ಕಾರವಾರ: ಅವೈಜ್ಞಾನಿಕ ಹೂಳು ಎತ್ತುವ ಕಾರ್ಯದಿಂದ ವಿನಾಶದತ್ತ ಕಡಲ ಜೀವಿಗಳು...

Update: 2017-02-09 17:41 GMT

ಕಾರವಾರ, ಫೆ.9: ನಗರದ ಟಾಗೋರ ಕಡಲ ತೀರದಲ್ಲಿ ಕಳೆದ ಎರಡು ದಿನದಿಂದ ನೀಲಿಕಲ್ಲು ಸೇರಿದಂತೆ ವಿವಿಧ ಕಡಲ ಜೀವಿಗಳ ಅವಶೇಷಗಳು ರಾಶಿಯಾಗಿ ಬಂದು ಸಂಗ್ರಹವಾಗುತ್ತಿವೆೆ.

ನೀಲಿಕಲ್ಲಿಗಳು,ಚಿಪ್ಪಿ,ಏಡಿ ಸೇರಿದಂತೆ ಹಲವು ಬಗೆಯ ಕಡಲ ಜೀವಿಗಳ ಚಿಪ್ಪಿಗಳು ಕಡಲ ತೀರದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿವೆ.ಅಪರೂಪವಾಗುತ್ತಿರುವ ನೀಲಿಕಲ್ಲಿನ ಸಣ್ಣ ಪ್ರಮಾಣದ ಚಿಪ್ಪಿಗಳು ಸೇರಿದಂತೆ ಹಲವು ಬಗೆಯ ಚಿಪ್ಪಿಕಲ್ಲು ಜಾತಿಗೆ ಸೇರಿದ ಜೀವಿಗಳು ಕಡಲತೀರದ ದಿವೇಕರ್ ಕಾಲೇಜಿನ ಹಿಂಭಾಗ,ಆರ್‌ಟಿಓ ಕಚೇರಿಯ ಎದುರಿನ ಕಡಲ ತೀರದಲ್ಲಿ ಬಂದು ರಾಶಿಯಾಗಿವೆ. ದಿನಬೆಳಗಾಗುವುದರೊಳಗೆ ಇಷ್ಟೊಂದು ಪ್ರಮಾಣದಲ್ಲಿ ಸತ್ತಿರುವುದಕ್ಕೆ ಮೀನುಗಾರರು ಸೇರಿದಂತೆ ಕಡಲಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.


