ಬಹುನಿರೀಕ್ಷಿತ ಹೊಸ ನೋಕಿಯಾ ಆಂಡ್ರಾಯ್ಡ್ ಮೊಬೈಲ್ ಬಿಡುಗಡೆ
ಹೊಸ ನೋಕಿಯಾ ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಿವೆ. ನಿಜಕ್ಕೂ ಈ ಫೋನ್ ಪುಳಕವುಂಟು ಮಾಡುತ್ತಿದೆ. ಎರಡು ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್‌ಗಳ ಕಾಳಗದಲ್ಲಿ ಸೋತು ಸುಣ್ಣವಾದ ಮೇಲೆ ಒಂದು ಕಾಲದಲ್ಲಿ ಮೊಬೈಲ್ ಫೋನ್‌ಗಳ ಜಗತ್ತನ್ನು ಆಳಿದ್ದ ನೋಕಿಯಾವನ್ನು ಹೆಚ್ಚುಕಡಿಮೆ ಎಲ್ಲರೂ ಮರೆತೇಬಿಟ್ಟಿದ್ದರು. ಪ್ರತಿಸ್ಪರ್ಧಿಗಳು ಹೊರತರುತ್ತಿದ್ದ ವಿನೂತನ ಮಾದರಿಯ ಫೋನ್‌ಗಳ ಮುಂದೆ ತನ್ನ ಆಟ ಸಾಗದೆ ನೋಕಿಯಾ ಹೊರಬಿದ್ದಾಗ ಇಡೀ ವಿಶ್ವವೇ ಅದನ್ನು ಭಾರವಾದ ಹೃದಯದಿಂದ ಗುಡ್ ಬೈ ಹೇಳಿತ್ತು.
ಆದರೆ ಒಮ್ಮೆ ವಿಶ್ವಮಾನ್ಯವಾಗಿದ್ದ ನೋಕಿಯಾ ಇದೀಗ ಫೀನಿಕ್ಸ್‌ನಂತೆ ಮತ್ತೆ ಎದ್ದು ನಿಂತಿದೆ. ಅದು ಬಿಡುಗಡೆಗೊಳಿಸಿರುವ ನೋಕಿಯಾ 6 ಮೊಬೈಲ್ ಫೋನ್ ಬೆರಗು ಮೂಡಿಸುವಂತಿದೆ. ಅದರ ಕುರಿತು ಅಗತ್ಯ ಮಾಹಿತಿಗಳು ಇಲ್ಲಿವೆ......
4 ಜಿಬಿ ರ್ಯಾಮ್, 64 ಜಿಬಿ ಆನ್‌ಬೋರ್ಡ್ ಸ್ಟೋರೇಜ್ ಹೊಂದಿರುವ ನೋಕಿಯಾ 6 ಮೈಕ್ರೋ ಎಸ್‌ಡಿ ಸಪೋರ್ಟ್‌ನೊಂದಿಗೆ 16 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಮತ್ತು 3,000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
5.5 ಇಂಚುಗಳ 1920 x 1080 ಎಚ್‌ಡಿ ಸ್ಕ್ರೀನ್ ಹೊಂದಿದ್ದು, ಅಲ್ಯುಮಿನಿಯಂನಲ್ಲಿ ನಿರ್ಮಾಣಗೊಂಡಿದೆ.
ಆಂಡ್ರಾಯ್ಡಾ ಆಪರೇಟಿಂಗ್ ಸಿಸ್ಟಮ್‌ನ ಏಳನೇ ಪ್ರಮುಖ ಆವೃತ್ತಿ ನೋಗಾಟ್ ಅನ್ನು ಬಳಸಿಕೊಂಡಿರುವುದಾಗಿ ಕಂಪನಿಯು ಹೇಳಿಕೊಂಡಿದೆ.