ಜನಚಳವಳಿಯ ಕೊರತೆ ಯೇ ಇಂದಿನ ಸವಾಲು : ಶ್ರೀ ಕುಮಾರ

ರಾಹುಲ್ ಶರ್ಮ, ಸಂಜೀವ್ ಭಟ್, ಮತ್ತು ಶ್ರೀಕುಮಾರ್ ಈ ಮೂವರು ಐಪಿಎಸ್ ಅಧಿಕಾರಿಗಳು ನ್ಯಾಯಕ್ಕೆ, ಸತ್ಯದ ಪರವಾಗಿ ಹೋರಾಟ ಮಾಡಿ ಮೋದಿ ನೇತೃತ್ವದ ಸರಕಾರದ ವಿರುದ್ಧ ಕಾನೂನು ಹೋರಾಟವನ್ನು ನಡೆಸಿದ ಸತ್ಯನಿಷ್ಠರು. ಆರ್.ಬಿ. ಶ್ರೀಕುಮಾರ್ ಗುಜರಾತ್ ರಾಜ್ಯದಲ್ಲಿ ಎಡಿಜಿಪಿ ಆಗಿ ನಿವೃತ್ತಿ ಹೊಂದಿದ ಹಿರಿಯ ಪೊಲೀಸ್ ಅಧಿಕಾರಿ. ಮೂಲತಃ ಕೇರಳ ರಾಜ್ಯದವರಾದ 1972ರಲ್ಲಿ ಗುಜರಾತ್ ಪೊಲೀಸ್ ಇಲಾಖೆಗೆ ಸೇರಿಕೊಂಡ ಶ್ರೀಕುಮಾರ್ 2002ರಲ್ಲಿ ಗುಜರಾತ್‌ನಲ್ಲಿ ನಡೆದ ಅಲ್ಪಸಂಖ್ಯಾತರ ಹತ್ಯಾಕಾಂಡದ ನಂತರ ನ್ಯಾಯದ ಪರವಾದ ಮತ್ತು ಆಡಳಿತರೂಢ ಬಿಜೆಪಿ ಪಕ್ಷದ ಸರ್ವಾಧಿಕಾರಿ ಧೋರಣೆಯನ್ನು ಪ್ರಶ್ನಿಸಿ ಕಾನೂನಾತ್ಮಕವಾಗಿ ನ್ಯಾಯಾಲಯದಲ್ಲಿ ಹೋರಾಡಿದ ವರು. ಸ್ನಾತಕೋತ್ತರದಲ್ಲಿ (ಎಂ.ಎ.) ಇತಿಹಾಸ, ಕ್ರಿಮಿನಾಲಜಿ, ಸಾಹಿತ್ಯ, ಗಾಂಧಿವಾದದ ದಾರ್ಶನಿಕತೆ ದಲ್ಲಿ ನಾಲ್ಕು ಪದವಿ ಗಳಿಸಿದವರು. ಗುಜರಾತ್ ಕೋಮುಗಲಭೆಯನ್ನು ತನಿಖೆ ನಡೆಸಲು ನೇಮಕಗೊಂಡ ‘ನಾನಾವತಿ ಕಮಿಷನ್’ ಮುಂದೆ ಗಲಭೆಯ ಸಂದರ್ಭದಲ್ಲಿ ಕಾನೂನು ವ್ಯವಸ್ಥೆಯು ಸಂಪೂರ್ಣ ಕುಸಿದು ಹೋಗಿದ್ದರ ಕುರಿತಾಗಿ ಅಫಿಡವಿಟ್ ಸಲ್ಲಿಸಿದ್ದರು. ಶ್ರೀಕುಮಾರ್ ವಿರುದ್ಧ ಮೋದಿ ನೇತೃತ್ವದ ಗುಜರಾತ್ ಸರಕಾರ ಸೇಡಿನ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಈ ಸರಕಾರದ ಈ ಪ್ರತೀಕಾರದ ಬೇಟೆಗೆ ಮಣಿಯದ ಶ್ರೀಕುಮಾರ್ ಇಂದಿಗೂ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಇಂದಿಗೂ ಗುಜರಾತ್‌ನ ಗಾಂಧಿ ನಗರದಲ್ಲಿ ನೆಲೆಸಿದ್ದಾರೆ. ಪರದೆಯ ಹಿಂದಿನ ಗುಜರಾತ್, ಅಸಹಾಯಕ ಮನುಷ್ಯನ ದಿನಚರಿ, ಗುಜರಾತ್-ಬಲಿಪಶುಗಳಿಗಳ ಪರವಾಗಿ ಹೋರಾಟ ಎನ್ನುವ ಮೂರು ಪುಸ್ತಕಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಶ್ರೀಕುಮಾರ್ ಕಾರ್ಯ ನಿಮಿತ್ತ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ‘ವಾರ್ತಾಭಾರತಿ’ ಅವರೊಂದಿಗೆ ಮ