ಡಿಸೆಂಬರ್ 31ರ ಬಳಿಕ ಈ ಸ್ಮಾರ್ಟ್ ಫೋನ್‌ಗಳಲ್ಲಿ ವ್ಯಾಟ್ಸ್‌ಆ್ಯಪ್ ಸಿಗದು
ಸಿಂಬಿಯನ್ ಆಪರೇಟಿಂಗ್ ವ್ಯವಸ್ಥೆ ಬಗ್ಗೆ ನಿಮಗೆ ಗೊತ್ತೆ? ನೋಕಿಯ ಮತ್ತು ಎಲ್ಲಾ ಎನ್ ಸೀರೀಸ್ ಫೋನ್‌ಗಳಂತಹ ಹೈಎಂಡ್ ಫೋನ್‌ಗಳಲ್ಲಿ ಈ ಆಪರೇಟಿಂಗ್ ವ್ಯವಸ್ಥೆ ಬಂದಿತ್ತು. ಎನ್8 ಸೀರೀಸ್ ಸ್ಮಾರ್ಟ್‌ಫೋನ್ ಕೂಡ ಸಿಂಬಿಯನ್ ಒಎಸ್ ಬಳಸಿದೆ. ಆದರೆ ಈಗಲೂ ನೀವು ಸಿಂಬಿಯನ್ ಒಎಸ್ ಇರುವ ಫೋನೇ ಬೇಕೆಂದರೆ ನಿಮಗೆ ಡಿಸೆಂಬರ್ 31ರ ಬಳಿಕ ಈ ಸ್ಮಾರ್ಟ್ ಫೋನ್‌ಗಳಲ್ಲಿ ವ್ಯಾಟ್ಸ್‌ಆ್ಯಪ್ ಬಳಸಲು ಸಾಧ್ಯವಾಗದು.
ವ್ಯಾಟ್ಸ್‌ಆ್ಯಪ್ ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ದೃಢೀಕರಿಸಿದೆ. ಸಿಂಬಿಯನ್ ಒಎಸ್ ಇರುವ ಸ್ಮಾರ್ಟ್‌ಫೋನ್‌ಗಳಿಗೆ ವ್ಯಾಟ್ಸ್‌ಆ್ಯಪ್ ಸಪೋರ್ಟ್ ಮಾಡುವುದಿಲ್ಲ ಎಂದು ಅಂತಿಮ ಗಡುವು ನೀಡಿ ಬಹಳ ಸಮಯವೇ ಆಗಿದೆ. ಹಾಗೆಯೇ ಕೆಲವು ವಿಂಡೋಸ್ ಮತ್ತು ಬ್ಲಾಕ್‌ಬೆರಿ ಫೋನ್‌ಗಳಿೂ ವ್ಯಾಟ್ಸ್‌ಆ್ಯಪ್ ಸಪೋರ್ಟ್ ನಿಲ್ಲಲಿದೆ.
ಆಂಡ್ರಾಯ್ಡ್ 2.1 ಮತ್ತು ಆಂಡ್ರಾಯ್ಡ್ 2.2 ಫೋನ್‌ಗಳೂ ವ್ಯಾಟ್ಸ್‌ಆ್ಯಪ್ ಸಪೋರ್ಟ್ ಪಡೆಯುವುದಿಲ್ಲ. ಈ ಕೆಳಗಿನ ಫೋನ್‌ಗಳಿಂದ ಕಂಪನಿ ಇದೇ ಡಿಸೆಂಬರ್ 31ರಿಂದ ವ್ಯಾಟ್ಸ್‌ಆ್ಯಪ್ ಸಪೋರ್ಟ್ ಸ್ಥಗಿತಗೊಳಿಸಿದೆ.
ಬ್ಲಾಕ್‌ಬೆರಿ ಒಎಸ್ ಮತ್ತು ಬ್ಲಾಕ್‌ಬೆರಿ 10 ಬಳಸುವ ಫೋನ್‌ಗಳು
ನೋಕಿಯಾ ಎಸ್40 ಬಳಸುವ ಫೋನ್‌ಗಳು
ನೋಕಿಯಾ ಎಸ್60 ಬಳಸುವ ಫೋನ್‌ಗಳು
ಆಂಡ್ರಾಯ್ಡ್ 2.1 ಮತ್ತು ಆಂಡ್ರಾಯ್ಡ್ 2.2 ಬಳಸುವ ಫೋನ್‌ಗಳು
ವಿಂಡೋಸ್ ಫೋನ್ 7.1 ಬಳಸುವ ಫೋನ್‌ಗಳು
ಆಪಲ್ ಐಫೋನ್ 3ಜಿಎಸ್ ಮತ್ತು ಐಒಎಸ್ 6 ಬಳಸುವ ಐಫೋನ್‌ಗಳು
ನೋಕಿಯಾ ಸಿಂಬಿಯನ್ ಆಪರೇಟಿಂಗ್ ವ್ಯವಸ್ಥೆ ಇರುವ ಫೋನ್ ತಯಾರಿಸುವುದನ್ನು ಬಹಳ ಹಿಂದೆಯೇ ನಿಲ್ಲಿದೆ. ಆದರೆ ಈಗಲೂ ನೋಕಿಯಾ ಇ6, ನೋಕಿಯಾ 5233, ನೋಕಿಯಾ ಸಿ503, ನೋಕಿಯಾ ಆಶಾ 306 ಮತ್ತು ನೋಕಿಯಾ ಇ52ನಲ್ಲಿ ಇದನ್ನು ಬಳಸಲಾಗುತ್ತಿದೆ. “ಈ ಮೊಬೈಲ್ ಸಾಧನಗಳು ನಮ್ಮ ಜೀವನದ ಮುಖ್ಯಭಾಗವಾಗಿದ್ದರೂ ನಮ್ಮ ವ್ಯಾಟ್ಸ್‌ಆ್ಯಪ್‌ನ ಕೆಲವು ಲಕ್ಷಣಗಳಿಗೆ ಅವು ಬೆಂಬಲಿಸುವುದಿಲ್ಲ. ಹೀಗಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ” ಎಂದು ವ್ಯಾಟ್ಸ್‌ಆ್ಯಪ್ ಹೇಳಿದೆ. ಈ ಫೋನ್‌ಗಳನ್ನು ಬಳಸುವ ಬಳಕೆದಾರರು ಹೊಸ ಆಂಡ್ರಾಯ್ಡಾ, ಐಫೋನ್ ಅಥವಾ ವಿಂಡೋಸ್ ಫೋನ್ ಬಳಸುವಂತೆ ವ್ಯಾಟ್ಸ್‌ಆ್ಯಪ್ ಹೇಳಿದೆ.
ಕೃಪೆ: indiatoday.intoday.in