ಅಲಕ್ಷಿತ ಮಕ್ಕಳು & ಅವರ ಹಕ್ಕುಗಳು

Update: 2016-12-18 10:21 GMT

ಜನಪ್ರತಿನಿಧಿಗಳು ಮತ್ತು ಅವರ ಹಲವು ಕಾರ್ಯಕ್ರಮಗಳನ್ನು ವಾಹಿನಿಗಳಲ್ಲಿ ಸತತವಾಗಿ ನೋಡುವಾಗ ನಾವೊಮ್ಮೆ ಗಮನಿಸಿ ನೋಡೋಣ. ಮಕ್ಕಳ ಬಗ್ಗೆ ಮಾಡುವ ಕಾರ್ಯಕ್ರಮಗಳ ಕುರಿತು ಯಾರೂ ಗಂಭೀರವಾದ ಗಮನವನ್ನು ಹರಿಸಿರುವಂತಹ ಸೂಚನೆಗಳೇ ಕಾಣುವುದಿಲ್ಲ.ಯಾವುದೇ ಮಾದರಿ ಜನಪ್ರತಿನಿಧಿ ಮಕ್ಕಳ ಪರವಾಗಿ ಧ್ವನಿ ಎತ್ತಿ ಸರಕಾರದಿಂದ ಸಿಗುವಂತಹ ಸೌಲಭ್ಯಗಳು, ಅಥವಾ ಸರಕಾರ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ತಳೆದಿರುವಂತಹ ಬದ್ಧತೆಗಳು ವ್ಯಾಪಕವಾಗಿ ಕಾಣಸಿಗುವುದಿಲ್ಲ. ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಗೊಂದಲ ಗೋಜಲುಗಳ ಪ್ರದರ್ಶನಗಳ ಆರ್ಭಟದಲ್ಲಿ ಮಕ್ಕಳ ಸಮಸ್ಯೆಗಳ ಕುರಿತಾದ ಯಾವ ಚರ್ಚೆಗಳೂ ಆಗುವುದಿಲ್ಲ. ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ, ಮಕ್ಕಳು ಅಲಕ್ಷಿತರು.

ವಿಶ್ವಸಂಸ್ಥೆಯ ಸಹಸ್ರಮಾನದ ಗುರಿ

ಮಕ್ಕಳು ಮತ್ತು ಮಕ್ಕಳ ಹಿತ ಕಾಪಾಡುವುದು ಈಗ ಜಗತ್ತಿನಲ್ಲಿ ಪ್ರಮುಖ ವಿಚಾರ. 18 ವರ್ಷದೊಳಗಿನ ಮಕ್ಕಳ ಜನಸಂಖ್ಯೆ ಎಲ್ಲಾ ದೇಶಗಳಲ್ಲೂ ಅತ್ಯಧಿಕವಾಗುತ್ತಿದೆ. ಭಾರತದಲ್ಲಿ 18 ವರ್ಷದೊಳಗಿನವರ ಸಂಖ್ಯೆ 55 ಕೋಟಿ ದಾಟಿದೆ. ಪ್ರತಿ ವರ್ಷ ಶೇ.1.8ರಷ್ಟು ಜನಸಂಖ್ಯೆ ಹೆಚ್ಚಳ ಭಾರತದಲ್ಲಿ ಆಗುತ್ತಿದೆ. ಅಂದರೆ ಪ್ರತಿವರ್ಷ ಭಾರತದಲ್ಲಿ 1,94,40,000 ಮಕ್ಕಳು ಜನಿಸುತ್ತಿದ್ದಾರೆ.ಇಲ್ಲಿನ ಮುಖ್ಯ ಉದ್ದೇಶ ಮಕ್ಕಳ ಸ್ಥಿತಿಗತಿಯ ಬಗ್ಗೆ ಎಲ್ಲಾ ವರ್ಗಗಳ ಜನರೂ ಚಿಂತಿಸುವಂತೆ ಪ್ರಚೋದಿಸುವುದೇ ಆಗಿದೆ. 18 ವರ್ಷದೊಳಗಿನ ಮಕ್ಕಳ ಸಂಖ್ಯೆ ಜಾಗತಿಕವಾಗಿ ಹೆಚ್ಚಾಗುತ್ತಿದೆ. ಅದರೊಂದಿಗೆ ಮಕ್ಕಳ ಸಮಸ್ಯೆಗಳೂ ಏರುತ್ತಿದೆ. ಕೆಲವು ಸಮಸ್ಯೆಗಳು ಕಣ್ಣಿಗೆ ಕಾಣುತ್ತಿವೆ. ಜನರ ಅರಿವಿಗೂ ಬರುತ್ತದೆ. ಆದರೆ ಎಷ್ಟೋ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿದರೆ ಏನು ಪ್ರಯೋಜನ. ಜನಹಿತ ಕಾಪಾಡಬೇಕಾದ ಸರಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಸರಕಾರದ ನೀತಿ ಕಾರ್ಯಕ್ರಮಗಳನ್ನು ರೂಪಿಸಲು ಪ್ರಭಾವ ಬೀರುವವರಿಗೆ ಇವುಗಳು ತಿಳಿಯಬೇಕಲ್ಲವೇ? ಇಂಥದ್ದೊಂದು ಕಾರ್ಯವನ್ನು ಜಾಗತಿಕವಾಗಿ ವಿಶ್ವಸಂಸ್ಥೆ ಮಾಡುತ್ತಿದೆ. ತೀರಾ ಇತ್ತೀಚೆಗೆ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ವರದಿಯಲ್ಲಿ ಈ ಕೆಳಗಿನ ಕೆಲವು ಅಂಕಿಸಂಕಿಗಳು ನಮ್ಮನ್ನು ಎಚ್ಚರಿಸುತ್ತದೆ.

