ನೋಕಿಯಾ 6 : ಭಾರತದಲ್ಲಿ ಬೆಲೆ ಮತ್ತು ನಿಮಗೆ ಬೇಕಾದ ಎಲ್ಲ ವಿವರಗಳು

Update: 2017-01-09 09:20 GMT

ತಿಂಗಳುಗಳ ಕಾಲ ಊಹಾಪೋಹಗಳ ಬಳಿಕ ನೋಕಿಯಾ ಕೊನೆಗೂ ತನ್ನ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್- ನೋಕಿಯಾ 6 ಅನ್ನು ರವಿವಾರ ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಮೈಕ್ರೋಸಾಫ್ಟ್ ನೋಕಿಯಾ ಕಂಪನಿಯ ಮೊಬೈಲ್ ತಯಾರಿಕೆ ವಿಭಾಗವನ್ನು ಖರೀದಿಸಿದ ಬಳಿಕ ನೋಕಿಯಾ ಬ್ರಾಂಡ್‌ನಡಿ ಹೊರಬಿದ್ದಿರುವ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಫಿನ್ಲೆಂಡ್ ಮೂಲದ ಎಚ್‌ಎಂಡಿ ಗ್ಲೋಬಲ್ ನೋಕಿಯಾ-6 ನ್ನು ಅಭಿವೃದ್ಧಿಗೊಳಿಸಿದ್ದು, ಚೀನಾದ ಫಾಕ್ಸ್‌ಕಾನ್ ಇದನ್ನು ತಯಾರಿಸಿದೆ.

ಹೊಸ ಸ್ಮಾರ್ಟ್‌ಫೋನ್‌ನ್ನು ಮಾರುಕಟ್ಟೆಗೆ ತರುವುದಾಗಿ ಕಳೆದ ವರ್ಷದ ಫೆಬ್ರವರಿಯಲ್ಲಿ ಪ್ರಕಟಿಸಿದ್ದ ಕಂಪನಿಯು ನಿರೀಕ್ಷೆಗೆ ಮೀರಿ ಬಹಳ ಮೊದಲೇ ಬಿಡುಗಡೆಗೊಳಿಸಿದೆ. ಹೊಸ ನೋಕಿಯಾ - 6 ಕುರಿತು ನಿಮಗೆ ಬೇಕಾದ ಎಲ್ಲ ಮಾಹಿತಿಗಳು ಇಲ್ಲಿವೆ.

ತಾಂತ್ರಿಕ ವಿವರಗಳು

ಪ್ರೊಸೆಸರ್: 1.4 ಗಿಗಾಹರ್ಟ್ಜ್ ಕೋರ್ ಪ್ರೊಸೆಸರ್ ಮತ್ತು ಆಡ್ರೆನೊ ಜಿಪಿಯು ಹೊಂದಿರುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 430 ಚಿಪ್ ಸೆಟ್ ಇದರಲ್ಲಿದೆ.

ರ್ಯಾಮ್: ಇದು 4 ಜಿಬಿ ರ್ಯಾಮ್ ಹೊಂದಿದೆ.

ಇಂಟರ್ನಲ್ ಸ್ಟೋರೇಜ್: 64 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, ಮೈಕ್ರೊ ಎಸ್‌ಡಿ ಕಾರ್ಡ್ ಬಳಸುವ ಮೂಲಕ 128 ಜಿಬಿವರೆಗೆ ವಿಸ್ತರಿಸಬಹುದಾಗಿದೆ.

ಸ್ಕ್ರೀನ್: 5.5 ಇಂಚು 1080ಪಿ ಡಿಸ್‌ಪ್ಲೇ ಹೊಂದಿದ್ದು, ಕರ್ವಡ್ 2.5ಡಿ ಗೊರಿಲ್ಲಾ ಗಾಜಿನ ರಕ್ಷಣೆಯಿದೆ.

ಹಿಂಬದಿ ಕ್ಯಾಮೆರಾ: ಎಫ್/2.0 ಅಪೆರ್ಚರ್ ಲೆನ್ಸ್, ಫೇಜ್ ಡಿಟೆಕ್ಷನ್ ಆಟೋಫೋಕಸ್ ಮತ್ತು ಡ್ಯುಯಲ್ ಎಲ್‌ಇಡಿ ಫ್ಲಾಷ್‌ನೊಂದಿಗೆ 16-ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ.

