಲ್ ಆಟಗಾರ್ತಿಯಾಗಿ ಉತ್ತಮ ಪಟುವೇನೋ ನಿಜ! ಆದರೆ ಓಟಗಾರ್ತಿಯಾದರೆ ಅಪ್ರತಿಮ ಸ್ಪರ್ಯಾಗುವ ಸಾಧ್ಯತೆಯನ್ನು ಆ ಕಣ್ಣುಗಳು ಅಳೆದು ಸುರಿದು ನೋಡುತ್ತಿದ್ದವು. ಆ ಕಣ್ಣಿನ ಒಡೆಯ ಎಡ್ವರ್ಡ್ ಟೆಂಪಲ್. ಟೆನೆನ್ಸಿ ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರ ಟ್ರ್ಯಾಕ್ ತಂಡದ ತರಬೇತುದಾರರಾಗಿ ಪ್ರಸಿದ್ಧರಾಗಿದ್ದ ಎಡ್ವರ್ಡ್ ಟೆಂಪಲ್ ವಿಲ್ಮಾಳಲ್ಲಿ ದೊಡ್ಡ ಸಾಧನೆಯೊಂದು ಹೊಮ್ಮಲು ಸಿದ್ಧವಾಗಿರುವುದನ್ನು ಗುರುತಿಸಿದರು. ವಿಲ್ಮಾಳನ್ನು ಸಂಸಿ ತನ್ನ ಅಭಿಪ್ರಾಯವನ್ನು ತಿಳಿಸಿದರು. ಆದರೆ ವಿಲ್ಮಾ ಓದುತ್ತಿದ್ದ ಬರ್ಟ್ ಶಾಲೆಯಲ್ಲಿ ಟ್ರ್ಯಾಕ್ ತಂಡವನ್ನು ತರಬೇತುಗೊಳಿಸುವಷ್ಟು ಆರ್ಥಿಕ ಮೂಲವಿರಲಿಲ್ಲ. ಹಾಗಾಗಿ ಟೆನೆನ್ಸಿ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಬೇಸಿಗೆಯ ತರಬೇತಿ ಶಿಬಿರಕ್ಕೆ ಬರುವಂತೆ ವಿಲ್ಮಾಳಿಗೆ ಆಹ್ವಾನ ನೀಡಿದರು. ಅಲ್ಲಿಂದ ವಿಲ್ಮಾಳ ಬದುಕು ಮತ್ತೊಂದು ಹೊರಳುದಾರಿ ಹಿಡಿಯಿತು.

ಎಡ್ವರ್ಡ್ ಟೆಂಪಲ್‌ರವರ ಉಸ್ತುವಾರಿಯಲ್ಲಿ ವಿಲ್ಮಾಳ ಸಂಕಲ್ಪ ಶಕ್ತಿ ಗಟ್ಟಿಯಾಯಿತು. ಓಡುವುದು ಅವಳ ನಿತ್ಯ ಕರ್ಮವಾಯಿತು. ತಪಸ್ಸಾಯಿತು. ಹೈಸ್ಕೂಲ್‌ನಲ್ಲಿ ನಡೆದ ನಾಲ್ಕು ಟೂರ್ನಮೆಂಟ್‌ಗಳಲ್ಲಿ ವಿಲ್ಮಾ ತಾನು ಭಾಗವಹಿಸಿದ ಒಂದೂ ಓಟದ ಸ್ಪರ್ಧೆಯಲ್ಲಿ ಸೋಲು ಕಾಣಲಿಲ್ಲ. ಹದಿನಾರು ವರ್ಷಕ್ಕೆ ಕಾಲಿರಿಸಿದಾಗ ಆಕೆಯ ಕುಟುಂಬಕ್ಕೆ ನಂಬಲಾಗದ ವಾರ್ತೆಯೊಂದು ತಲುಪಿತು. ವಿಲ್ಮಾ 1956ರ ಮೆಲ್ಬರ್ನ್ ಒಲಿಂಪಿಕ್ಸ್‌ಗೆ ರಿಲೇ ತಂಡಕ್ಕೆ ಆಯ್ಕೆಯಾಗಿದ್ದಳು.

