ಮಕ್ಕಳಲ್ಲಿ ಕಣ್ಣಿನ ರೋಗಗಳು

Update: 2016-10-23 13:42 GMT

ಒಮ್ಮೆ ಗ್ಲಾಕೋಮ ಇದೆಯೆಂದು ತಪಾಸಣೆಯಿಂದ ತಿಳಿದುಬಂದ ಮೇಲೆ ನಿಯಮಿತವಾಗಿ, ಜೀವನಪರ್ಯಂತ ಎಚ್ಚರಿಕೆಯನ್ನು ವಹಿಸುವುದು ಉತ್ತಮ. ಗ್ಲಾಕೋಮವನ್ನು ನಿಯಂತ್ರಣಕ್ಕೆ ತರಬಹುದಾದರೂ, ಈಗಾಗಲೇ ಯಾವುದಾದರೂ ಗ್ಲಾಕೋಮಾದಿಂದ ನ್ಯೂನತೆ ಕಂಡು ಬಂದಿದ್ದಲ್ಲಿ ಅದನ್ನು ಸರಿಪಡಿಸಲಾಗದು. ಗ್ಲಾಕೋಮವನ್ನು ಐ ಡ್ರಾಪ್ಸ್, ಗುಳಿಗೆಗಳು, ಲೇಸರ್ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದ

ನಾವು ಯಾರಿಗೂ ಕಮ್ಮಿಯಿಲ್ಲ ಎಂಬ ರಿಯಾಲಿಟಿ ಶೋ. ಅದರಲ್ಲಿ ವಿಕಲ ಚೇತನರಿಂದ ಹಾಡಿನ ಸ್ಪರ್ಧೆ. ಅದಕ್ಕಿರುವ ಮೂವರು ತೀರ್ಪುಗಾರರಲ್ಲಿ ನಾನೂ ಒಬ್ಬ. ವಿವಿಧ ರೀತಿಯ ಅಂಗವೈಕಲ್ಯವನ್ನು ಮೆಟ್ಟಿ ತಮ್ಮ ಹಾಡುವ ಪ್ರತಿಭೆಯನ್ನು ಪ್ರದರ್ಶಿಸುವ ಎಷ್ಟೋ ವಿಕಲ ಚೇತನರಿಗೆ ಗದುಗಿನ ಪಂಚಾಕ್ಷರಿ ಗವಾಯಿಗಳೇ ಸ್ಫೂರ್ತಿ. ಎಷ್ಟೆಷ್ಟೋ ಅಂಧರು ಅವರ ಆಶ್ರಮದಲ್ಲಿ ನಾನಾ ರೀತಿಯ ವಾದ್ಯಗಳನ್ನು ನುಡಿಸುವ, ಹಾಡುವ ವಿದ್ಯೆಯನ್ನು ಸಾಂಪ್ರದಾಯಕವಾಗಿಯೇ ಕಲಿಯುತ್ತಾರೆ. ಅವರು ಬಹಳ ಶಾಸ್ತ್ರೀಯವಾಗಿ ಕರಾರುವಕ್ಕಾಗೂ ಇರುತ್ತಾರೆ. ಹಾಗೆ ಬಂದಿರುವ ಅನೇಕ ಅಂಧ ಮಕ್ಕಳನ್ನು ಮತ್ತು ಅವರ ಪೋಷಕರನ್ನು ಮಾತಾಡಿಸಿದಾಗ ತಿಳಿದುದ್ದೇನೆಂದರೆ ಎಷ್ಟೋ ಮಕ್ಕಳು ಹುಟ್ಟಿದಾಗಿನಿಂದಲೇ ಅಂಧರಾಗಿರಲಿಲ್ಲ. ಪೋಷಕರ ನಿರ್ಲಕ್ಷ್ಯ ಅಥವಾ ರೋಗವನ್ನು ಗುರುತಿಸುವುದರಲ್ಲಿ ಉಂಟಾಗಿರುವ ವಿಳಂಬ ಅಥವಾ ಅದರ ಬಗೆಗಿರುವ ಅಜ್ಞಾನದಿಂದ ಸಮಯ ಮೀರಿ ಹೋಗಿ ಅಂಧರಾಗಿದ್ದಾರೆ. ನಾನು ಮಾತಾಡಿಸಿದ ಹದಿಮೂರು ಜನ ಮಕ್ಕಳಲ್ಲಿ ಎಂಟು ಜನ ಮಕ್ಕಳಿಗೆ ಬಂದಿದ್ದ ಕಣ್ಣಿನ ರೋಗವೆಂದರೆ ಗ್ಲಾಕೋಮ. ನನಗೆ ತಿಳಿದಂತೆ ನಲವತ್ತು ವರ್ಷದ ಮೇಲ್ಪಟ್ಟವರಿಗೆ ಈ ರೋಗ ಬರುವುದು. ಆದರೆ ಕೆಲವು ಮಕ್ಕಳಿಗೇ ಬಂದಿರುವುದು ಆಶ್ಚರ್ಯ ಎನಿಸಿತು. ಅವರ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿದಾಗ ಸಣ್ಣ ವಯಸ್ಸಿನಲ್ಲಿಯೇ ಆ ಮಕ್ಕಳಿಗೆ ಸಕ್ಕರೆ ಕಾಯಿಲೆ ಇತ್ತು ಎಂದು ಹೇಳಿದರು. ಆದರೂ ಕಣ್ಣು ಕಾಣದೇ ಇರುವಷ್ಟು ಕಾಯಿಲೆಯು ಅಷ್ಟು ಸಣ್ಣವಯಸ್ಸಿಗೆ ವೃದ್ಧಿಸುತ್ತದೆಯೇ? ವೈದ್ಯರು ಮತ್ತು ತಜ್ಞರು ಹೇಳಬೇಕು. ಆದರೂ ಇದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವುದು ಒಳ್ಳೆಯದು.