ಮುಂಬದಿ ಕ್ಯಾಮೆರಾ: 8-ಮೆಗಾಪಿಕ್ಸೆಲ್

ಸಾಫ್ಟ್‌ವೇರ್: ನೋಕಿಯಾ- 6 ಆಂಡ್ರಾಯ್ಡ್ 7.0 ನಾಗಟ್ ಆಧರಿಸಿ ಕಾರ್ಯ ನಿರ್ವಹಿಸುತ್ತದೆ.

ಬ್ಯಾಟರಿ: ನಾನ್-ರಿಮೂವೇಬಲ್ 3,000 ಎಂಎಎಚ್ ಬ್ಯಾಟರಿ.

ವಿಶೇಷ ಲಕ್ಷಣಗಳು

ಮೆಟಲ್ ಯುನಿಬಾಡಿ ವಿನ್ಯಾಸ ಹೊಂದಿರುವ ನೋಕಿಯಾ-6 ಅನ್ನು 6000 ಸಿರೀಸ್ ಅಲ್ಯುಮಿನಿಯಂ ಬಳಸಿ ತಯಾರಿಸಲಾಗಿದೆ. ಇಳಿಜಾರು ಮೂಲೆಗಳನ್ನು ಹೊಂದಿದೆ. ಮುಂಭಾಗದಲ್ಲಿ ಫಿಜಿಕಲ್ ಹೋಮ್ ಬಟನ್‌ನಡಿ ಬೆರಳಚ್ಚು ಸೆನ್ಸರ್ ಇದೆ.

ಡಾಲ್ಬಿ ಅಟ್ಮಸ್‌ನೊಂದಿಗೆ ಬಿಲ್ಟ್-ಇನ್ ಪವರ್ ಆ್ಯಂಪ್ಲಿಫೈಯರ್ ಚಿಪ್ ಇದ್ದು, ಇದು ಫೋನಿನ ಡ್ಯುಯಲ್ ಸ್ಪೀಕರ್ ಸಿಸ್ಟಮ್‌ಗೆ ವಿದ್ಯುತ್ ಪೂರೈಸುತ್ತದೆ.

ಫಾಸ್ಟ್ ಚಾರ್ಜಿಂಗ್ ಮತ್ತು ಆಂಡ್ರಾಯ್ಡಾ ಬ್ಯಾಟರಿ ನಿರ್ವಹಣೆಯನ್ನು ಬೆಂಬಲಿಸುತ್ತದೆ. ಗರಿಷ್ಠ 22 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಅವಧಿಯನ್ನು ಹೊಂದಿದೆ. ಸೆನ್ಸರ್ ಲೈಟ್ ಸೆನ್ಸರ್,ಪ್ರಾಕ್ಸಿಮಿಟಿ ಸೆನ್ಸರ್,ಆ್ಯಕ್ಸಿಲೊಮೀಟರ್,ಇಲೆಕ್ಟ್ರಾನಿಕ್ ಕಂಪಾಸ್ ಮತ್ತು ಗೈರೋಸ್ಕೋಪ್ ಇವುಗಳನ್ನು ಒಳಗೊಂಡಿದೆ.

ಖರೀದಿ ಹೇಗೆ?

ಸದ್ಯಕ್ಕೆ ನೋಕಿಯಾ-6 ಚೀನಾದಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿದೆ. ವಿಶ್ವಾದ್ಯಂತ ಯಾವಾಗ ಬಿಡುಗಡೆಗೊಳ್ಳಿಲಿದೆ ಎಂಬ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಎಚ್‌ಎಂಡಿ ಗ್ಲೋಬಲ್ ಖಂಡಿತವಾಗಿಯೂ ನೋಕಿಯಾ ಆಂಡ್ರಾಯ್ಡಾನ್ನು ಚೀನಾದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿಡುವುದಿಲ್ಲ.

ಭಾರತದಲ್ಲಿ ಬೆಲೆ: ಚೀನಾದಲ್ಲಿ ಇದರ ಬೆಲೆಯನ್ನು 1,699 ಯುವಾನ್‌ಗಳಿಗೆ ನಿಗದಿಗೊಳಿಸಲಾಗಿದೆ. ಅಂದರೆ ನಮ್ಮ ಲೆಕ್ಕಾಚಾರದಲ್ಲಿ ಸುಮಾರು 16,739 ರೂ. ಅದು ಅಂತಿಮವಾಗಿ ಭಾರತದಲ್ಲಿ ಬಿಡುಗಡೆಗೊಂಡಾಗ ಈ ಬೆಲೆಯಲ್ಲಿ ಹೆಚ್ಚುಕಡಿಮೆಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News