ಜೆಬ್ರಾನಿಕ್ಸ್ ನಿಂದ ಪೋರ್ಟಬಲ್ ಇಂಡಕ್ಷನ್ ಸ್ಪೀಕರ್

Update: 2016-11-28 11:26 GMT

ಜೆಬ್ರಾನಿಕ್ಸ್ ಇಂಡಿಯಾ ಪ್ರೈ ಲಿ., ಭಾರತದಲ್ಲಿ ಐಟಿ ಬಿಡಿಭಾಗಗಳು, ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಲ್ಲಿ ಪ್ರಮುಖವಾಗಿದ್ದು, ಈಗ ತೀಕ್ಷ್ಣ ಶಬ್ದಕ್ಕೆ ಹೆಸರಾದ ಬ್ಲೂಟೂತ್ ಸ್ಪೀಕರ್ಸ್ ಶ್ರೇಣಿಯನ್ನು ಸಹ ಹೊಂದಿದ್ದು, ಅತ್ಯದ್ಭುತವಾದ ವಿಶೇಷ ಉತ್ಪನ್ನವನ್ನು ಹೊರತಂದಿದೆ. ’ಆಂಪ್ಲಿಫೈ’ ಎಂದು ಹೆಸರಿಸಲಾಗಿರುವ, ಇದು ವೈರ್ ಲೆಸ್ ಆಡಿಯೋ ಆಂಪ್ಲಿಫೈಯರ್ ಇಂಡಕ್ಷನ್ ಸ್ಪೀಕರ್ ಆಗಿದೆ.

ಕೇವಲ 330 ಗ್ರಾಂ ತೂಕವಿರುವ, ಈ ಪೋರ್ಟಬಲ್ ಮತ್ತು ಹಗುರವಾದ ಇಂಡಕ್ಷನ್ ತಂತ್ರಜ್ಞಾನ ಶಬ್ದವನ್ನು ಆಂಪ್ಲಿಫೈ ಮಾಡುವುದರಿಂದ, ಸ್ಪಷ್ಟ ಮತ್ತು ಶಕ್ತಿಶಾಲಿ ಔಟ್ ಪುಟ್ ನೀಡುತ್ತದೆ. ಮೊಬೈಲ್ ಮತ್ತು  ಸ್ಪೀಕರ್ ನಡುವೆ ಯಾವುದೇ ಬ್ಲೂಟೂತ್ ಅಥವಾ ವೈ-ಫೈ ಜೋಡಣೆಯ ಅಗತ್ಯವಿಲ್ಲದ ಇಂಡಕ್ಷನ್ ಸ್ಪೀಕರ್ ಟ್ಯೂನ್ ಗಳಿಗೆ ಸುಲಭವಾಗಿ ಸ್ಪಂದಿಸುತ್ತದೆ. ಬಳಸಲು ಸುಲಭವಾದ ಇಂಡಕ್ಷನ್ ಸ್ಪೀಕರ್ ಆನ್ ಮಾಡಿ ಮೊಬೈಲ್ ಅನ್ನು ಸ್ಪೀಕರ್ ನ ಮೊಬೈಲ್ ಹೋಲ್ಡರ್ ಮೇಲೆ ಇಡಬೇಕು. ಇದು ಶಬ್ದದ ಪ್ರಮಾಣವನ್ನು ಹೆಚ್ಚಿಸಿ ಸಂಗೀತ ಕೇಳುವ ವಿಶೇಷ ಅನುಭವ ನೀಡುತ್ತದೆ. ಉತ್ಪನ್ನ ಹೆಚ್ಚಿನ ಸ್ಮಾರ್ಟ್ ಫೋನ್ ನೊಂದಿಗೆ ಅನುಸರಣೆ ಹೊಂದಿದ್ದು ಇದನ್ನು ಮುಖ್ಯವಾಗಿ ಯುವ ಮತ್ತು ತಂತ್ರಜ್ಞಾನ ಬಯಸುವ ಸಂಗೀತ ಆರಾಧಕರಿಗಾಗಿ ಆರಂಭಿಸಲಾಗಿದೆ.

“ಸಂಗೀತ ಪ್ರೇಮಿಗಳು, ಈ ದಿನಗಳಲ್ಲಿ, ಮ್ಯೂಸಿಕ್ ಪ್ಲೇ ಮಾಡುವ ಪ್ರಸ್ತುತ ವಿಧಾನದಿಂದ ಬದಲಾವಣೆ ಬಯಸಿದ್ದಾರೆ. ಅವರು ವೈರ್ ಇರುವ ಸ್ಪೀಕರ್ ಗಳ ಬಳಕೆಯಿಂದ ಬೇಸತ್ತಿದ್ದು, ಬ್ಲೂಟೂತ್ ಅಥವಾ ವೈ-ಫೈ ಮೂಲಕ ಸಂಪರ್ಕಿಸುವುದರ ಹೊರತಾಗಿ ಮತ್ತೇನೋ ಬಯಸುತ್ತಾರೆ. ಇದು ನಮಗೆ ’ಆಂಪ್ಲಿಫೈ’ ಎನ್ನುವ ಈ ವಿಶೇಷವಾದ ಡ್ರಾಪ್ & ಪ್ಲೇ ವೈರ್ ಲೆಸ್ ಸ್ಪೀಕರ್ ಅನ್ವೇಷಿಸಲು ಪ್ರೋತ್ಸಾಹಿಸಿದೆ” ಎಂದು ಜೆಬ್ರಾನಿಕ್ಸ್ ನಿರ್ದೇಶಕ ಮಿ  ಪ್ರದೀಪ್ ಜೋಷಿ, ಉತ್ಪನ್ನ ಬಿಡುಗಡೆಯ ಸಂದರ್ಭದಲ್ಲಿ ತಿಳಿಸಿದರು.

ಆಕರ್ಷಕವಾಗಿ ಕಾಣುವ ಸ್ಪೀಕರ್ ರಬ್ಬರ್ ಫಿನಿಶ್ ಹೊಂದಿದೆ, ಹಾಗೂ ಕೆಳಭಾಗದಲ್ಲೂ ರಬ್ಬರ್ ಗ್ರಿಪ್ ಹೊಂದಿದೆ. ಇದು ಲಿ-ಅಯಾನ್ ಬ್ಯಾಟರಿ ಹೊಂದಿದ್ದು 1000 mAh ಸಾಮರ್ಥ್ಯವಿದೆ. ಇಂಡಕ್ಷನ್ ಮೋಡ್ ನಲ್ಲಿ ಮತ್ತು ಆಕ್ಸ್ ಮೋಡ್ ನಲ್ಲಿ ಪ್ಲೇಬ್ಯಾಕ್ ಸಮಯ 6 ಮತ್ತು 8 ಗಂಟೆಗಳಾಗಿದ್ದು, ಇದು ಸಂಗೀತ ಪ್ರೇಮಿಗಳ ಆನಂದದ ಸಮಯ ಹೆಚ್ಚಿಸುತ್ತದೆ

’ಆಂಪ್ಲಿಫೈ’ ರೂ 999 ಬೆಲೆಯನ್ನು ಹೊಂದಿದ್ದು ಇದು ಭಾರತದಾದ್ಯಂತ ಆನ್ ಲೈನ್ ಮತ್ತು ಬ್ರಿಕ್-ಅಂಡ್-ಮಾರ್ಟರ್ ಸ್ಟೋರ್ ಗಳಲ್ಲಿ ಲಭ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News