ಏನಿದು ಗ್ಲಾಕೋಮ?

ವಿಶ್ವದಲ್ಲಿ ಗ್ಲಾಕೋಮವು ಅಂಧತ್ವಕ್ಕೆ ಒಂದು ಮುಖ್ಯವಾದ ಕಾರಣವಾಗಿ ಪರಿಣಮಿಸಿದೆ. ಸರಿಸುಮಾರು ನೂರಕ್ಕೆ ಇಬ್ಬರಲ್ಲಿ ಈ ಗ್ಲಾಕೋಮ ಕಾಣಿಸುವುದು. ಕಣ್ಣಿನ ಪೊರೆಯಿಂದಾಗಿ ದೃಷ್ಟಿ ಕಳೆದುಕೊಳ್ಳುವಂತೆಯೇ, ಗ್ಲಾಕೋಮದಲ್ಲಿ ಕಳೆದುಕೊಳ್ಳುವಂತಹ ದೃಷ್ಟಿಯನ್ನು ಮರಳಿ ಪಡೆಯಲಾಗುವುದಿಲ್ಲ. ಆದರೆ, ಅದೃಷ್ಟವಶಾತ್, ಪ್ರಾರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಂಡು, ಅದಕ್ಕೆ ತಕ್ಕಂತಹ ಸೂಕ್ತ ಚಿಕಿತ್ಸೆಯನ್ನು ಪಡೆಯುವುದರಿಂದ ದೃಷ್ಟಿ ಹಾನಿಯನ್ನು ತಡೆಯುವ ಸಾಧ್ಯತೆಗಳಿವೆ. ಗ್ಲಾಕೋಮ ಎಂದರೆ, ಕಣ್ಣಿನ ನರಮಂಡಲದ ಸ್ಥಾನಗಳಲ್ಲಿ ವಿಪರೀತ ಒತ್ತಡವುಂಟಾಗುವುದರಿಂದ ಉಂಟಾಗುವ ರೋಗ. ಇದು ಹೇಗೆ ಉಂಟಾಗುವುದು? ಕಣ್ಣಿನ ಒಳಭಾಗದಲ್ಲಿ ದ್ರವಸ್ಥಿತಿಯಿದ್ದು, ಅದು ತಾನೇ ಕಣ್ಣಿಂದ ಹೊರಬೀಳಲ್ಪಡು ತ್ತಿರುತ್ತದೆ. ತೆರೆದಿರುವ ನೀರಿನ ನಲ್ಲಿ ಮತ್ತು ಸಿಂಕ್ ರೀತಿಯಲ್ಲಿ ಕಣ್ಣನ್ನು ಕಲ್ಪಿಸಿಕೊಳ್ಳಿ. ಸಿಂಕ್‌ನೊಳಗೆ ಬೀಳುತ್ತಿರುವ ನೀರು, ಡ್ರೈನೇಜ್ (ಒಳಚರಂಡಿ) ಸರಿ ಇದ್ದ ಪಕ್ಷದಲ್ಲಿ, ಅಲ್ಲಿ ನಿಲ್ಲದೇ ಹೊರಗೆ ಹರಿದುಹೋಗುತ್ತಿರುತ್ತದೆ. ಆದರೆ, ಡ್ರೈನೇಜ್‌ನಲ್ಲಿ ಏನಾದರೂ ಸಿಕ್ಕಿ ಹಾಕಿಕೊಂಡು ಹರಿಯುವಿಕೆಗೆ ತೊಡಕುಂಟಾದರೆ, ಆಗ ಸಮಸ್ಯೆ ಉದ್ಭವಿಸುತ್ತದೆ. ನೀರು ಶೇಖರವಾಗತೊಡಗುವುದು. ಹಾಗೆಯೇ, ಕಣ್ಣಿನ ಡ್ರೈನೇಜ್ ವ್ಯವಸ್ಥೆಯಲ್ಲಿ ತೊಡಕುಂಟಾದರೆ, ಕಣ್ಣಿನಲ್ಲಿ ಹರಿದು ಹೋಗಬೇಕಾಗಿರುವ ದ್ರವವು ಅಲ್ಲಿಯೇ ಶೇಖರವಾಗತೊಡಗುತ್ತದೆ. ಅದು ಹೆಚ್ಚಿದಂತೆಲ್ಲಾ ಕಣ್ಣಿನ ಒಳಭಾಗದಲ್ಲಿ ಒತ್ತಡ ಉಂಟಾಗತೊಡಗುವುದು. ಈ ಒತ್ತಡವನ್ನು ಇಂಟ್ರಾಕ್ಯುಲರ್ ಪ್ರೆಶರ್ (ಐಓಪಿ) ಅಥವಾ ಒಳಗಣ್ಣಿನ ಒತ್ತಡವೆಂದು ಕರೆಯಲಾಗುವುದು. ಅಸ್ವಾಭಾವಿಕವಾಗಿ ರಕ್ತದೊತ್ತಡವು ಉಂಟಾಗಿ ದೇಹದಲ್ಲಿ ತೊಂದರೆ ಉಂಟಾಗುವ ಹಾಗೆ, ಐಓಪಿ ಅಥವಾ ಒಳಗಣ್ಣಿನಲ್ಲಿ ಅಸ್ವಾಭಾವಿಕವಾದ ಒತ್ತಡವು ಉಂಟಾಗಿ ಕಣ್ಣಿಗೆ ಹಾನಿಯುಂಟಾಗುತ್ತದೆ.  

ಇದನ್ನು ಹೇಗೆ ಗುರುತಿಸುವುದು?

ಗ್ಲಾಕೋಮವನ್ನು ಪ್ರಾರಂಭಿಕ ಹಂತಗಳಲ್ಲಿ ಮಕ್ಕಳು ಸರಿಯಾಗಿ ಕಾಣುತ್ತಿಲ್ಲ ಎಂದು ದೂರುತ್ತಾರೆ. ಸಮಾನ್ಯವಾಗಿ ಶಾಲೆಯಲ್ಲಿ ಬೋರ್ಡಿನ ಮೇಲೆ ಬರೆದಿರುವುದನ್ನು ನೋಡಲಾಗದು ಅಥವಾ ಅವರ ಅನುಭವಕ್ಕೆ ಸುಲಭವಾಗಿ ಸಿಗಲಾರದು. ಆಗಲೇ ತಕ್ಷಣವೇ ನೇತ್ರ ವೈದ್ಯರ ಬಳಿಗೆ ಕರೆದೊಯ್ಯಬೇಕು. ಕಾಲಕಾಲಕ್ಕೆ ನಡೆಸುವ ನೇತ್ರ ತಪಾಸಣೆಯಿಂದಾಗಿ ಇದನ್ನು ಗುರುತಿಸಲಾಗುವುದು. ಕ್ರಮೇಣವಾಗಿ ದೃಷ್ಟಿಯಲ್ಲಿ ಬದಲಾವಣೆ ಮತ್ತು ದೃಷ್ಟಿ ಹಾನಿಯಾ ಗುವಂತಹ ನ್ಯೂನತೆಗಳನ್ನು ಹೊಂದಿರುವಂತಹ ಸ್ಥಿತಿ ಕಾಣಿಸಿಕೊಳ್ಳತೊಡಗುವುದು. ಕಣ್ಗುಡ್ಡೆಯ ಸುತ್ತಲಿನ ಅಂದರೆ ಮೇಲೆ, ಕೆಳಗೆ, ಮತ್ತು ಬದಿಗಳಲ್ಲಿ ಕಾಣುವಂತಹ ದೃಷ್ಟಿಯ ಮೇಲೆ ಮೊದಲು ನಕಾರಾತ್ಮಕವಾದ ಬದಲಾವಣೆ ಕಾಣುವುದು. ನಂತರ ಕಣ್ಣಿನ ನಡುಭಾಗದ ದೃಷ್ಟಿಯೂ ಹಾನಿಗೊಳಗಾಗುವುದು. ಈ ಸ್ಥಿತಿಯು ಕೊನೆಯ ಹಂತದವರೆಗೂ ಇರುವುದು. ಗ್ಲಾಕೋಮಾದಲ್ಲಿ ಎರಡು ಬಗೆಗಳಿವೆ. ಕ್ರಾನಿಕ್ ಅಥವಾ ಓಪನ್ ಆ್ಯಂಗಲ್ ಗ್ಲಾಕೋಮ: ಇದು ಸಾಧಾರಣವಾಗಿ ಕಂಡು ಬರುವಂತಹದು. ಇದರಲ್ಲಿ ಕಾಣಿಸಿಕೊಳ್ಳುವಂತಹ ನೋವೂ ಇರುವುದಿಲ್ಲ ಮತ್ತು ಎಚ್ಚರಿಕೆ ನೀಡುವಂತಹ ಬಾಹ್ಯ ಲಕ್ಷಣಗಳೂ ಗೋಚರವಾಗುವುದಿಲ್ಲ. ಇದು ಬಹಳ ನಿಧಾನವಾಗಿ ಮತ್ತು ಕ್ರಮೇಣವಾಗಿ ಉಲ್ಭಣವಾಗತೊಡಗುತ್ತದೆ. ಇದನ್ನು ಗುರುತಿಸುವಷ್ಟರಲ್ಲಿ ಒಂದಷ್ಟು ಪ್ರಮಾಣದ ಹಾನಿ ಉಂಟಾಗಿಬಿಟ್ಟಿರುತ್ತದೆ. ಅಕ್ಯೂಟ್ ಅಥವಾ ಆ್ಯಂಗಲ್ ಕ್ಲೋಷರ್ ಗ್ಲಾಕೋಮ: ಇದರಲ್ಲಿ, ಡ್ರೈನೇಜ್ ಅಥವಾ ಹೊರಹರಿವಿನ ವ್ಯವಸ್ಥೆಯು ಹಠತ್ತಾನೆ ಮುಚ್ಚಲ್ಪಟ್ಟು ಕಣ್ಣಿನಲ್ಲಿ ಒತ್ತಡವು ಹೆಚ್ಚಾಗುತ್ತಾ ಹೋಗುತ್ತವೆ. ಈ ರೀತಿ ಹಠಾತ್ತನೆ ಕಣ್ಣೊಳಗಿನ ದ್ರವದ ಹೊರಹರಿವಿನ ವ್ಯವಸ್ಥೆಯು ಮುಚ್ಚಿ ಹೋಗುವುದರಿಂದ, ಕೆಲವು ಔಷಧಿ ಪ್ರಯೋಗಗಳಿಂದಾಗಿ ಅಥವಾ ಕತ್ತಲಿನ ಕೋಣೆಯಲ್ಲಿರುವಾಗ ದೃಷ್ಟಿ ಪಟಲದಲ್ಲಿ ಇಕ್ಕಟ್ಟಾದ ಪಾರ್ಶ್ವವು ಉಂಟಾಗಿ, ಪಾಪೆಯು ಹಿಗ್ಗುತ್ತವೆ. ಇದರಿಂದಾಗಿ ರೋಗಿಗೆ ಸಹಿಸಲಾರದ ತಲೆನೋವು, ಕಣ್ಣಿನ ನೋವು, ಕಣ್ಣು ಕೆಂಪಾಗುವುದು, ನೀರು ಸೋರುವುದು, ಹೊಟ್ಟೆ ತೊಳೆಸಿದಂತಾಗಿ ಓಕರಿಕೆ ಬರುವುದು ಮತ್ತು ಕಣ್ಣು ಮಬ್ಬಾಗುವುದು. ಅವರಿಗೆ ತುರ್ತಾಗಿ ಅಗತ್ಯವಿರುವ ಚಿಕಿತ್ಸೆಯನ್ನು ನೀಡಬೇಕಾಗುವುದು. ಇನ್ನೂ ಕೆಲವು ಅಪರೂಪವಾದ ಗ್ಲಾಕೋಮಗಳೆಂದರೆ, ಗಾಯದಿಂದ ಅಥವಾ ಊತದ ಪರಿಣಾಮದಿಂದ ಉಂಟಾಗುವುದು. ಕೆಳಸ್ತರದ ಒತ್ತಡದ ಗ್ಲಾಕೋಮವು, ಅಕ್ಷಿಪಟಲದಲ್ಲಿ ಉಂಟಾಗುವ ನ್ಯೂನತೆಯಿಂದ ಉಂಟಾಗುವುದು. ಇದರಲ್ಲಿ ಲಘು ಒತ್ತಡಗಳು ಮತ್ತು ಮುಂದೆ ಉಲ್ಭಣಿಸಬಹುದಾದಂತಹ ಗ್ಲಾಕೋಮಗಳು ಮಕ್ಕಳಲ್ಲಿ ಕಾಣುತ್ತವೆ.

ಯಾರಿಗೆ ಇದು ಅಪಾಯಕಾರಿ?         

•ಸಾಮಾನ್ಯವಾಗಿ ನಲವತ್ತು ವರ್ಷಗಳನ್ನು ದಾಟಿರುವವರು.