ಕೆಲವು ತಿಂಗಳುಗಳಿಂದ ಸಮುದ್ರದಲ್ಲಿ ಬಂದರು ವಿಸ್ತರಣೆಗೆ ದೊಡ್ಡ ದೊಡ್ಡ ಯಂತ್ರಗಳ ಮೂಲಕ ಅವೈಜ್ಞಾನಿಕವಾಗಿ ಹೂಳು ಎತ್ತುವ ಕಾರ್ಯದಿಂದಾಗಿ ಈ ರೀತಿ ಜೀವಿಗಳು ಸಾಯುತ್ತಿವೆ ಎನ್ನಲಾಗುತ್ತಿದೆ. ಹೂಳೆತ್ತುವಾಗ ಈ ಯಂತ್ರಗಳು ನೀರಿನಾಳದಲ್ಲಿ ಜೋರಾಗಿ ಹೂಳನ್ನು ಎಳೆದುಕೊಳ್ಳುತ್ತದೆ.ಈ ವೇಳೆ ನೀರಿನಲ್ಲಿ ಯಂತ್ರದಿಂದ ಬೀಡುಗಡೆಯಾಗುವ ಹೈಡ್ರೋಜನ್ ಸಲ್ಪೈಡ್, ಮಿಥೆನ್ ಇನ್ನಿತರ ರಾಸಾ ಯಿನಿಕ ಬೀಡುಗಡೆಯಾದಾಗ ಹಾಗೂ ಅದರ ರಭಸಕ್ಕೆ ಈ ಜೀವಿಗಳಿಗೆ ಸರಿಯಾಗಿ ಆಮ್ಲಜನಕ ದೊರೆಯದೆ ಸತ್ತಿರಬಹುದು ಎಂದು ಕಡಲ ವಿಜ್ಞಾನಿ ಡಾ. ವಿ. ಎನ್. ನಾಯ್ಕ ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಹಲವು ವರ್ಷಗಳ ಹಿಂದೆ ಅದಿರು ಸಾಗಿಸಲು ಹಡಗುಗಸಂಚಾರ ಹೆಚ್ಚಾಗಿತ್ತು.ಆ ಸಂದರ್ಭದಲ್ಲಿ ಹಡಗುಗಳಿಂದ ಬಿದ್ದ ತೈಲ ಹಾಗೂ ಇನ್ನಿತರ ಕೆಮಿಕಲ್ ನೀರಿನ ತಳಭಾಗ ಸೇರಿ ಹೂಳು ತುಂಬಿಕೊಂಡಿತ್ತು.ಇದೀಗ ಹೂಳೆತ್ತುವ ರಭಸಕ್ಕೆ ಅದು ನೀರಿನೊಂದಿಗೆ ಬೆರೆತಿದೆ. ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಹೆಚ್ಚಿನೆ ಹಡಗುಗಳ ಓಡಾಟವಿಲ್ಲದೆ ಬೆಳವಣಿಗೆ ಹೊಂದಿದ್ದ ಜೀವಿಗಳು ಇದೀಗ ಯಂತ್ರಗಳು ಹೂಳೆತ್ತುವ ರಭಸಕ್ಕೆ ಅದರಲ್ಲಿದ್ದ ಕೆಮಿಕಲ್‌ಕಾರಕಗಳು ನೀರಿನೊಂದಿಗೆ ಮಿಶ್ರಿತವಾಗಿ ಸತ್ತಿರಬಹುದು ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಪ್ರತೀ ಹುಣ್ಣಿಮೆ ಹಾಗೂ ಅಮಾವಾಸ್ಯೆ ಸಮಯದಲ್ಲಿ ಸಮುದ್ರದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗುತ್ತದೆ. ನೀಲಿಕಲ್ಲುಗಳು ಹೆಚ್ಚಾಗಿ ಸಮುದ್ರದೊಳಗಿನ ಬಂಡೆಕಲ್ಲುಗಳಿಗೆ ಅಂಟಿಕೊಂಡು ಬೆಳೆಯುತ್ತವೆ. ರಭಸವಾಗಿ ಬಂಡೆಗಲ್ಲುಗಳಿಗೆ ಬಡಿಯುವ ತೆರೆಗಳಿಂದ ಚಿಕ್ಕ ಗಾತ್ರದ ನೀಲಿ ಕಲ್ಲುಗಳು ಗಟ್ಟಿಯಾಗಿ ಅಂಟಿಕೊಳ್ಳಲಿಕ್ಕಾಗದೇ ಉದುರಿ ಬೀಳುತ್ತವೆ. ಇದರಿಂದಲೂ ದಡದಲ್ಲಿ ರಾಶಿಯಾಗಿರಬಹುದು ಎಂದು ಸ್ಥಳೀಯರು,ಮೀನುಗಾರರು ಹೇಳುತ್ತಿದ್ದಾರೆ.


 ನೀರು ಸರಬರಾಜಿಗೆ ತಾಂತ್ರಿಕ ಅಡಚಣೆ: ಯೋಜನೆ ಪ್ರದೇಶದಲ್ಲಿ ಕಳ್ಳತನ ಕುಂಡಾಮೇಸ್ತ್ರಿ ಯೋಜನೆಯ ಪ್ರದೇಶದಲ್ಲಿ ಟ್ರಾನ್ಸ್‌ಫಾರ್ಮರ್‌ಗೆ ಸಂಪರ್ಕ ಕಲ್ಪಿಸುವ ಕಾಪರ್ ವಯರ್ ಕಳ್ಳತನವಾಗಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೋಟಾರ್‌ಗೆ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ಕೂಟುಹೊಳೆಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ನಗರದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಕೂಟುಹೊಳೆ ಹಾಗೂ ಕುಂಡಾಮೇಸ್ತ್ರಿ ಯೋಜನೆಯ ಪ್ರದೇಶಕ್ಕೆ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಭೇಟಿ ನೀಡಿ ನೀರಿನ ಮಟ್ಟವನ್ನು ಅವಲೋಕಿಸಿದ್ದಾರೆ. 

Writer - ಶ್ರೀನಿವಾಸ್ ಬಾಡ್ಕರ್

contributor

Editor - ಶ್ರೀನಿವಾಸ್ ಬಾಡ್ಕರ್

contributor

Similar News