ಎಡ್ವರ್ಡ್ ಟೆಂಪಲ್ ಅವರು ತರಬೇತಿಗೆ, ಅರ್ಪಣಾ ಮನೋಭಾವಕ್ಕೆ, ಸ್ಪರ್ಧಾಳುಗಳಲ್ಲಿ ಸೂರ್ತಿ ತುಂಬುವುದಕ್ಕೆ ದಂತಕತೆಯಾಗಿದ್ದ ವ್ಯಕ್ತಿ. ಟೆನೆನ್ಸಿ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ ವಿಭಾಗದ ಪ್ರೊೆಸರ್ ಆಗಿದ್ದ ಅವರು ಅಥ್ಲೀಟುಗಳ ತರಬೇತುದಾರರೂ ಆಗಿದ್ದರು. ಆದರೆ ಅದಕ್ಕಾಗಿ ವೇತನ ಪಡೆಯುತ್ತಿರಲಿಲ್ಲ. ಪ್ರತಿಭಾವಂತರನ್ನು ಓಟಕ್ಕೆ ಅಣಿಗೊಳಿಸುವುದು ಅವರಿಗೊಂದು ತಪಸ್ಸು. ಓಟದ ಸ್ಪರ್ಧೆಗಳಿಗೆ ಸ್ಪರ್ಧಾಳುಗಳನ್ನು ತನ್ನ ಕಾರಿನಲ್ಲಿಯೇ ಕರೆದೊಯ್ಯುತ್ತಿದ್ದ ಟೆಂಪಲ್ ಪ್ರತಿಭಾವಂತರನ್ನು ಗುರುತಿಸಿದ ತಕ್ಷಣವೇ ಅವರನ್ನು ಕೆತ್ತಿ ಸುಂದರ ವಿಗ್ರಹವನ್ನಾಗಿಸುತ್ತಿದ್ದರು. ತಮ್ಮ ಖರ್ಚಿನಲ್ಲಿಯೇ ಧೂಳು ತುಂಬಿದ ಮೈದಾನವನ್ನು ಶುಚಿಗೊಳಿಸಿ ಓಟಕ್ಕೆ ಸಹಾಯಕವಾಗುವಂತೆ ಅಣಿಗೊಳಿಸುತ್ತಿದ್ದರು. ಆದರೆ ಔದಾರ್ಯ ಪುರುಷರಾದ ಟೆಂಪಲ್ ತರಬೇತಿಯ ಸಮಯದಲ್ಲಿ ಕಠಿಣವಾಗಿರುತ್ತಿದ್ದರು. ಅಭ್ಯಾಸಕ್ಕೆ ತಡವಾಗಿ ಬಂದರೆ, ತಡವಾದ ಒಂದೊಂದು ನಿಮಿಷಕ್ಕೂ ಒಂದು ಸುತ್ತು ಹೆಚ್ಚು ಓಡುವ ಶಿಕ್ಷೆ ವಿಸುತ್ತಿದ್ದರು. ಒಮ್ಮೆ ರುಡಾಲ್ ನಿದ್ರಾವಶಳಾಗಿ 30 ನಿಮಿಷ ತಡವಾಗಿ ಬಂದಾಗ ಹೆಚ್ಚುವರಿಯಾಗಿ ಮೂವತ್ತು ಸುತ್ತು ಓಡುವ ಶಿಕ್ಷೆ ನೀಡಿದರು. ಮಾರನೆಯ ದಿನ ರುಡಾಲ್ ಅಭ್ಯಾಸ ಆರಂಭವಾಗುವುದಕ್ಕೆ ಮೂವತ್ತು ನಿಮಿಷ ಮೊದಲೇ ಆಗಮಿಸಿದ್ದಳು. ವೈಯಕ್ತಿಕ ಸ್ಪರ್ಧಾಳುಗಳ ಪ್ರತಿಭೆಗೆ ಸಾಣೆ ಹಿಡಿಯುವುದರ ಜೊತೆಗೆ ಒಂದು ತಂಡವಾಗಿ ಅವರು ರೂಪುಗೊಳ್ಳುವ ಅಗತ್ಯವನ್ನು ಟೆಂಪಲ್ ಮನವರಿಕೆ ಮಾಡಿಕೊಡುತ್ತಿದ್ದರು.