•ಈ ಹಿಂದೆ ಗ್ಲಾಕೋಮವು ಇದ್ದಿರುವಂತಹ ಕುಟುಂಬದವರಾಗಿದ್ದ ಪಕ್ಷದಲ್ಲಿ.

•ಸಕ್ಕರೆ ಕಾಯಿಲೆ ಮತ್ತು ಆಗಾಗ್ಗೆ ಸಂಭವಿಸುವ ಅತ್ಯಧಿಕ ಒತ್ತಡವುಳ್ಳವರಲ್ಲಿ.

ಗ್ಲಾಕೋಮಾವನ್ನು ಪತ್ತೆ ಹಚ್ಚುವುದು:

ಕಾಲದಿಂದ ಕಾಲಕ್ಕೆ ನೇತ್ರ ತಪಾಸಣೆ ಮಾಡಿಕೊಳ್ಳುವ ಬಹಳಷ್ಟು ಜನರಲ್ಲಿ ಇದು ತಿಳಿಯುತ್ತದೆ. ಇದರಲ್ಲಿ ನಾಲ್ಕು ಪರೀಕ್ಷೆಗಳಿದ್ದು, ಗ್ಲಾಕೋಮವನ್ನು ಇರುವಿಕೆಯನ್ನು ಕಂಡುಹಿಡಿದು, ಅದು ಯಾವ ಹಂತದಲ್ಲಿದೆ ಎಂದು ತಿಳಿಯಲು ಸಾಧ್ಯವಾಗುತ್ತದೆ.

1.ಟೋನೋಮಿಟ್ರಿ: ಕಣ್ಣಿನ ಐಓಪಿಯನ್ನು ಅಳೆಯಲು.

2.ಗಾನಿಸ್ಕೋಪಿ: ಗ್ಲಾಕೋಮದ ವಿಧಗಳನ್ನು ಪ್ರತ್ಯೇಕವಾಗಿ ತಿಳಿಯಲು.

3.ಆಪ್ತಲ್ಮೋಸ್ಕೋಪಿ: ಇದು ದೃಷ್ಟಿ ಪಟಲದ ವ್ಯತ್ಯಯವಾಗಿರುವಂತಹ ನರಗಳನ್ನು ನೋಡಲು.

4.ಪೆರಿಮಿಟ್ರಿ: ಇದು ಕಣ್ಣುಗಳ ದೃಷ್ಟಿಯ ಕ್ಷೇತ್ರದ ನಕಾಶೆಯನ್ನು ಗುರುತಿಸಲು.

5.ಓಸಿಟಿ: ಇದು ಕಣ್ಣಿನ ನರ ಪದರದ ಸಾಂದ್ರತೆಯನ್ನು ಅಳೆಯಲು. ಗ್ಲಾಕೋಮ ಗುಣವಾಗುವುದೇ?

ಒಮ್ಮೆ ಗ್ಲಾಕೋಮ ಇದೆಯೆಂದು ತಪಾಸಣೆಯಿಂದ ತಿಳಿದುಬಂದ ಮೇಲೆ ನಿಯಮಿತವಾಗಿ, ಜೀವನಪರ್ಯಂತ ಎಚ್ಚರಿಕೆಯನ್ನು ವಹಿಸುವುದು ಉತ್ತಮ. ಗ್ಲಾಕೋಮವನ್ನು ನಿಯಂತ್ರಣಕ್ಕೆ ತರಬಹುದಾದರೂ, ಈಗಾಗಲೇ ಯಾವುದಾದರೂ ಗ್ಲಾಕೋಮಾದಿಂದ ನ್ಯೂನತೆ ಕಂಡು ಬಂದಿದ್ದಲ್ಲಿ ಅದನ್ನು ಸರಿಪಡಿಸಲಾಗದು. ಗ್ಲಾಕೊಮವನ್ನು ಐ ಡ್ರಾಪ್ಸ್, ಗುಳಿಗೆಗಳು, ಲೇಸರ್ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆಗಳಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು.

ಚಿಕಿತ್ಸಾ ವಿಧಾನ


ಔಷಧಿಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರುತ್ತವೆ? ಗ್ಲಾಕೋಮಾಗೆ ಸಾಮಾನ್ಯವಾಗಿ ಆಯ್ದುಕೊಳ್ಳುವ ಚಿಕಿತ್ಸೆಯೆಂದರೆ ಔಷಧೋಪಚಾರವೇ. ಔಷಧಿಗಳು ಎರಡು ರೀತಿಗಳಲ್ಲಿ ಕಾರ್ಯ ನಿರ್ವಹಿಸುತ್ತವೆ. ಒಂದು ಕಣ್ಣಿನ ಡ್ರೈನೇಜ್ ವ್ಯವಸ್ಥೆಯಲ್ಲಿ ದ್ರವದ ಹೊರಹರಿವು ಹೆಚ್ಚಾಗುವಂತೆ ಮಾಡುವುದು, ಮತ್ತೊಂದು, ಕಣ್ಣಿನಲ್ಲಿ ಉಂಟಾಗುವ ದ್ರವದ ಉತ್ಪಾದನೆಯನ್ನು ಕಡಿಮೆ ಮಾಡುವುದು.  

