ಫೇಸ್‌ಬುಕ್‌ನಲ್ಲಿ ಸದ್ದಿಲ್ಲದೇ ಬಂದಿದೆ ಒಂದು ವಿಶೇಷ ಫೀಚರ್
ಹೊಸದಿಲ್ಲಿ: ಫೇಸ್‌ಬುಕ್ ಬಳಕೆದಾರರಿಗೆ ಇದು ಇಷ್ಟವಾಗುವ ಸುದ್ದಿ. ಇನ್ನು ಮುಂದೆ ಫೇಸ್‌ಬುಕ್ ಬಳಕೆದಾರರು ಹೆಚ್ಚು ಹೆಚ್ಚು ಅಂಶಗಳನ್ನು ಶೇರ್ ಮಾಡಲು ಸಾಧ್ಯ. ಇತರ ವೆಬ್‌ಸೈಟ್‌ಗಳಿಗೆ ಇರುವ ಲಿಂಕ್, ಫೋಟೊ ಹಾಗೂ ಸ್ಟೇಟಸ್ ಮೆಸೇಜ್ ಮಾತ್ರವಲ್ಲದೇ, ಒಂದು ಪೋಸ್ಟ್ ಬಗ್ಗೆ ಮಾಡಿರುವ ವೈಯಕ್ತಿಕ ಕಾಮೆಂಟ್‌ಗಳನ್ನು ಕೂಡಾ ಶೇರ್ ಮಾಡಲು ಸಾಧ್ಯವಾಗಲಿದೆ.
ಮ್ಯಾಟ್ ನವರ್ರಾ ಎಂಬ ವೆಬ್‌ಸೈಟ್ ಮೊಟ್ಟಮೊದಲ ಬಾರಿಗೆ ಇದನ್ನು ಗುರುತಿಸಿದ್ದು, ಇದೀಗ ಫೇಸ್‌ಬುಕ್‌ನಲ್ಲಿ ಹೊಸ ಶೇರ್ ಆಯ್ಕೆ ಪ್ರತಿ ಕಾಮೆಂಟ್‌ನೊಂದಿಗೂ ಇರುತ್ತದೆ. ಇದರ ಜತೆಗೆ ಮಾಮೂಲಿ ಇರುವ ಲೈಕ್ ಹಾಗೂ ರಿಪ್ಲೈ ಆಯ್ಕೆಗಳು ಇವೆ. ಈ ಕಾಮೆಂಟ್‌ಗಳು ಫೇಸ್‌ಬುಕ್ ನ್ಯೂಸ್‌ಫೀಡ್‌ನಲ್ಲಿ ಇತರ ಪೋಸ್ಟ್‌ಗಳಂತೆಯೇ ಬರಲಿದೆ.
ಈ ಶೇರ್ ಮಾಡಲಾದ ಕಾಮೆಂಟ್, ಮೊಟ್ಟಮೊದಲ ಬಾರಿಗೆ ಪೋಸ್ಟ್ ಮಾಡಿದ ಬಳಕೆದಾರರ ಪ್ರೊಫೈಲ್‌ಗೆ ಸಂಪರ್ಕ ಕಲ್ಪಿಸುವ ಲಿಂಕ್ ಕೂಡಾ ಹೊಂದಿರುತ್ತದೆ. ಆದರೆ ಈ ಹೊಸ ಫೀಚರ್ ಕೆಲ ಮಂದಿಗಷ್ಟೇ ಗೊತ್ತಿದ್ದು, ಹಲವರು ಇದನ್ನು ಪರೀಕ್ಷಿಸುತ್ತಿದ್ದಾರೆ. ದೊಡ್ಡಸಂಖ್ಯೆಯ ಖಾತೆದಾರರಿಗೆ ಇನ್ನೂ ಇದರ ಕಲ್ಪನೆ ಇಲ್ಲ.
ಇತ್ತೀಚೆಗೆ ಕಂಪನಿಯು ಮತ್ತೊಂದು ಬದಲಾವಣೆಯನ್ನೂ ತನ್ನ ಪ್ಲಾಟ್‌ಫಾರಂನಲ್ಲಿ ಮಾಡಿದ್ದು, ಪೋಸ್ಟ್‌ಗಳಿಂದ ಎಡಿಟೆಡ್ ಎಂಬ ಟ್ಯಾಗ್ ಅನ್ನು ಕಿತ್ತುಹಾಕಿದೆ. ಆದ್ದರಿಂದ ಇದು ಮೂಲ ಪೋಸ್ಟ್ ಆಗಿದೆಯೇ ಅಥವಾ ಇದನ್ನು ತಿದ್ದಿ ಬಳಿಕ ಹಾಕಲಾಗಿದೆಯೇ ಎಂದು ತಿಳಿಯುವುದು ಕಷ್ಟವಾಗಲಿದೆ.