ಈ ಫೇಸ್‌ಬುಕ್ ಟ್ರಿಕ್ ಗಳು ನಿಮಗೆ ತಿಳಿದಿದ್ದರೆ ನಿಮಗಿದೆ ಸಾಕಷ್ಟು ಲಾಭ

Update: 2016-12-09 08:59 GMT

ಹೊಸದಿಲ್ಲಿ,ಡಿ.9 : ಫೇಸ್ ಬುಕ್ ಸಾಮಾಜಿಕ ಜಾಲತಾಣ ಕೇವಲ ಮುದ್ದಾದ ಬೆಕ್ಕಿನ ವೀಡಿಯೊಗಳನ್ನು ನೋಡಲು ಹಾಗೂ ಹಳೆಯ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಮಾತ್ರ ಇರುವ ಮಾಧ್ಯಮವಲ್ಲ. ಹಲವಾರು ಸುದ್ದಿಗಳ ತಾಣವಾಗಿಯೂ ಫೇಸ್ ಬುಕ್ ಮೂಡಿ ಬಂದಿದೆ. ತರುವಾಯ ನಿಮಗೆ ಬಹಳಷ್ಟು ಉಪಕಾರಿಯಾಗುವ ಎಂಟು ಫೇಸ್ ಬುಕ್ ಟ್ರಿಕ್ ಗಳು ಇಲ್ಲಿವೆ ಓದಿ.

ನಿಮ್ಮ ಫೇಸ್ ಬುಕ್ ಕಾರ್ಯಚಟುವಟಿಕೆಗಳನ್ನು ನೋಡಿ :

ನಿಮ್ಮ ಫೇಸ್ ಬುಕ್ ಪ್ರೊಫೈಲ್ ಪೇಜಿನಲ್ಲಿ ಆಕ್ಟಿವಿಟಿ ಲಾಗ್ ಕಾಣಬಹುದು. ಇಲ್ಲಿ ನಿಮ್ಮ ಪೋಸ್ಟ್‌ಗಳು, ನಿಮ್ಮ ಲೈಕುಗಳು, ಫೋಟೋಗಳಿಗೆ ನೀವು ಮಾಡಿದ ಕಮೆಂಟುಗಳು ಮುಂತಾದವುಗಳನ್ನು ಕಾಣಬಹುದಾಗಿದೆ. ಇದನ್ನು ನೀವು ಮಾತ್ರ ನೋಡಬಹುದಾಗಿದೆ ಹಾಗೂ ಅದನ್ನು ಫಿಲ್ಟರ್ ಕೂಡ ಮಾಡಬಹುದಾಗಿದೆ.

ರಹಸ್ಯ ಸಂವಾದಗಳು

ನೀವು ಫೇಸ್ ಬುಕ್ ಮೆಸೆಂಜರ್ ಉಪಯೋಗಿಸುವಾಗ ನೀವು ನಿಮ್ಮ ಸಂಭಾಷಣೆಗಳನ್ನು, ಅರ್ಥಾತ್ ಸಂದೇಶಗಳ ಗೌಪ್ಯತೆ ಕಾಪಾಡಲು ಎಂಡ್ ಟು ಎಂಡ್ ಎನ್ಕ್ರಿಪ್ಶನ್ ಆಯ್ಕೆ ಮಾಡಬಹುದು. ವಾಟ್ಸ್ ಅಪ್ ನಲ್ಲಿ ಇದು ಡಿಫಾಲ್ಟ್ ಸೆಟ್ಟಿಂಗ್ ಆಗಿಯೇ ಇದ್ದರೆ ಮೆಸೆಂಜರ್ ನಲ್ಲಿ ನೀವು ಈ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಮೆಸೆಂಜರ್ ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಬಟನ್ ಒತ್ತಿ. ಒಂದು ಸಮಯದಲ್ಲಿ ಒಂದು ಸಾಧನದಲ್ಲಿ ಮಾತ್ರ ಈ ರೀತಿ ಮಾಡಬಹುದು. ಎನೇಬಲ್ ಆದಾಗ ಸೀಕ್ರೆಟ್ ಇರುವಲ್ಲಿ ಟ್ಯಾಪ್ ಮಾಡಿ.ಈ ಸಂದೇಶಗಳನ್ನು ಓದಿದ ನಂತರ ಹಾಗೂ ಒಂದು ನಿರ್ದಿಷ್ಟ ಸಮಯ ಮಿತಿಯ ನಂತರ ಅದಾಗಿಯೇ ಡಿಲೀಟ್ ಆಗುವಂತೆಯೂ ಮಾಡಬಹುದು.