  74 ಕೋಟಿ ಮ್ಕಳಿಗೆ ಸಮರ್ಪಕವಾದ ಆಸರೆ ಇಲ್ಲ.

  60 ಕೋಟಿ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಇಲ್ಲ.

  50 ಕೋಟಿ ಮಕ್ಕಳಿಗೆ ುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

  37 ಕೋಟಿ ಮಕ್ಕಳಿಗೆ ಾವುದೇ ಆರೋಗ್ಯ ಸೇವೆ ಲಭ್ಯವಿಲ್ಲ.

  24 ಕೋಟಿ ಮಕ್ಕಳು ಶಾಲೆಯ ಮುಖವನ್ನೇ ನೋಡಿಲ್ಲ.

  19 ಕೋಟಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ.

 40 ಕೋಟಿ ಮಕ್ಕಳಿಗೆ ಯಾವುದೇ ಮಾಹಿತಿ ಮನರಂಜನೆ ಸಿಗುತ್ತಿಲ್ಲ.

ಈ ಮೇಲಿನ ವಿಚಾರಗಳಲ್ಲಿ ಅತ್ಯವಶ್ಯಕ ಸೇವೆಗಳು ಸೌಲಭ್ಯಗಳು. ಇವು ಎಲ್ಲಾ ಮಕ್ಕಳಿಗೂ ಸಿಗಲೇಬೇಕು ಎನ್ನುವುದಾದರೆ ಅದನ್ನೇ ಹಕ್ಕು ಎನ್ನೋಣ. ಇಂತಹ ಹಕ್ಕುಗಳಿಂದ ವಂಚಿತರಾದ ಮಕ್ಕಳನು್ನ ಭಾರತದಲ್ಲೂ ಗುರುತಿಸಬಹುದು.

2004ರಲ್ಲಿ ಭಾರತದ ನೂರು ಮಕ್ಕಳಲ್ಲಿ 65 ಮಕ್ಕಳ ಹೆಸರು ಜನ್ಮದಾಖಲೆಗಳಲ್ಲಿ ಬರಲಿಲ್ಲ. ಏಳು ಮಕ್ಕಳು ತಮ್ಮ ಮೊದಲ ವರ್ಷ ಪೂರೈುವುದರೊಳಗೆ ಸತ್ತುಹೋದರು.