ಹುಟ್ಟಿದ ಕೆಲವೇ ದಿನಗಳಲ್ಲಿ ಪೋಲಿಯೊ ಪೀಡಿತಳಾಗಿ ಜೀವನದುದ್ದಕ್ಕೂ ಹೆರವರ ಆಸರೆ, ಗಾಲಿಕುರ್ಚಿಯ ಆಶ್ರಯದಲ್ಲಿಯೇ ಬದುಕುವ ಶಾಪಕ್ಕೆ ಗುರಿಯಾಗಿದ್ದ ವಿಲ್ಮಾ ಟೆಂಪಲ್ ಅವರ ಗರಡಿಯಲ್ಲಿ ಎದ್ದುನಿಂತು ಜಗತ್ತನ್ನು ಜಯಿಸಲು ಸನ್ನದ್ಧಳಾಗಿದ್ದಳು!
1956ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಮೆರಿಕ ತಂಡದ 400 ಗಿ 4 ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಲ್ಮಾ ಕಂಚಿನ ಪದಕ ಗೆದ್ದ ತಂಡದ ಸದಸ್ಯೆಯಾಗಿ ಹಿಂದಿರುಗಿದಳು. ಆಗ ಆಕೆಯ ವಯಸ್ಸು ಕೇವಲ 16.
1957ರಲ್ಲಿ ಟೆನೆನ್ಸಿ ಸ್ಟೇಟ್ ವಿಶ್ವವಿದ್ಯಾನಿಲಯಕ್ಕೆ ಪ್ರಾಥಮಿಕ ಶಿಕ್ಷಣ ವಿಷಯಗಳಲ್ಲಿ ಪದವಿ ಪಡೆಯಲು ವಿಲ್ಮಾ ದಾಖಲಾದಳು. ಓದುವುದನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ಸಮಯದಲ್ಲಿ ಓಟದ ಅಭ್ಯಾಸದಲ್ಲಿ ನಿರತಳಾದಳು. ಈ ಕಠಿಣಶ್ರಮ ಆಕೆಯ ದೇಹದ ಮೇಲೆ ಮಾರಕ ಪರಿಣಾಮ ಬೀರಿತು. 1958ರಲ್ಲಿ ನಡೆದ ಬಹುತೇಕ ಸ್ಪರ್ಧೆಗಳಲ್ಲಿ ಭಾಗವಹಿಸಲಾಗಲಿಲ್ಲ. ಅನೇಕ ಕಾಯಿಲೆಗಳಿಂದ ವಿಲ್ಮಾ ಜರ್ಝರಿತಳಾದಳು.

ಆದರೆ 1959ರಲ್ಲಿ ಗೋಡೆಗೆ ತಾಕಿದ ಚೆಂಡು ಪುಟಿದೆದ್ದು ಬರುವಂತೆ ಕಾಯಿಲೆಯ ಗೂಡನ್ನು ಹರಿದು ಹಾರುವ ಚಿಟ್ಟೆಯಾಗಿ ಹೊರಬಂದಳು. ಹಿಂದಿನ ಾರಂಗೆ ಮರಳಿದಳು. ಆದರೆ ಅಮೆರಿಕ ಮತ್ತು ಅಂದಿನ ಅವಿಭಜಿತ ರಷ್ಯಾದ ನಡುವೆ ನಡೆದ ಪಂದ್ಯದ ನಿರ್ಣಾಯಕ ಹಂತದಲ್ಲಿ ಸ್ನಾಯು ಸೆಳೆತದಿಂದ ಹಿಂದೆಗೆದಳು. ಜೀವನದುದ್ದಕ್ಕೂ ವಿಲ್ಮಾಳ ಸಂಗಾತಿಯಾಗಿದ್ದ ಎಡ್ವರ್ಡ್ ಟೆಂಪಲ್ ತನ್ನ ಶಿಷ್ಯೆ ಸಂಪೂರ್ಣವಾಗಿ ಗುಣಮುಖವಾಗುವವರೆಗೆ ಉಸ್ತುವಾರಿ ವಹಿಸಿದರು. 1960ರ ವೇಳೆಗೆ ಇಟಲಿಯ ರೋಂನಲ್ಲಿ ನಡೆಯಲಿರುವ ಒಲಿಂಪಿಕ್ ಕೂಟಕ್ಕೆ ಹೊರಡಲು ಸಿದ್ಧಳಾದಳು.