ಲೆಗೆಸಿ ಕಾಂಟಾಕ್ಟ್ ಸೇರಿಸಿ :

ನಿಮ್ಮ ಫೇಸ್ ಬುಕ್ ಖಾತೆ ನಿಮ್ಮ ನಂತರವೂ ಚಾಲ್ತಿಯಲ್ಲಿರುತ್ತದೆ. ನಂತರವೂ ಈ ಪೇಜನ್ನು ಚೆನ್ನಾಗಿ ನಿಭಾಯಿಸಬೇಕೆಂದಿದ್ದಲ್ಲಿ ಯಾರಿಗೆ ನಿಮ್ಮ ಪುಟ ತೆರೆಯುವ ಅಧಕಾರವಿದೆಯೆಂದು ನೀವು ಫೇಸ್ ಬುಕ್ ಗೆ ತಿಳಿಸಬೇಕು.

ಆ್ಯಪ್ ನಲ್ಲಿ ಸೆಟ್ಟಿಂಗ್ಸ್ > ಸೆಕ್ಯುರಿಟಿ > ಲೆಗೆಸಿ ಕಾಂಟ್ಯಾಕ್ಟ್ ಇರುವಲ್ಲಿ ಹೋಗಿ ಇಲ್ಲಿ ನಿಮ್ಮ ಫೇಸ್ ಬುಕ್ ಕಾಂಟಾಕ್ಟ್ ಗಳ ಪೈಕಿ ಒಂದು ಕಾಂಟಾಕ್ಟ್ ಸೇರಿಸಿ. ನಿಮ್ಮ ನಿರ್ಧಾರದ ಬಗ್ಗೆ ನಿಮ್ಮ ಆ ಫೇಸ್ ಬುಕ್ ಕಾಂಟಾಕ್ಟ್ ಗೆ ಮುಂಚಿತವಾಗಿ ತಿಳಿಸಿ.

ಎಚ್ ಡಿ ಯಲ್ಲಿ ಅಪ್ ಲೋಡ್ ಮಾಡಿ

ಸಾಮಾನ್ಯವಾಗಿ ನೀವು ಫೇಸ್ ಬುಕ್ ಗೆ ಫೋಟೋ ಯಾ ವೀಡಿಯೊ ಒಂದನ್ನು ಅಪ್ ಲೋಡ್ ಮಾಡಿದಾಗ, ಜಾಗ, ಡಾಟಾ ವೆಚ್ಚ ಹಾಗೂ ಅಪ್ ಲೋಡ್ ಸ್ಪೀಡ್ ಗಮನದಲ್ಲಿರಿಸಿ ಆ್ಯಪ್ ಅದನ್ನು ಸ್ವಯಂಚಾಲಿತವಾಗಿ ರಿಸೈಜ್ ಮಾಡುತ್ತದೆ.

ಆದರೆ ನಿಮ್ಮ ಗೆಳೆಯರಿಗೆ ನೀವು ಪೋಸ್ಟ್ ಮಾಡಿದ್ದು ಚೆನ್ನಾಗಿ ಕಾಣಬೇಕೆಂದಿದ್ದರೆ ನೀವು ಎಚ್ ಡಿ ಫೀಚರ್ ಆನ್ ಮಾಡಬಹುದು. ಸೆಟ್ಟಿಂಗ್ಸ್ ಗೆ ಹೋಗಿ > ವೀಡಿಯೊಸ್ ಎಂಡ್ ಫೋಟೋಸ್ ಗೆ ಹೋಗಿ ಅಲ್ಲಿ ಅಪ್ ಲೋಡ್ ಎಚ್ ಡಿ ಆಪ್ಶನ್ ಅನ್ನು ಟಾಗಲ್ ಮಾಡಿ.

