ಕೋಲ್ಕತಾದ ಮೆಕ್ ಡೊನಾಲ್ಡ್‌ನಲ್ಲಿ ಫ್ರೆಂಚ್ ಫ್ರೈ ಜೊತೆಗೆ ಡೀಪ್ ಫ್ರೈಡ್ ಹಲ್ಲಿ ಉಚಿತ...!

Update: 2017-03-02 18:24 GMT

ಕೋಲ್ಕತಾ,ಮಾ.2: ಫಾಸ್ಟ್‌ಫುಡ್ ಐಟಂ ತಿನ್ನಲು ನಗರದಲ್ಲಿಯ ಮೆಕ್ ಡೊನಾಲ್ಡ್ ರೆಸ್ಟೋರಂಟ್‌ಗೆ ತೆರಳಿದ್ದ ಆ ಕುಟುಂಬಕ್ಕೆ ಅದೊಂದು ದುಃಸ್ವಪ್ನವಾಗಿ ಪರಿಣಮಿಸಿದೆ. ತಾವು ತುಂಬ ಆಸೆಯಿಂದ ಆರ್ಡರ್ ಮಾಡಿದ್ದ ಫ್ರೆಂಚ್ ಫ್ರೈ ತಿನ್ನಲು ಮುಂದಾಗಿದ್ದ ಅವರಿಗೆ ಡೀಪ್ ಫ್ರೈ ಆಗಿದ್ದ ಹಲ್ಲಿ ದರ್ಶನ ನೀಡಿದೆ.

ಕೋಲ್ಕತಾ ನಿವಾಸಿ ಪ್ರಿಯಾಂಕಾ ಮೊಯಿತ್ರಾ ಮಂಗಳವಾರ ಬೆಳಗ್ಗೆ ತನ್ನ ಮಗಳನ್ನು ಕರೆದುಕೊಂಡು ಇಎಂ ಬೈಪಾಸ್ ಬಳಿಯ ಮೆಕ್ ಡೊನಾಲ್ಡ್‌ಗೆ ತೆರಳಿದ್ದರು. ಮಗಳು ಫ್ರೆಂಚ್ ಫ್ರೈ ಎತ್ತಿಕೊಂಡು ತಿನ್ನಲು ಮುಂದಾದಾಗ ಡೀಪ್ ಫ್ರೈ ಆಗಿದ್ದ ಹಲ್ಲಿ ಕಂಡಿದೆ.
ಗರ್ಭಿಣಿಯಾಗಿರುವ ಪ್ರಿಯಾಂಕಾ ಸತ್ತ ಹಲ್ಲಿಯನ್ನು ಕಂಡ ತಕ್ಷಣ ಅಸ್ವಸ್ಥಗೊಂಡಿದ್ದರು. ಗರ್ಭದಲ್ಲಿರುವ ಮಗು ಮತ್ತು ಮಗಳ ಬಗ್ಗೆ ಕಳವಳಗೊಂಡ ಆಕೆ ಕೂಡಲೇ ಮ್ಯಾನೇಜರ್‌ಗೆ ತಿಳಿಸಿದ್ದಳು. ಆದರೆ ಮ್ಯಾನೇಜರ್ ಆ ಬಗ್ಗೆ ತಲೆ ಕೆಡಿಸಿಕೊಂಡಿಲಿಲ್ಲ. ಸಾರಿ ಎಂದಷ್ಟೇ ಹೇಳಿ ಅವರ ಟೇಬಲ್ ಬಳಿಯಿಂದ ಕಾಲು ಕಿತ್ತಿದ್ದ.
ಆಹಾರದಲ್ಲಿದ್ದ ಕರಿದ ಹಲ್ಲಿಯ ಚಿತ್ರವನ್ನು ಕ್ಲಿಕ್ಕಿಸಿದ ಪ್ರಿಯಾಂಕಾ ಮೆಕ್ ಡೊನಾಲ್ಡ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News