1960ರ ಬೇಸಗೆ ರೋಮ್ ನಗರದ ಸ್ಟೇಡಿಯಂ ಒಲಿಂಪಿಕೋನಲ್ಲಿ ವಿಲ್ಮಾ ಸ್ಪರ್ಧೆಗೆ ಸಿದ್ಧಳಾಗಿ ತನ್ನ ಸಾಲಿನಲ್ಲಿ ನಿಂತಾಗ ಆಗಸದಲ್ಲಿ ಸೂರ್ಯ ಉರಿಯುವ ಕೆಂಡವಾಗಿದ್ದ. ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಕ್ರೀಡಾಂಗಣ ಅಕ್ಷರಶಃ ಬಾಣಲೆಯಾಗಿತ್ತು. ಅದಾಗಲೇ ವಿಲ್ಮಾಳ ಪ್ರಸಿದ್ಧಿಯನ್ನು ಅರಿತಿದ್ದ ಎಂಬತ್ತು ಸಾವಿರ ಪ್ರೇಕ್ಷಕರು ಉಸಿರು ಬಿಗಿ ಹಿಡಿದು ಕೂತಿದ್ದರು. ನೂರು ಮೀಟರ್ ಸ್ಪರ್ಧೆಯನ್ನು ಅಂತಿಮ ಸುತ್ತಿನಲ್ಲಿ ವಿಲ್ಮಾ ರುಡಾಲ್ 11 ಸೆಕೆಂಡ್‌ನಲ್ಲಿ ಮುಗಿಸಿ ಮೊದಲಿಗಳಾದಳು. ಅದು ಆವರೆಗಿನ ಮಹಿಳೆಯರ ವಿಭಾಗದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿತ್ತು. ಆದರೂ ಓಟದ ದಿಕ್ಕಿಗೆ ಪೂರಕವಾಗಿ ಗಾಳಿ ಬೀಸುತ್ತಿದ್ದ ಕಾರಣ ಆ ದಾಖಲೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಆದರೆ ಒಲಿಂಪಿಕ್ಸ್ ನ ಮೊದಲ ಸ್ವರ್ಣ ಪದಕ ವಿಲ್ಮಾಳ ಕೊರಳನ್ನಲಂಕರಿಸಿತು. ಆ ನಂತರ ನಡೆದ 200 ಮೀಟರ್ ಓಟದ ಹೀಟ್ಸ್‌ನಲ್ಲಿ 23.8 ಸೆಕೆಂಡ್‌ಗಳಲ್ಲಿ ಓಡಿ ಇನ್ನೊಂದು ಒಲಿಂಪಿಕ್ ದಾಖಲೆ ಸ್ಥಾಪಿಸಿದಳು. ಅಂತಿಮ ಸ್ಪರ್ಧೆಯನ್ನು 24 ಸೆಕೆಂಡ್‌ಗಳಲ್ಲಿ ಮುಗಿಸಿದರೂ ಮತ್ತೆ ಮೊದಲನೆಯವಳಾಗಿ ಎರಡನೆ ಒಲಿಂಪಿಕ್ ಪದಕ ಗೆದ್ದಳು.
ವೇಗದ ಓಟದ ಎರಡು ಭಾಗಗಳಲ್ಲಿ ಸ್ವರ್ಣ ಪದಕ ಗೆದ್ದ ವಿಲ್ಮಾಳನ್ನು ಪತ್ರಿಕೆಗಳು ಮಹಿಳಾ ಚರಿತ್ರೆಯಲ್ಲಿನ ವೇಗದ ಓಟಗಾರ್ತಿ ಎಂದು ಬಣ್ಣಿಸಿದವು. ಇಟಲಿಯನ್ನರು ಆಕೆಯನ್ನು ಲಾ ಗಜೆಲ್ ನೀಗ್ರಾ (ಕಪ್ಪು ಜಿಂಕೆ) ಎಂದು ಹಾಡಿಹೊಗಳಿದರೆ ್ರೆಂಚರ ಪಾಲಿಗೆ ಆಕೆ ಲಾ ಪೆರ್ಲೆ ನೊಯಿರೆ (ಕರಿ ಮುತ್ತು) ಆದಳು.