49 ಮಕ್ಕಳಿಗೆ ಎಲ್ಲಾ ರೋಗ ನಿರೋಧಕಗಳು ಸಿಗಲಿಲ್ಲ. ಐದು ಮಕ್ಕಳು ಅಪೌಷ್ಟಿಕತೆಯಿಂದ ಸತ್ತರು. 42 ಮಕ್ಕಳು ಸಾಮಾನ್ಯ ತೂಕಕ್ಕಿಂತ ಕಡಿಮೆ ತೂಕವನ್ನು ಹೊಂದಿದ್ದರು.75 ಮಕ್ಕಳು ತಮ್ಮ ಪ್ರಾಥಮಿಕ ಶಾಲೆಯ ಅವಧಿಯನ್ನೇ ಮುಗಿಸಲಿಲ್ಲ. ಈ ಸ್ಥಿತಿ ಭಾರತದ ಕೆಲವು ರಾಜ್ಯಗಳಲ್ಲಿ ಭಿನ್ನವಾಗಿರಬಹುದು. ಆದರೆ, ನಮ್ಮ ದೇಶದ ಒಟ್ಟಾರೆ ಪರಿಸ್ಥಿತಿ ಮತ್ತು ಜಗತ್ತಿನ ಬಹುತೇಕ ಎಲ್ಲಾ ಬಡ ಮತ್ತು ಹಿಂದುಳಿದ ದೇಶಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಇದನ್ನೆಲ್ಲಾ ನೋಡಿ ಕೈ ಕಟ್ಟಿ ಕೂರಲಾಗುತ್ತದೆಯೇ.ಖಂಡಿತ ಇಲ್ಲ. ಮಕ್ಕಳನ್ನು ಇಂದಿನ ಪ್ರಜೆಗಳು ಎಂದು ಜಾಗತಿಕವಾಗಿ ಪರಿಗಣಿಸುವ ಪ್ರಜ್ಞೆ ಬೆಳೆಯುತ್ತಿದೆ. ಈ ಜಾಗತಿಕ ಪ್ರಜ್ಞೆಯ ಮುಂಚೂಣಿಯಲ್ಲಿ ನಿಂತಿದೆ. ಹೀಗಾಗಿ ಮಕ್ಕಳ ಹಕ್ಕುಗಳ ಜಾರಿಯಾದ ಹತ್ತುವರ್ಷಗಳ ನಂತರ ಜಾಗತಿಕ ನಾಯಕರು ಸಹಸ್ರಮಾನದ ಶೃಂಗಸಭೆೆಯನ್ನು ನಡೆಸಿದರು. ಜಾಗತಿಕ ಮಕ್ಕಳ ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸಿದರು.ಶ್ರೀಮಂತ ರಾಷ್ಟ್ರ ಬಡರಾಷ್ಟ್ರ ಭಯೋತ್ಪಾದನೆಯಲ್ಲಿ ಸಿಲುಕಿರುವ ದೇಶ. ಸಂಪನ್ಮೂಲವಿಲ್ಲದೇ ಇತರರನ್ನು ಅವಲಂಬಿಸುವ ದೇಶ ಹೀಗೆ ಯಾವುದೇ ರೀತಿಯ ತಾರತಮ್ಯವನ್ನು ತೋರದೆ ಇಡೀ ಜಗತ್ತಿನ ಮಕ್ಕಳನ್ನು ಒಂದೇ ದೃಷ್ಟಿಯಿಂದ ನೋಡಬೇಕು. ಯಾವುದೇ ಮಗುವಿಗೆ ಹಾನಿಯಾಗಬಾರದು. ಎಂಬ ಮನೋಭಾವನೆ ಬೆಳೆಸಲು ನಾವು ಸಿದ್ಧ ಎಂದು ಘೋಷಿಸಬೇಕು. ಈ ಶೃಂಗ ಸಭೆಯ ಫಲವಾಗಿ ಸಹಸ್ರಮಾನದ ಗುರಿಗಳೂ ಎಂಬ ಬೃಹತ್ ಯೋಜನೆ ರೂಪಿತವಾಯಿತು. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಾದ ಎಲ್ಲಾ 189 ದೇಶಗಳೂ 2015ರೊಳಗೆ ಈ ಗುರಿಗಳನ್ನು ಅನುಸರಿಸಿ ಮ್ಮ ನೀತಿಗಳನ್ನು ರೂಪಿಸಬೇಕು.

ಅದಕ್ಕನುಗುಣವಾಗಿ ಯೋಜನೆಗಳು ಹಾಗೂ ಹಣಕಾಸನ್ನು ಮೀಸಲಿಡಬೇಕು ಎಂಬ ನಿರ್ದೇಶನವನ್ನು ವಿಶ್ವಸಂಸ್ಥೆ ನೀಡಿತು. ಏನಿದೆ ಸಹಸ್ರಮಾನದ ಗುರಿಗಳಲ್ಲಿ 1. ಅತೀವವಾದ ಹಸಿವು ಮತ್ತು ಬಡತನ ತೊಲಗಿಸುವಿಕೆ. ದಿನಕ್ಕೆ 45ರೂ.ಗಿಂತ ಕಡಿಮೆ ಗಳಿಸಿ ಬದುಕು ಸಾಗಿಸುವವರ ಸಂಖ್ಯೆ ತಗ್ಗಿಸುವುದು. ಹಸಿವಿನಿಂದ ಬಳಲುವರ ಸಂಖ್ಯೆಯನ್ನು ತಗ್ಗಿಸುವುದು.

2. ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣದ ಸಾಧನೆ. ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರೂ ಪ್ರಾಥಮಿಕ ಶಿಕ್ಷಣವನ್ನು ಪೂರೈಸುವುದನ್ನು ಖಾತರಿ ಪಡಿಸಿಕೊಳ್ಳುವುದು.

3. ಲಿಂಗ ಸಮಾನತೆ ಹಾಗೂ ಮಹಿಳಾ ಸಶಕ್ತತೆ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಲಿಂಗ ಅಸಮಾನತೆಯನ್ನು ತೊಲಗಿಸುವುದು.

4. ಮಕ್ಕಳ ಮರಣವನ್ನು ತಗ್ಗಿಸುವುದು: ಶಿಶು ಮರಣ ಮತ್ತು ಐದುವರ್ಷದೊಳಗಿನ ಮರಣವನ್ನು ತಗ್ಗಿಸುವುದು.

5. ತಾಯಂದಿರ ಆರೋಗ್ಯ ಉತ್ತಮಪಡಿಸುವುದು: ಹೆರಿಗೆ ಸಮಯದಲಿ್ಲ ತಾಯಂದಿರ ಮರಣ ತಡೆಯಬೇಕು.

6. ಎಚ್‌ಐವಿ/ಏಡ್ಸ್/ಮಲೇರಿಯಾ ಮುಂತಾದ ಸೋಂಕುಗಳನ್ನು ತೊಲಗಿಸಿ ತಾರತಮ್ಯ ರಹಿತ ಮತ್ತು ಸೂಕ್ತ ಯೋಜನೆ ಮತ್ತು ಕ್ರಿಯಾಶೀಲತೆಯುಳ್ಳ ಮುಕ್ತ ಆರ್ಥಿಕ ವ್ಯವಸ್ಥೆ ಮತ್ತು ವ್ಯಾಪಕ ವಿಜ್ಞಾನ ವಿಧಾನಗಳನ್ನು ಬೆಳೆಸಿ ಆಚರಣೆಗೆ ತರಬೇಕು.

7. ಪರಿಸರ ಸಮತೋಲನವನ್ನು ಖಚಿತಪಡಿಸುವುದು: ಸಮತೋಲನ ಅಭಿವೃದ್ಧಿಯನ್ನು ದೇಶದ ನೀತಿ ಮತ್ತು ಕಾರ್ಯಕ್ರಮಗಳ ಜೊತೆ ಏಕೀಕೃತಗೊಳಿಸುವುದು ಾಗೂ ವಿನಾಶವನ್ನು ತಡೆಯುವುದು.

8. ಅಭಿವೃದ್ಧಿಗಾಗಿ ಜಾಗತಿಕ ಸಂಬಂಧವನ್ನು ಉತ್ತಮಪಡಿಸುವುದು: ಮುಂದುವರಿಯುತ್ತಿರುವ ರಾಷ್ಟ್ರಗಳ ಸಹಕಾರದೊಡನೆ ಯುವಕರಿಗೆ ಕ್ಷೇಮಕರ ಮತ್ತು ಉತ್ಪಾದನ ಕೆಲಸಗಳನ್ನು ಅಭಿವೃದ್ಧಿ ವುತ್ತು ಅದನ್ನು ಜಾರಿಗೊಳಿಸುವುದು.

ಈ ಮೇಲಿನ ಗುರಿಗಳನ್ನು ಸಾಧಿಸುವುದು ಈಗಿರುವ ಸವಾಲು. ಈ ಗುರಿಗಳನ್ನು ಎಲ್ಲೋ ಸಾಧಿಸುವುದಲ್ಲ ನಮ್ಮ ದೇಶ ಮತ್ತು ನಮ್ಮ ರಾಜ್ಯ, ಜಿಲ್ಲೆ, ತಾಲೂಕು, ಪಂಚಾಯತ್, ವಾರ್ಡ್‌ಗಳಲ್ಲಿ ಮಕ್ಕಳ ಸ್ಥಿತಿಗತಿಗಳನ್ನು ಗಮನಿಸಿ ಎಲ್ಲಾ ಹಂತಗಳಲ್ಲಿ ಸ್ಪಷ್ಟಗುರಿಗಳನ್ನು ಸಾಧಿಸಲು ಕ್ರಮಕೈಗೊಂಡಾಗ ಜಾಗತಿಕವಾಗಿ ಸಹಸ್ರಮಾನದ ಗುರಿಗಳನ್ನು ಸಾಧಿಸಲು ಸಾಧ್ಯ. ನಮ್ಮ ಎಲ್ಲಾ ಮಕ್ಕಳೂ ನೆಮ್ಮದಿಯಿಂದ ಬದುಕಲು ಆಗುವುದಲ್ಲವೇ?