ಎಂತಹ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆಯು ಅನಿವಾರ್ಯ?

ಗ್ಲಾಕೋಮ ಹೆಚ್ಚಾಗಿರುವ ಸಂದರ್ಭದಲ್ಲಿ ಮತ್ತು ವಯಸ್ಕರಲ್ಲಿ ಐಓಪಿಯನ್ನು ನಿಯಂತ್ರಿಸುವಲ್ಲಿ ಔಷಧಿಗಳ ಸಾಮರ್ಥ್ಯವು ಸಾಲದಾದಾಗ ಶಸ್ತ್ರ ಚಿಕಿತ್ಸೆಯು ಅನಿವಾರ್ಯವಾಗುತ್ತದೆ. ಇಲ್ಲವಾದರೆ ಸಣ್ಣವಯಸ್ಸಿನ ಮಕ್ಕಳಾದಲ್ಲಿ ಔಷಧಿಯ ಉಪಚಾರಗಳೇ ಸಾಕಾಗಬಹುದು.

ಲೇಸರ್ ಚಿಕಿತ್ಸೆ:

ಲೇಸರ್ ಕಿರಣವು ರೋಗಿಗೆ ನೋವುಂಟಾಗದಂತೆ ಕಣ್ಣಿನಲ್ಲಿ ದ್ರವದ ಹೊರಹರಿವಿಗಾಗಿ ಪರ್ಯಾಯ ಮಾರ್ಗವನ್ನು ಉಂಟುಮಾಡುವುದು. ನಿಯಮಿತವಾಗಿ ಗಮನದಲ್ಲಿಟ್ಟುಕೊಂಡು ನಿಯಂತ್ರಣ ಮಾಡಬೇಕಾಗಿರುವಂತಹ ನೇತ್ರರೋಗ ಈ ಗ್ಲಾಕೋಮ. ಗ್ಲಾಕೋಮ ಬಂದಿರುವ ರೋಗಿಗಳು ತಮ್ಮ ಕಣ್ಣಿನ ರೋಗಕ್ಕೆ ಸೂಕ್ತ ಲಕ್ಷ್ಯ ವಹಿಸಿಕೊಂಡು, ಚಿಕಿತ್ಸೆ ಮಾಡಿಕೊಂಡು ತಮ್ಮ ಜೀವನದಲ್ಲಿ ಚಟುವಟಿಕೆಯಿಂದ, ನಿರ್ಬಂಧಿತವಾಗಿ ತಮಗೆ ಬೇಕಾದಂತೆ ಬದುಕುತ್ತಿರುವರು.ನಿಮಗೆ ಗ್ಲಾಕೋಮದ ಬಗ್ಗೆ ತಿಳುವಳಿಕೆ ಮತ್ತು ಚಿಕಿತ್ಸೆಯನ್ನು ಪಡೆಯಲು ಇಚ್ಛಿಸಿದರೆ, ನಮ್ಮ ವೈದ್ಯರನ್ನು ಕಾಣಲು ಬನ್ನಿ. ನೆನಪಿಡಿ, ಗ್ಲಾಕೋಮವನ್ನು ನಿಯಂತ್ರಣದಲ್ಲಿಡಲು ಅವರು ನಿಮ್ಮ ಪ್ರಾಥಮಿಕ ಮಾರ್ಗದರ್ಶಿಯಾಗಿ ಒದಗುತ್ತಾರೆ. ಗ್ಲಾಕೋಮದ ತಪಾಸಣೆ ಮತ್ತು ಚಿಕಿತ್ಸೆಗಾಗಿ ಉತ್ತಮ ನೇತ್ರಾಲಯಗಳಲ್ಲಿ ಒದಗುವ ಸೌಲಭ್ಯಗಳು:

1.ಸ್ಲಿಟ್ಲಾಂಪ್ ಬಯೋಮೈಕ್ರೋಸ್ಕೋಪಿ: ಕಣ್ಣಿನ ಮುಂಭಾಗದ ವಿಸ್ತೃತ ಪರೀಕ್ಷೆಗಾಗಿ.

2.ಶಿಯೋಟ್ಸ್ ಮತ್ತು ಟೋನೋಮೀಟರ್‌ನ ಬಳಕೆ: ಇದು ಐಓಪಿಯನ್ನು ಅಳೆಯಲು.

