ಜೆಬ್ರಾನಿಕ್ಸ್ ನಿಂದ ಮಲ್ಟಿಮೀಡಿಯಾ ಸ್ಪೀಕರ್ ZEB-BT361RUCF ಬಿಡುಗಡೆ

Update: 2016-12-27 09:47 GMT

 ಜೆಬ್ರಾನಿಕ್ಸ್ ಇಂಡಿಯಾ ಪ್ರೈ ಲಿ., ಭಾರತದಲ್ಲಿ ಐಟಿ ಬಿಡಿಭಾಗಗಳು ಮತ್ತು ಆಡಿಯೋ ಹಾಗೂ ವೀಡಿಯೋ ಉತ್ಪನ್ನಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ರಾಂಡ್ ಆಗಿದ್ದು, ಈಗ ಆಡಿಯೋ ವಲಯದಲ್ಲಿ ತನ್ನ ಪೋರ್ಟ್ ಫೋಲಿಯೋಗೆ ಮತ್ತೊಂದು ಉತ್ಪನ್ನವನ್ನು ಸೇರಿಸಿದೆ.  ಆಡಿಯೋ ಉತ್ಪನ್ನಗಳಾದ -ಬ್ಲೂಟೂತ್ ಸ್ಪೀಕರ್ ಗಳು, ಟವರ್ ಸ್ಪೀಕರ್ ಗಳು ಮತ್ತು ಹೋಂ ಥಿಯೇಟರ್ ಸಿಸ್ಟಂಗಳಿಗೆ  ಗ್ರಾಹಕರಿಂದ ಇರುವ ಬೇಡಿಕೆಯನ್ನು ಪರಿಗಣಿಸಿ, ಜೆಬ್ರಾನಿಕ್ಸ್ ಬ್ರಾಂಡ್ ಪ್ರತೀ ತಿಂಗಳೂ ಹೊಸ ಉತ್ಪನ್ನಗಳ ಶ್ರೇಣಿ ಬಿಡುಗಡೆ ಮಾಡುತ್ತಿದೆ.

2.2 ಮಲ್ಟಿಮೀಡಿಯಾ ಸ್ಪೀಕರ್ ಬಿಡುಗಡೆಯಾಗಲಿರುವ ಅತ್ಯಾಧುನಿಕ ಸಾಧನವಾಗಿದೆ. ZEB-BT361RUCF ಎಂದು ಕರೆಯಲಾಗುವ, 2.2 ಸ್ಪೀಕರ್ ಹೆಚ್ಚಿನ ಜನರ ಗಮನ ಸೆಳೆಯುವಲ್ಲಿ ಮತ್ತು ಸಂಗೀತ ಗುನುಗಲು ಮತ್ತು ಮನೆಯಲ್ಲಿ ಚಲನಚಿತ್ರ ವೀಕ್ಷಿಸಲು ಬಯಸುವ ಸಂಗೀತಪ್ರಿಯರ ಹೃದಯ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ಯಾಟಲೈಟ್ ಗಳ ವುಡನ್ ಆವರಣ ಮತ್ತು ವೂಫರ್ ಆಡಿಯೋಪ್ರೇಮಿಗಳು ಬಯಸುವ ದೃಢ ಮತ್ತು ಒರಟಾದ ನೋಟ ನೀಡುತ್ತದೆ.

 ಎರಡು 4-ಇಂಚುಗಳ ಸಬ್ ವೂಫರ್ ಡ್ರೈವರ್ಸ್ ಒಂದೇ ಕ್ಯಾಬಿನೆಟ್ ನಲ್ಲಿ ಸೇರಿಸಿರುವುದರಿಂದ ಲಿವಿಂಗ್ ರೂಂನಲ್ಲಿ ಥಿಯೇಟರ್ ನಂತಹ ವಾತಾವರಣ ನೀಡುತ್ತದೆ, ಎಂದು ಜೆಬ್ರಾನಿಕ್ಸ್ ನಿರ್ದೇಶಕರಾದ ಮಿ. ಪ್ರದೀಪ್ ದೋಷಿ ಹೇಳಿದ್ದಾರೆ. ಜೆಬ್ರಾನಿಕ್ಸ್ ನ ಹೊಸ ಸ್ಪೀಕರ್ ಗಳು ಬ್ಲೂಟೂತ್ ಸಂಪರ್ಕ, ಯು ಎಸ್ ಬಿ ಪೋರ್ಟ್, ಎಸ್ ಡಿ ಸಪೋರ್ಟ್ ಮತ್ತು ಪೂರ್ವನಿರ್ಮಿತ ಎಫ್ ಎಂ ಟ್ಯೂನರ್ ನೊಂದಿಗೆ ಬರುತ್ತದೆ. ಸಬ್ ವೂಫರ್ ನ ಔಟ್ ಪುಟ್ ಪವರ್ 25 ವ್ಯಾಟ್ಸ್ ಆಗಿದ್ದು, ಪ್ರತಿಯೊಂದು ಸ್ಯಾಟಲೈಟ್ 12 ವ್ಯಾಟ್ಸ್ ಔಟ್ ಪುಟ್ ನೀಡುತ್ತದೆ; ಇದು ಉತ್ತಮ ನೋಟ್ ನ ಸಂಯೋಜನೆಯೊಂದಿಗೆ, ಸರಿಯಾದ ಬಿಟ್ ಇರುವ ಬಾಸ್ ನೀಡುವ ಭರವಸೆ ಹೊಂದಿದೆ.

 ಎಲ್ ಇ ಡಿ ಪ್ರದರ್ಶನವಿರುವ ಸುಂದರವಾಗಿ ಸಂಯೋಜಿತವಾದ ಕಂಟ್ರೋಲ್ ಪ್ಯಾನೆಲ್  ಮಲ್ಟಿಮೀಡಿಯಾ ನಿಯಂತ್ರಣಗಳನ್ನು ನಿರ್ವಹಿಸಲು ನೆರವಾಗುತ್ತದೆ. ಧ್ವನಿಯ ಪ್ರಮಾಣ, ಬಾಸ್ ಮತ್ತು ಟ್ರೆಬಲ್ ನಿಯಂತ್ರಣಗಳನ್ನು ಸಬ್ ವೂಫರ್ ನ ಮುಂಭಾಗದಲ್ಲಿ ಅತ್ಯಾಕರ್ಷಕವಾಗಿ ಹೊಂದಿಸಲಾಗಿದೆ. 2.2 ಸ್ಪೀಕರ್ ರಿಮೋಟ್ ಕಂಟ್ರೋಲ್ ನೊಂದಿಗೆ ಲಭ್ಯವಿದ್ದು, ಇದು ದೂರದಿಂದ ಪ್ರತಿಯೊಂದನ್ನೂ ನಿಯಂತ್ರಿಸುವ ಆಯ್ಕೆ ನೀಡುತ್ತದೆ.

ಜೆಬ್ರಾನಿಕ್ಸ್ 2.2 ಮಲ್ಟಿಮೀಡಿಯಾ ಸ್ಪೀಕರ್ ಆನ್ ಲೈನ್ ನಲ್ಲಿ ಮತ್ತು ಭಾರತದಾದ್ಯಂತ ಕಂಪನಿಯ ವಿತರಣಾ ನೆಟ್ ವರ್ಕ್ ಗಳಲ್ಲಿ ಲಭ್ಯ. ಇದು ರೂ 4242 ರ ಮಿತವ್ಯಯಕಾರಿ ಬೆಲೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News