ಅಂಗನವಾಡಿಗಳು

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಒಂದು ದುರಂತವಾಯಿತು. ಬೆಂಕಿ ಹಾಕಿದ್ದ ಮನೆಗೆ ಮಧ್ಯಾಹ್ನ ಬೆಂಕಿ ಬಿದ್ದು ಒಳಗಿದ್ದ ಮೂರು ಮಕ್ಕಳು ಬೆಂದು ಹೋದರು. ಮನೆಗೆ ಏಕೆ ಬೀಗ ಹಾಕಿತ್ತು? ಮಕ್ಕಳೇಕೆ ಮನೆಯೊಳಗಿದ್ದರು? ಆ ಮಕ್ಕಳ ತಂದೆ ತಾಯಿ ಎಲ್ಲಿ ಎಂಬ ಪ್ರಶ್ನೆಗಳಿಗೆ ತಕ್ಷಣ ಉತ್ತರ ಸಿಕ್ಕಿರಲಿಲ್ಲ. ಆ ಮಕ್ಕಳ ತಾಯಿ ಮನೆಯಿಂದ ಬಹಳ ದೂರದಲ್ಲಿ ಕೆಲಸಕ್ಕೆ ಹೋಗಿದ್ದಳು. ತಾನು ಕೆಲಸಕ್ಕೆ ಹೋದಾಗ ಮಕ್ಕಳು ಬೀದಿಗೆ ಬೀಳಬಾರದೆಂದು ಮನೆಯೊಳಗೆ ಆಡಿಕೊಂಡಿರಿ ಹಸಿವಾದಾಗ ಊಟ ಮಾಡಿ ಎಂದು ಪ್ರತಿದಿನ ಆಕೆ ಹೇಳಿಹೋಗುತ್ತಿದ್ದಳಂತೆ. ರಕ್ಷಣೆ ಕೊಡಲು ಹೋಗಿ ಮಕ್ಕಳನ್ನು ದುರಂತಕ್ಕೆ ದೂಡಿದಂತಾಯಿತು. ಇಲ್ಲಿ ಬರುವ ಅನೇಕ ಪ್ರಶ್ನೆಗಳಲ್ಲಿ ಆ ಹೊತ್ತಿನಲ್ಲಿ ಮಕ್ಕಳು ಅಂಗನವಾಡಿಯಲ್ಲೋ ಅಥವಾ ಶಾಲೆಯಲ್ಲೋ ಇರಬೇಕಿತ್ತಲ್ಲವೇ. ಆ ಮಕ್ಕಳಿದ್ದ ಬಡಾವಣೆಯಲ್ಲಿ ತಾಯಂದಿರು ಕೆಲಸಕ್ಕೆ ಹೋದಾಗ ಮಕ್ಕಳನ್ನು ನೋಡಿಕೊಳ್ಳಲು ವ್ಯವಸ್ಥೆಗಳು ಇರಲಿಲ್ಲವೇ? ಅಕ್ಕಪಕ್ಕದವರಿಗೆ ಈ ಕುರಿತು ಮಾಹಿತಿ ಇರಲಿಲ್ಲವೇ? ಯಾರೂ ಈ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಮನಸ್ಸು ತೋರಿರಲಿಲ್ಲವೇ? ಸರಕಾರಕ್ಕೆ ಇಂತಹ ಪರಿಸ್ಥಿತಿಗಳ ಬಗ್ಗೆ ಅರಿವಿರಲಿಲ್ಲವೇ? ಇತ್ಯಾದಿ, ಇಂತಹ ಪ್ರಕರಣಗಳಾದಾಗ ಪೊಲೀಸರು ಯಾರ ಮೇಲೆ ಏನೆಂದು ದೂರು ದಾಖಲು ಮಾಡಿಕೊಳ್ಳುತ್ತಾರೆ? ಇಲ್ಲಿ ಅಪರಾಧಿಗಳು ಯಾರು? ಮಕ್ಕಳಲ್ಲಿ ಮನೆಯಲ್ಲಿ ಬೀಗ ಹಾಕಿ ಹೋದ ತಾಯಿಯೇ? ತಾಯಿಯ ಇಂತಹ ಪರಿಸ್ಥಿತಿಯ ಅರಿವಿದ್ದ ಇತರರೇ? ತಾಯಿಗೆ ಕೆಲಸಕೊಟ್ಟವರೇ? ಸುತ್ತಮುತ್ತಲಿನ ಸಮುದಾಯವೇ ಅಥವಾ ಇಂತಹ ಪರಿಸ್ಥಿತಿಗಳಿಗೆ ಕಾರಣವಾಗಿರುವ ಸರಕಾರವೇ? ನಗರಪಾಲಿಕೆಯೇ? ರಾಜ್ಯ ಮತ್ತು ಸ್ಥಳೀಯ ಸರಕಾರ ಮತ್ತು ಸಮುದಾಯದ ಇಂತಹ ಬೇಜವಾಬ್ದಾರಿ ಸಂವಿಧಾನ ಪರಿಚ್ಛೇಧ 21ರಲ್ಲಿ ಹೇಳಿರುವ ಜೀವಿಸುವ ಹಕ್ಕಿನ ಚ್ಯುತಿ ಅಲ್ಲವೇ? ಈ ಪ್ರಕರಣದ ಹಿನ್ನೆಲೆಯಲ್ಲಿ ಇನ್ನೂ ಹಲವಾರು ಕಡೆ ವಿಚಾರಿಸಿದಾಗ ತಿಳಿದದ್ದು ಇಂತಹ ಅಭ್ಯಾಸ ಬಹಳ ಸಾಮಾನ್ಯ. ಎಷ್ಟೋ ಜನ ತಮ್ಮ ಮಕ್ಕಳನ್ನು ಮನೆಯಲ್ಲೇ ಬೀಗ ಹಾಕಿ ಹೋದರೆ, ಇನ್ನೂ ಕೆಲವರು ಮಕ್ಕಳಿಗೆ ಎಲ್ಲಾ ವ್ಯವಸ್ಥೆಗಳನ್ನು ಮನೆಯ ಬೀಗ ಹಾಕಿದ ಬಾಗಿಲೆದುರು ಇಟ್ಟು ಮಕ್ಕಳನ್ನು ಹೊರಗೇ ಇರುವಂತೆ ಮಾಡಿ ಹೋಗುತ್ತಾರೆ. ಬೀಗ ಹಾಕಿದ ಮನೆಯೊಳಗಿದ್ದರೆ ಎದುರಿಸಬಹುದಾದ ಅಪಾಯ ಒಂದು ರೀತಿಯಾದರೆ, ಮನೆಯ ಹೊರಗೆ ಯಾರ ರಕ್ಷಣೆ ಇಲ್ಲದೆ ಇರುವುದಾದರೆ ಅವರು ಎದುರಿಸಬಹುದಾದ ಅಪಾಯಗಳು ಎಂತಹವು ಎಂದು ಊಹಿಸಿಕೊಳ್ಳಿ. ಮಕ್ಕಳ ಸ್ಕೂಲು ಮನೆಲಲ್ವೇ? ಎಂದವರು ಕೈಲಾಸಂ ಅಂದರೆ ಮಕ್ಕಳು ಮನೆಯಲ್ಲೇ ಆಡಿಕೊಂಡು ಹಾಡಿಕೊಂಡು ಉಂಡು ಉಟ್ಟು ಉರುಳಿ ನಲಿಯಬೇಕು. ತಾಯಿ ತಂದೆ ಅಜ್ಜಿ ಅಜ್ಜ ಮತ್ತಿತರ ಮನೆಮಂದಿಯೊಡನೆ ಓಡಾಡಿಕೊಂಡಿರಬೇಕು. ಅವರ ಮಾತುಕತೆ ನಡವಳಿಕೆ ರೀತಿ ನೀತಿಗಳನ್ನು ನೋಡುತ್ತಾ ಕಲಿಯಬೇಕು. ಒಟ್ಟಿನಲ್ಲಿ ಯಾವುದೇ ಒತ್ತಡ ಹಿಂಸೆ ಕೊರತೆಗಳಿಲ್ಲದ ವಾತಾವರಣದಲ್ಲಿ ಬೆಳೆಯುತ್ತಿರಬೇಕು. ಕಾಲಕಳೆದಂತೆ ಎಲ್ಲಾ ಮಕ್ಕಳಿಗೆ ಅವರವರ ಮನೆಗಳಲ್ಲೇ ಇಂತಹ ಸೌಲಭ್ಯ ಸಿಗದಂತಾಯಿತು. ಕುಟುಂಬಗಳಲ್ಲಿ ಆರ್ಥಿಕ ಸಾಮಾಜಿಕ ಒತ್ತಡಗಳಿಂದಾಗಿ ಮನೆಗಳಲ್ಲೇ ಮಕ್ಕಳಿಗೆ ಇಂತಹ ವಾತಾವರಣ ಸಿಗದಿದ್ದರೆ ಏನು ಮಾಡುವುದು? ಪೋಷಕರು ತಮ್ಮ ಕೆಲಸಕ್ಕೆ ಹೊಲಗದ್ದೆಗಳಿಗೋ, ಕಾರ್ಖಾನೆಗಳಿಗೋ, ಕಚೇರಿಗಳಿಗೋ ಹೋದಾಗ ಮಕ್ಕಳೊಡನೆ ಮಾತನಾಡುವವರಾರು? ಆಡುವವರಾರು? ಹಾಡುವವರಾರು? ಅವರ ಆರೋಗ್ಯ, ಆಹಾರ ಗಮನಿಸುವವರಾರು? ಅವರಿಗೆ ಕೆಲವು ಮೂಲ ಕೌಶಲ್ಯಗಳು, ಉದಾಹರಣೆಗೆ, ತನ್ನ ವಯೋಮಾನದವರೊಡನೆ ಬೆರೆಯುವುದು, ತನ್ನ ಶೌಚ ಕಾರ್ಯಗಳನ್ನು ಮಾಡುವುದು, ಶುಚಿಯಾಗಿರುವುದು, ಊಟ ಮಾಡುವುದು, ಬಟ್ಟೆ ಹಾಕಿಕೊಳ್ಳುವುದು, ತನ್ನ ವಸ್ತುಗಳನ್ನು ನೋಡಿಕೊಳ್ಳುವುದು, ಇತ್ಯಾದಿಗಳನ್ನು ಕಲಿಸುವವರಾರು?