ನಿಮ್ಮ ಲಾಗಿನ್ ಪರಿಶೀಲಿಸಿ :

ನೀವು ಸಾಮಾನ್ಯವಾಗಿ ವಿವಿಧ ಸಾಧನಗಳಿಂದ ನಿಮ್ಮ ಫೇಸ್ ಬುಕ್ ಖಾತೆಗೆ ಲಾಗಿನ್ ಮಾಡಿರುತ್ತೀರಿ. ಇದನ್ನು ಪರಿಶೀಲಿಸಲು ನೀವು ಸೆಟ್ಟಿಂಗ್ಸ್ >ಸೆಕ್ಯುರಿಟಿ > ಇಲ್ಲಿ ಹೋದರೆ ನೀವು ಎಲ್ಲಿ ಲಾಗಿನ್ ಆಗಿದ್ದೀರಿ ಹಾಗೂ ಎಷ್ಟು ಬಾರಿ ಲಾಗಿನ್ ಆಗಿದ್ದೀರಿ ಹಾಗೂ ಯಾವ ಸಾಧನದಿಂದ ಲಾಗಿನ್ ಮಾಡಿದ್ದೀರೆಂದು ತಿಳಿಯಬಹುದು.

ಆನ್ ದಿಸ್ ಡೇ ಫೀಚರ್

ಕೆಲವೊಮ್ಮೆ ಫೇಸ್ ಬುಕ್‘ಆನ್ ದಿಸ್ ಡೇ’ ನೋಟಿಫಿಕೇಶನ್ ಪಾಪ್ ಅಪ್ ಮಾಡಿ ಹಿಂದಿನ ವರ್ಷಗಳಲ್ಲಿ ಈ ದಿನದಂದು ನೀವೆಲ್ಲಿ ಟ್ಯಾಗ್ ಮಾಡಲ್ಪಟ್ಟಿದ್ದೀರಿ, ನೀವೇನು ಪೋಸ್ಟ್ ಮಾಡಿದ್ದೀರಿ ಎಂದು ತಿಳಿಸುತ್ತದೆ.

ಪ್ರತಿ ವರ್ಷದ ನಿರ್ದಿಷ್ಟ ದಿನದಂದು ನೀವೇನು ಮಾಡಿದ್ದೀರೆಂದು ತಿಳಿಯಲು ವೆಬ್ ಬ್ರೌಸರ್ ನಲ್ಲಿ www.facebook.com/onthisday ಗೆ ಕ್ಲಿಕ್ ಮಾಡಿ.

ಮುಖ್ಯವಾದುದನ್ನು ಮಿಸ್ ಮಾಡಿಕೊಳ್ಳಬೇಡಿ

ನೀವು ನಿಯಮಿತ ಫೇಸ್ ಬುಕ್ ಬಳಕೆದಾರರಾಗಿದ್ದಲ್ಲಿ ನೀವು ವಿವಿಧ ಪೇಜುಗಳು ಹಾಗೂ ಖಾತೆಗಳನ್ನು ಫಾಲೋ ಮಾಡುತ್ತಿರಬಹುದು. ನಿಮಗೆ ಪ್ರತಿ ದಿನ ಯಾವ ವಿಷಯ ಫೇಸ್ ಬುಕ್ ನಲ್ಲಿ ಮೊದಲು ಕಾಣಿಸಬೇಕೆಂದೇನಾದರೂ ಇದ್ದರೆ, ಸೆಟ್ಟಿಂಗ್ಸ್ > ನ್ಯೂಸ್ ಫೀಡ್ ಪ್ರಿಫರೆನ್ಸಸ್ > ಪ್ರಯಾರಿಟೈಸ್ ಹೂ ಟು ಸೀ ಫಸ್ಟ್  ಇಲ್ಲಿ ಹೋಗಿ ಅಲ್ಲಿರುವ ಪಟ್ಟಿಯಲ್ಲಿ ನಿಮ್ಮ ಆದ್ಯತೆಯನ್ನು ಆಯ್ಕೆ ಮಾಡಿ.

ಮೆಸೆಂಜರ್ ಆ್ಯಪ್ ನೊಳಗಡೆಯೇ ಗೇಮ್ಸ್ ಆಡಿ

ಮೆಸೆಂಜರ್ ಒಳಗಡೆಯೇ ಚೆಸ್ ಆಡಬಹುದು. ಇನ್ನೊಬ್ಬರೊಂದಿಗೆ ಮೆಸೆಂಜರ್ ಸಂಭಾಷಣೆ ಆರಂಭಿಸಿ ನಂತರ @fbchess play ಎಂದು ಟೈಪ್ ಮಾಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News