‘ಹೀ’, ‘ಶೀ’ ಬದಲು ಆಕ್ಸ್‌ಫರ್ಡ್ ವಿದ್ಯಾರ್ಥಿಗಳು ಬಳಸುವ ಪದ ಇದು !
Update: 2016-12-12 16:27 GMT
ಲಂಡನ್, ಡಿ. 12: ಸಹಪಾಠಿಗಳನ್ನು ಸಂಬೋಧಿಸುವಾಗ ‘ಹೀ’ ಅಥವಾ ‘ಶೀ’ ಪದದ ಬದಲು ಲಿಂಗ ಸೂಚಕವಲ್ಲದ ‘ಝೀ’ ಪದವನ್ನು ವಿದ್ಯಾರ್ಥಿಗಳು ಬಳಸಬೇಕೆಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಬಯಸಿದೆ.
ವಿದ್ಯಾರ್ಥಿ ಸಂಘದ ಕರಪತ್ರವೊಂದರಲ್ಲಿ ನೂತನ ಮಾರ್ಗದರ್ಶಿ ಸೂತ್ರಗಳನ್ನು ಜಗತ್ತಿನ ಅತ್ಯಂತ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಪೈಕಿ ಒಂದಾಗಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಪ್ರಕಟಿಸಿದೆ.
ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಆಗುವ ಮುಜುಗರವನ್ನು ತಪ್ಪಿಸುವ ದೃಷ್ಟಿಯಿಂದ ಅದು ಈ ಕ್ರಮಕ್ಕೆ ಮುಂದಾಗಿದೆ ಎಂದು ‘ಸಂಡೇ ಟೈಮ್ಸ್’ ವರದಿ ಮಾಡಿದೆ.
ತೃತೀಯ ಲಿಂಗಿಗೆ ತಪ್ಪು ಪದವನ್ನು ಉದ್ದೇಶಪೂರ್ವಕವಾಗಿ ಬಳಸುವುದು ಆಕ್‌ಫರ್ಡ್ ನಡತೆ ಸಂಹಿತೆಯಲ್ಲಿ ಈಗಾಗಲೇ ಅಪರಾಧವಾಗಿದೆ.