ಪ್ರಾಯಶಃ ಹಲವು ದಶಕಗಳ ಹಿಂದೆ ಇದನ್ನೆಲ್ಲಾ ದೊಡ್ಡ ವಿಷಯವಾಗಿ ಯಾರೂ ಪರಿಗಣಿಸುತ್ತಿರಲಿಲ್ಲ. ಕುಟುಂಬದ ಹತ್ತಿರದ ಸಂಬಂಧಿಗಳು ಅತ್ತೆ ಮಾವ ಚಿಕ್ಕಪ್ಪ ಚಿಕ್ಕಮ್ಮ ಹೀಗೆ ಯಾವುದೋ ಒಂದು ಸಂಬಂಧದ ಅಥವಾ ಸಮುದಾಯದ ಹತ್ತಿರದ ಜನ ಮಕ್ಕಳನ್ನು ಹಗಲಲ್ಲೋ, ಮಧ್ಯಾಹ್ನವೋ, ಸಂಜೆಯೋ ಪೋಷಕರು ಬರುವವರೆಗೂ ನೋಡಿಕೊಳ್ಳುತ್ತಿದ್ದರು. ಆ ಮಕ್ಕಳು ಮನೆ ಬಿಟ್ಟು ರಸ್ತೆಗೆ ಓಡುವುದನ್ನು, ಹಳ್ಳಗಳತ್ತಲೋ, ಬೆಂಕಿಯತ್ತಲೋ, ಪಶುಗಳತ್ತಲೋ ಹೋಗಿ ಅಪಾಯಕ್ಕೆ ಬೀಳುವುದನ್ನು ತಡೆಯುವುದಕ್ಕೆ ಇವರು ಸಹಾಯ ಮಾಡುತ್ತಿದ್ದರು. ಒಟ್ಟು ಕುಟುಂಬಗಳ ವ್ಯವಸ್ಥೆ ಒಡೆಯುತ್ತಾ ಹೋದಂತೆ ಮಕ್ಕಳಿಗೆ ಇಂತಹ ರಕ್ಷಣೆ ಪೋಷಣೆ ಸಿಗುವ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋಯಿತು. ಮಕ್ಕಳು ಪೋಷಕರಿದ್ದು ಅನಾಥರಾಗುವುದು, ಆಡಲು, ಮಾತಾಡಲು ಯಾವುದೇ ಪ್ರಚೋದನೆಗಳಿಲ್ಲದ ಕಾರಣ ಭಾಷೆ ಕಲಿಯದೇ ಇತರರೊಂದಿಗೆ ಬೆರೆಯದೇ ಬುದ್ಧಿಮಾಂದ್ಯರಂತೆ ಆದ ಅನೇಕ ಪ್ರಕರಣಗಳು ಕಂಡು ಬರಲಾರಂಭಿಸಿತು. ಇಂತಹ ಪರಿಸ್ಥಿತಿಯನ್ನು ಗಮನಿಸಿದ ತಾರಾಬಾಯಿ ಮೋಗಕ್ ಮೊತ್ತ ಮೊದಲ ಬಾರಿಗೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿ ಅಂಗನವಾಡಿಯ ಕಲ್ಪನೆಯನ್ನು ಮುಂದಿಟ್ಟರು. ಪೋಷಕರು ಕೆಲಸಗಳಿಗೆ ಹೊರಟಾಗ ತಾಯಂದಿರು ತಮ್ಮ ಮನೆಕೆಲಸಗಳಲ್ಲಿ ತೊಡಗಿದ್ದಾಗ ಮಕ್ಕಳಿಗೆ ಸುರಕ್ಷಿತ ವಾತಾವರಣದಲ್ಲಿ ಆಡಲು, ಹಾಡಲು, ಚಟುವಟಿಕೆಗಳಲ್ಲಿ ತೊಡಗಲು ಮತ್ತು ದಿನನಿತ್ಯದ ಜವಾಬ್ದಾರಿಗಳನ್ನು ನಿರ್ವಹಿಸಲು, ಊಟ ಮಾಡುವುದು, ಶೌಚಾಲಯ ಬಳಕೆ, ಬಟ್ಟೆ ಬದಲಿಸುವುದು, ನಿದ್ದೆ ಮಾಡುವುದು, ಇತರ ಮಕ್ಕಳೊಡನೆ ಬೆರೆಯುವುದು, ಮಾತಾಡುವುದು, ಕೊಡುಕೊಳ್ಳುವಿಕೆ; ಇವೇ ಮೊದಲಾದವುಗಳನ್ನು ಮಾಡುತ್ತಾ ಕಲಿುುವುದು ಇದರ ಉದ್ದೇಶವಾಗಿತ್ತು.