1960ರ ಸೆಪ್ಟಂಬರ್ 16ರಂದು ಮಹಿಳೆಯರ 4ಗಿ400 ಮೀಟರ್ ರಿಲೇ ಸ್ಪರ್ಧೆ ಏರ್ಪಟ್ಟಿತ್ತು. ಅಮೆರಿಕ ತಂಡದಲ್ಲಿ ಮಾರ್ತಾ ಹಡ್ಸನ್, ಲೂಸಿಂಡಾ ವಿಲಿಯಮ್ಸ್, ಬಾರ್ಬರಾ ಜೋನ್ಸ್ ಜೊತೆಗೆ ವಿಲ್ಮಾ ರುಡಾಲ್ ಮೈದಾನಕ್ಕೆ ಬಂದಿಳಿದಳು. ಎಲ್ಲರೂ ಟೆನೆನ್ಸಿ ಪ್ರಾಂತದವರೇ ಆಗಿದ್ದು ವಿಶೇಷ. ಪರಿಪೂರ್ಣವಾದ ಹೊಂದಾಣಿಕೆಯಿದ್ದ ತಂಡ ಹೀಟ್ಸ್‌ನಲ್ಲಿ 44.4 ಸೆಕೆಂಡ್‌ಗಳಲ್ಲಿ ಓಡಿ ವಿಶ್ವದಾಖಲೆಯನ್ನು ನಿರ್ಮಿಸಿತು. ತಂಡದ ಕೊನೆಯವಳಾಗಿ ಓಡಿದ ವಿಲ್ಮಾ ಚಿಗರೆಯಂತೆ ಎಲ್ಲರನ್ನು ಹಿಂದಿಕ್ಕಿ ಓಟವನ್ನು ಮುಗಿಸಿದ್ದಳು. ಆದರೆ ೈನಲ್ ಓಟದಲ್ಲಿ ಬೇಟನ್ ಪಡೆಯುವಾಗ ಸ್ವಲ್ಪ ಎಡವಟ್ಟಾದರೂ ತನಗಿಂತ ಸ್ವಲ್ಪ ಮುಂದಿದ್ದ ಜರ್ಮನಿ ಹಾಗೂ ಇನ್ನೊಂದು ಅಮೆರಿಕ ತಂಡದ ಆಂಕರ್ (ಕೊನೆಯವರು) ಓಟಗಾರರನ್ನು ಹಿಂದಿಕ್ಕಿ ಸ್ಪರ್ಧೆಯನ್ನು 45 ಸೆಕೆಂಡ್‌ಗಳಲ್ಲಿ ಮುಗಿಸಿದಳು. ಅಲ್ಲಿಗೆ ಭಾಗವಹಿಸಿದ್ದ ಎಲ್ಲ ಮೂರು ವಿಭಾಗಗಳಲ್ಲಿಯೂ ಪದಕ ಗೆದ್ದ ವಿಕ್ರಮ ಆಕೆಯದಾಯಿತು. ಓಟದ ವಿಭಾಗಗಳಲ್ಲಿ ಒಂದೇ ಕೂಟದಲ್ಲಿ ಮೂರು ಸ್ವರ್ಣ ಪದಕ ಗೆದ್ದ ಮೊದಲ ಅಮೆರಿಕನ್ ಪಟುವಾಗಿ ಹೊಮ್ಮಿದ ವಿಲ್ಮಾ ಸಂಕಲ್ಪ ಶಕ್ತಿಯ ಸಂಕೇತವಾಗಿ ಗೋಚರಿಸಿದಳು.

 1960ರ ಒಲಿಂಪಿಕ್ಸ್ ವಿಲ್ಮಾ, ಟೆಂಪಲ್ ಹಾಗೂ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಎರಡು ದೃಷ್ಟಿಯಿಂದ ಸಂಭ್ರಮದ ವರ್ಷ. ಅದೇ ಕೂಟದಲ್ಲಿ ಕ್ಯಾಸಿಯಸ್ �

Writer - ಡಾ. ಕೆ. ಪುಟ್ಟಸ್ವಾಮಿ

contributor

Editor - ಡಾ. ಕೆ. ಪುಟ್ಟಸ್ವಾಮಿ

contributor

Similar News