3.ಗೋಲ್ಡ್‌ಮನ್ 3-ಮಿರರ್ ಮತ್ತು 4 -ಮಿರರ್ ಗೋನಿಯೋಲೆನ್ಸ್ :  ಇದು ಅಕ್ಷಿಪಟಲದ ಕೋನಗಳಿಗಾಗಿ. 

4. 78 ಡಿ ಮತ್ತು 90 ಡಿ ಲೆನ್ಸ್: ಇದು ಅಕ್ಷಿಪಟಲದ ಗೋಲವನ್ನು ವೀಕ್ಷಿಸಲು.

5.ಅತ್ಯುತ್ತಮ ಗುಣಮಟ್ಟದ ಆಕ್ಟೋಪಸ್ ಕಂಪ್ಯೂಟರೈಸ್ಡ್ ಪೆರಿಮೀಟರ್: ಇದು ಅಕ್ಷಿಪಟಲದ ದೃಶ್ಯ ಕ್ಷೇತ್ರವನ್ನು ಪರೀಕ್ಷಿಸಲು.

6ಜೇಯಿಸ್ ವೈಏಜಿ ಲೇಸರ್: ಇದು ಲೇಸರ್ ಇರಿಡೋಟಮಿ ಚಿಕಿತ್ಸೆಗಾಗಿ.

7.ಡಿಯೋಡ್ ಲೇಸರ್: ಇದು ಲೇಸರ್ ಟ್ರೇಬಿಕ್ಯುಲೋಪ್ಲ್ಯಾಸ್ಟಿಗಾಗಿ.

8 ಜೇಯಿಸ್  ಆಪರೇಟಿಂಗ್ ಮೈಕ್ರೋಸ್ಕೋಪ್: ಇದು ಮೈಕ್ರೋಸರ್ಜಿಕಲ್ ಪ್ರಕ್ರಿಯೆಗಳಿಗಾಗಿ.

9.ಓಸಿಟಿ -ಆಪ್ಟಿಕಲ್ ಕೋಹರೆನ್ಸ್ ಟೋಮೋಗ್ರಾಫಿ: ಇದು ಅತ್ಯಾಧುನಿಕ ತಂತ್ರಜ್ಞಾನದ ಪಲವಾಗಿದೆ. ಇದು ಆಕ್ರಮಣಕಾರಿಯಲ್ಲ, ನೇರ ಸಂಪರ್ಕದ್ದಲ್ಲ, ಆದರೆ, ರೋಗಿಗೆ ಅನುಕೂಲಕರವಾಗಿದ್ದು, ರೆಟಿನಾ ನರ್ವ್ ಪೈಬರ್ ಲೇಯರ್ (ಆರ್.ಎನ್.ಎಪ್.ಎಲ್) ನ ಸಾಂದ್ರತೆಯನ್ನು ಖಚಿತವಾಗಿ ಪರೀಕ್ಷಿಸಿ, ವೈಜ್ಞಾನಿಕವಾಗಿ ಗ್ಲಾಕೋಮಾವನ್ನು ಪರೀಕ್ಷಿಸುತ್ತದೆ. ಇದು ಗ್ಲಾಕೋಮ ರೋಗಿಗಳ ರೋಗ ಪತ್ತೆ ಸಾಮರ್ಥ್ಯದ ಜೊತೆಗೆ ಎಷ್ಟರ ಮಟ್ಟಿಗೆ ಚಿಕಿತ್ಸೆಯನ್ನು ಮತ್ತು ಲಕ್ಷ್ಯವನ್ನು ನೀಡಬೇಕೆಂದು ತಿಳಿಯುವಲ್ಲಿ ಹೆಚ್ಚು ಅನುಕೂಲಕರವಾಗಿರುತ್ತದೆ.

ಮಕ್ಕಳು ಮತ್ತು ಅವರ ಕಣ್ಣುಗಳು

    ಮಕ್ಕಳು ಕೈ ತೊಳೆಯದೇ ಹೇಗೆ ಅಜಾಗರೂಕತೆಯಿಂದ ತಿನಿಸುಗಳನ್ನು ಎತ್ತಿಕೊಂಡು ತಿಂದು, ಹೊಟ್ಟೆಯ ಸೋಂಕು ಉಂಟಾಗುವುದೋ ಹಾಗೆಯೇ ಕಶ್ಮಲದ ಕೈಗಳಿಂದ ಕಣ್ಣುಗಳನ್ನು ಮುಟ್ಟಿಕೊಳ್ಳುವುದು, ಕಣ್ಣಿಗೆ ಏನಾದರೂ ಬಿದ್ದಾಗ ತಟ್ಟನೆ ಉಜ್ಜಿಕೊಂಡು ಬಿಡುವುದು ಮಾಡುತ್ತಾರೆ. ಮಕ್ಕಳಿಗೆ ಇದರ ಬಗ್ಗೆ ಅರಿವನ್ನು ಮೂಡಿಸಬೇಕು.