1950ರಲ್ಲಿ ಭಾರತದ ಸಂವಿಧಾನ ಪ್ರಕಟವಾದಾಗ, ಪರಿಚ್ಛೇದ 45ರಲ್ಲಿ ಮಕ್ಕಳಿಗೆ 14 ವರ್ಷವಾಗುವ ತನಕ ಶೈಕ್ಷಣಿಕ ಮತ್ತು ಸಂಬಂಧಿತ ವ್ಯವಸ್ಥೆಗಳನ್ನು ಮಾಡುವ ಭರವಸೆಗಳನ್ನು ನೀಡಲಾಗಿತ್ತು. ಶಿಕ್ಷಣದ ಹಕ್ಕನ್ನು ಕುರಿತು ಪರಿಚ್ಛೇದ 21ಎ ಗೆ ತಿದ್ದುಪಡಿಯಾದ ಸಂದರ್ಭದಲ್ಲಿ ಪರಿಚ್ಛೇದ 45ಕ್ಕೂ ತಿದ್ದುಪಡಿ ಮಾಡಿ, 6 ವರ್ಷದೊಳಗಿನ ಮಕ್ಕಳಿಗೆ ಪ್ರಾಥಮಿಕ ಪೂರ್ವ ಶೈಕ್ಷಣಿಕ ಮತ್ತು ಚಟುವಟಿಕೆಗಳ ಕಾರ್ಯಕ್ರಮಗಳನ್ನು ಎಲ್ಲಾ ಮಕ್ಕಳಿಗೆ ತಲುಪಿಸಲು ಸರಕಾರ ಬದ್ಧವಾಗಿದೆ. ಭಾರತ ಸಹಿ ಮಾಡಿ ಬದ್ಧವಾಗಿರುವ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಬಂಡಿಕೆ 1989ರ ವಿವಿಧ ಪರಿಚ್ಛೇದಗಳ ವಿಶ್ಲೇಷಣೆ ಮಾಡಿದಾಗ ಇದೇ ಅಭಿಪ್ರಾಯ ವ್ಯಕ್ತವಾಗುತ್ತದೆ. ಈ ಅಂಗನವಾಡಿಗಳ ಕಾರ್ಯಕ್ರಮಗಳ ಬಗ್ಗೆ ಮತ್ತು ಅದೇ ರೀತಿಯ ಇತರ ಸರಕಾರದ ಯೋಜಿತ ಕಾರ್ಯಕ್ರಮಗಳ ಬಗ್ಗೆ ಮುಂದೆ ತಿಳಿಯೋಣ.

Similar News