1.ಮಕ್ಕಳು ತಮ್ಮ ಕಣ್ಣಿಗೆ ಏನೇ ಬಿದ್ದರೂ ದೊಡ್ಡವರ ಗಮನಕ್ಕೆ ತರುವುದು.

 2.ಶುಭ್ರವಾದ ಕರವಸ್ತ್ರದ ತುದಿಯಿಂದ ಕಣ್ಣಿನಲ್ಲಿ ಬಿದ್ದಿರುವ ವಸ್ತುವನ್ನು ಸರಿಸುವುದು.

3.ಶುದ್ಧವಾದ ತಣ್ಣೀರಿನಲ್ಲಿ ಕಣ್ಣುಗಳನ್ನು ತೊಳೆದುಕೊಳ್ಳುವುದು.

4.ಹೊರಗೆ ವಾಹನಗಳಲ್ಲಿ ಸಂಚರಿಸುವಾಗ ಸನ್ ಗ್ಲಾಸ್‌ಗಳನ್ನು ಧರಿಸುವುದು ಮತ್ತು ಅವುಗಳು ಉತ್ತಮ ಮಸೂರವನ್ನು ಹೊಂದಿರಬೇಕು.

5.ಸಣ್ಣ ಮಕ್ಕಳು ಕೆಲವೊಮ್ಮೆ ತಮ್ಮ ಜನನಾಂಗದೊಡನೆ ಮುಟ್ಟಿಕೊಳ್ಳುತ್ತಿರುತ್ತಾರೆ ಮತ್ತು ಆಡಿಕೊಳ್ಳುತ್ತಿರುತ್ತಾರೆ. ಹಾಗೆ ಜನನಾಂಗವನ್ನು ಮುಟ್ಟಿಕೊಂಡ ಕೈಗಳಿಂದ ಕಣ್ಣುಗಳನ್ನು ಮುಟ್ಟಿಕೊಳ್ಳದಂತೆ ನೋಡಿಕೊಳ್ಳಬೇಕು.

6.ಅಡುಗೆ ಮನೆಯಲ್ಲಿ ಒಗ್ಗರಣೆ ಇತ್ಯಾದಿಗಳನ್ನು ಹಾಕುವಾಗ ಮಕ್ಕಳು ತೀರ ಹತ್ತಿರದಲ್ಲಿ ನಿಂತಿರಬಾರದು. ಅವರ ತೆರೆದ ಕಣ್ಣುಗಳೊಳಗೆ ಸಿಡಿವ ಸಾಸಿವೆ ಅಥವಾ ಬಿಸಿ ಎಣ್ಣೆಯ ಹನಿಗಳು ಹಾರುವ ಸಂಭವಗಳಿರುತ್ತವೆ.

7.ಮೊನಚಾದ ವಸ್ತುಗಳು, ಪೆನ್ಸಿಲ್ ಇತ್ಯಾದಿಗಳನ್ನು ಬಳಸುವಾಗ ಅದು ತನ್ನ ಕಣ್ಣಿನ ಪರಿಧಿಗೆ ಮತ್ತು ಇತರರ ಕಣ್ಣುಗಳಿಂದಲೂ ದೂರವಿರುವಂತೆ ಅಥವಾ ತಗಲದಿರುವಂತೆ ಎಚ್ಚರವಾಗಿರುವುದನ್ನು ಹೇಳಿಕೊಡಬೇಕು.

8.ನಾಯಿ ಮತ್ತು ಇತರ ಸಾಕುಪ್ರಾಣಿಗಳನ್ನು ಮುಟ್ಟಿಕೊಂಡು ಆಡುವ ಕೈ

ಪಡೆಯಬಹುದಾದ ಚಿಕಿತ್ಸೆಗಳು

-ಅಪ್ಲ್ಯಾನೇಷನ್ ಟು ನೋಮಿಟ್ರಿ
- ಗಾನಿಸ್ಕೋಪಿಕ್ ಎಕ್ಸಾಮಿನೇಷನ್
 -90ಡಿ ಡಿಸ್ಕ್ ಎವಾಲ್ಯುಷನ್
 -ಸ್ಟೀರಿಯೋಸ್ಕೋಪಿಕ್ ಫೊಟೋಗ್ರಾಫಿ ಆಪ್ ಡಿಸ್ಕ್
  -ಸೆಂಟ್ರಲ್ ಕಾರ್ನಿಯಲ್ ಥಿಕ್‌ನೆಸ್ ಮೆಶರ್‌ಮೆಂಟ್
  -ಆಕ್ಟೋಪಸ್ ಪೆರಿಮಿಟ್ರಿ
   -ಆಪ್ಟಿಕಲ್ ಕೋಹೆರೆನ್ಸ್ ಟೋಮೋಗ್ರಾ

    
     


    
    
    
    
     

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News